ಮುಂಬೈ: ದೀಪಾವಳಿಯಲ್ಲಿ 42 ಅಗ್ನಿ ಅನಾಹುತಗಳು
ಮುಂಬೈ, ನ.2: ಪಟಾಕಿಗಳನ್ನು ಸಿಡಿಸುವಾಗ ಸ್ವಯಂ-ನಿಯಂತ್ರಣ ತೋರಿಸುವಂತೆ ನಗರ ನಿವಾಸಿಗಳಿಗೆ ಮನವಿ ಮಾಡಲಾಗಿದ್ದರೂ, ದೀಪಾವಳಿಯ ವೇಳೆ ಬೆಂಕಿ ಅನಾಹುತದ ಪ್ರಕರಣಗಳಲ್ಲಿ ಗಮನಾರ್ಹ ಇಳಿಕೆಯಾಗಿಲ್ಲವೆಂದು ಹಿರಿಯ ಅಗ್ನಿಶಾಮಕ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮುಂಬೈ ಮಹಾನಗರದಲ್ಲಿ ಈ ವರ್ಷ ಅ.25ರಿಂದ ನ.1ರ ವರೆಗೆ 42 ಅಗ್ನಿ ಅನಾಹುತಗಳು ವರದಿಯಾಗಿವೆ. ಅವುಗಳಲ್ಲಿ ಪಶ್ಚಿಮದ ಉಪನಗರಗಳಲ್ಲಿ 18, ಪೂರ್ವ ಉಪನಗರಗಳು ಹಾಗೂ ಮುಂಬೈ ನಗರದಲ್ಲಿ ತಲಾ 12 ಪ್ರಕರಣಗಳು ವರದಿಯಾಗಿವೆಯೆಂದು ಅಗ್ನಿ ಶಾಮಕ ಇಲಾಖೆಯ ಅಂಕಿ-ಅಂಶಗಳು ಬಹಿರಂಗಪಡಿಸಿವೆ.
ಕಳೆದ ವರ್ಷ 12 ದಿನಗಳ ಅವಧಿಯಲ್ಲಿ ಒಟ್ಟು 99 ಪ್ರಕರಣಗಳು ವರದಿಯಾಗಿದ್ದರೆ, ಈ ವರ್ಷ ಕೇವಲ 8 ದಿನಗಳ ಅವಧಿಯಲ್ಲಿ 42 ಬೆಂಕಿ ಅವಘಡಗಳ ಬಗ್ಗೆ ವರದಿಯಾಗಿದೆಯೆಂದು ಅಧಿಕಾರಿ ತಿಳಿಸಿದ್ದಾರೆ.
Next Story





