ರಾಜಸ್ಥಾನ: ವೈದ್ಯಕೀಯ ವಿದ್ಯಾರ್ಥಿಯ ಆತ್ಮಹತ್ಯೆ
ಜೈಪುರ, ನ.2: ರಾಜಸ್ಥಾನದ ಝಲಾವರ್ ಜಿಲ್ಲೆಯಲ್ಲಿ ವೈದ್ಯಕೀಯ ವಿದ್ಯರ್ಥಿಯೊಬ್ಬ ತನ್ನ ಮನೆಯ ಜಂತಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಪೊಲೀಸರಿಂದು ತಿಳಿಸಿದ್ದಾರೆ.
ಮೃತನನ್ನು 19ರ ಹರೆಯದ ಜನ್ವೇದ ರಾಯ್ಗರ್ ಎಂದು ಗುರುತಿಸಲಾಗಿದ್ದು, ಆತ ಝಲಾವರ್‌ನ ವೈದ್ಯಕೀಯ ಕಾಲೇಜೊಂದರಲ್ಲಿ ಮೊದಲ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಯಾಗಿದ್ದನು. ಕಡಿಮೆ ಅಂಕಗಳು ದೊರೆತ ಕಾರಣ ಜನ್ವೇದ್ ಮಾನಸಿಕ ಒತ್ತಡಕ್ಕೊಳಗಾಗಿ ನಿನ್ನೆ ರಾತ್ರಿ ತನ್ನ ಮನೆಯಲ್ಲಿ ಆತ್ಮಹತ್ಯೆಗೆ ಶರಣಾದನೆಂದು ಗಂಗ್ಧಾರ್ ಪೊಳೀಸ್ ಠಾಣೆಯ ಸ್ಥಾನಿಕ ಅಧಿಕಾರಿ ಬನ್ನಾಲಾಲ್ ವಿವರಿಸಿದ್ದಾರೆ.
ರಾಯ್ಗರ್‌ನ ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ವರ್ಗಾಯಿಸಿ, ಮರಣೋತ್ತರ ಪರೀಕ್ಷೆಯ ಬಳಿಕ ಕುಟುಂಬಕ್ಕೆ ಒಪ್ಪಿಸಲಾಗಿದೆ. ಘಟನೆಯ ಕುರಿತು ತನಿಖೆ ನಡೆಯುತ್ತಿದೆಯೆಂದು ಅವರು ತಿಳಿಸಿದ್ದಾರೆ.
Next Story





