ನ.7ರಂದು ಸಂಶೋಧನ ಸಹಾಯಕರ ಹುದ್ದೆಗೆ ನೇರ ಸಂದರ್ಶನ
ಕೊಣಾಜೆ, ನ.2: ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಸಂಶೋಧನಾ ಕೇಂದ್ರದಲ್ಲಿ ಖಾಲಿ ಇರುವ ಮೂರು ಸಂಶೋಧನ ಸಹಾಯಕ ಹುದ್ದೆಗಳಿಗೆ ನೇರ ಸಂದರ್ಶನವು ನ.7ರಂದು ಬೆಳಗ್ಗೆ 10ಕ್ಕೆ ಮಂಗಳೂರು ವಿವಿಯ ಕುಲಪತಿಯವರ ಕಚೇರಿಯಲ್ಲಿ ನಡೆಯಲಿದೆ.
ಕಾಲಬದ್ಧ ಸಂಶೋಧನಾ ಯೋಜನೆಗಳಲ್ಲಿ ಕಾರ್ಯ ನಿರ್ವಹಿಸುವುದು ಮತ್ತು ಪ್ರಕಟನೆ, ಪ್ರಸರಣ ಮುಂತಾದ ಸಂಪಾದನೆ ಹಾಗೂ ಸಂಘಟನಾತ್ಮಕ ಕೆಲಸಗಳನ್ನು ನಿರ್ವಹಿಸುವುದು ಸಂಶೋಧನಾ ಸಹಾಯಕ ಹುದ್ದೆಯ ಪ್ರಧಾನ ಕರ್ತವ್ಯವಾಗಿರುತ್ತದೆ. ಸಂಶೋಧನ ಅನುಭವವಿರುವ ಅಭ್ಯರ್ಥಿಗಳಿಗೆ ವಿಶೇಷ ಆದ್ಯತೆಯನ್ನು ನೀಡಲಾಗುವುದು. ಪಿ.ಎಚ್‌ಡಿ. ಸಂಶೋಧನೆಗೆ ಅವಕಾಶವಿದೆ.
ಅರ್ಹತೆಗಳು: ಕನ್ನಡ, ಇಂಗ್ಲಿಷ್, ಹಿಂದಿ ಹಾಗೂ ಇತಿಹಾಸ, ರಾಜಕೀಯಶಾಸ್ತ್ರ, ಸಮಾಜಶಾಸ್ತ್ರ, ಸಮಾಜಕಾರ್ಯ ಹಾಗೂ ಪತ್ರಿಕೋದ್ಯಮ ಮತ್ತು ಸಂವಹನ ವಿಷಯಗಳಲ್ಲಿ ಅಂಗೀಕೃತ ವಿವಿಯಿಂದ ಸ್ನಾತಕೋತ್ತರ ಪದವಿ ಹೊಂದಿರುವ (ಕನಿಷ್ಠ 55 ಶೇ. ಅಂಕಗಳೊಂದಿಗೆ) ಅರ್ಹ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆ, ವರ್ಗ, ಅನುಭವ, ದೂರವಾಣಿ ಸಂಖ್ಯೆ ಇತ್ಯಾದಿ ಸ್ವವಿವರಗಳುಳ್ಳ ಅರ್ಜಿ, ಪ್ರಕಟನೆ, ಸಂಶೋಧನಾ ಅನುಭವದ ವಿವರ ಮತ್ತು ಶೈಕ್ಷಣಿಕ ದಾಖಲೆಗಳ ಜೆರಾಕ್ಸ್ ಪ್ರತಿ ಹಾಗೂ ಮೂಲದಾಖಲೆಗಳೊಂದಿಗೆ ನ.7ರಂದು ಬೆಳಗ್ಗೆ 10 ಗಂಟೆಗೆ ಕುಲಸಚಿವರ ಕಚೇರಿ, ಆಡಳಿತ ಸೌಧ, ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳ ಗಂಗೋತ್ರಿ-574199 ಇಲ್ಲಿ ನಡೆಯಲಿರುವ ಸಂದರ್ಶನಕ್ಕೆ ಹಾಜರಾಗಬೇಕು. ಆಯಾ ವಿಷಯ ಗಳಲ್ಲಿ ಡಾಕ್ಟರೇಟ್ ಪದವಿ ಪಡೆದಿರುವ ಅಭ್ಯರ್ಥಿಗಳು ಕೂಡಾ ಅರ್ಜಿ ಸಲ್ಲಿಸಬಹುದು ಎಂದು ಪ್ರಕಟನೆ ತಿಳಿಸಿದೆ.





