ನನ್ನ ಮಗ ಭಯೋತ್ಪಾದಕ ಅಲ್ಲ: ನಾನು ಹುತಾತ್ಮನ ತಾಯಿ
ಭೋಪಾಲ್ ‘ಎನ್ ಕೌಂಟರ್’
.jpg)
ಅಹ್ಮದಾಬಾದ್, ನ. 3: ಮೇರಾ ಬೇಟಾ ಆತಂಕ್‌ವಾದಿ ನಹೀಂ ಥಾ, ಮೇರಾ ಬೇಟಾ ಶಹೀದ್ ಹುವಾ, ಮೈ ಏಕ್ ಶಹೀದ್ ಕೀ ಮಾ ಹೂಂ" (ನನ್ನ ಮಗ ಭಯೋತ್ಪಾದಕ ಆಗಿರಲಿಲ್ಲ, ಅವನು ಹುತಾತ್ಮ. ನಾನು ಹುತಾತ್ಮನೊಬ್ಬನ ತಾಯಿಯಾಗಿರುವೆ)- ಪುತ್ರನನ್ನು ಪೊಲೀಸರು ಗುಂಡಿಟ್ಟು ಕೊಂದ ದುಃಖವನ್ನು ತಡೆಯಲಾಗದೆ ಮುಮ್ತಾಝ್ ಫರ್ವೀನ್‌ಶೇಖ್ ಹೀಗೆ ಹೇಳಿದ್ದಾರೆಂದು ವರದಿಯಾಗಿದೆ. ಇವರು, ಅಕ್ಟೋಬರ್ 31ರಂದು ಭೋಪಾಲ್ ಜೈಲಿನಿಂದ ತಪ್ಪಿಸಿಕೊಂಡರೆನ್ನಲಾದ ಎಂಟು ಮಂದಿಯಲ್ಲಿ ಒಬ್ಬನಾದ ಮುಜೀಬ್ ಶೇಖ್ ಎಂಬಾತನ ತಾಯಿಯಾಗಿದ್ದಾರೆ. ಮಗನ ಪಾರ್ಥಿವ ದೇಹ ದಫನ ಕಾರ್ಯ ಮುಗಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತಾಡುತ್ತಾ ಅವರು ತನ್ನ ದುಃಖವನ್ನು ಹೀಗೆ ತೋಡಿಕೊಂಡರು.
ಮಧ್ಯಪ್ರದೇಶ ಪೊಲೀಸರು ಮತ್ತು ಮಾಧ್ಯಮಗಳು ಪ್ರಚಾರ ಮಾಡುತ್ತಿರುವಂತೆ ತನ್ನ ಮಗ ಭಯೋತ್ಪಾದಕನಲ್ಲ. ನಿರಪರಾಧಿಯಾಗಿದ್ದಾನೆ. ಸುಳ್ಳು ಕೇಸಿನಲ್ಲಿ ಅವನನ್ನು ಸಿಲುಕಿಸಲಾಗಿತ್ತು. ಹಾಗಿದ್ದೂ ಪೊಲೀಸರು ಅವನನ್ನು ಎನ್‌ಕೌಂಟರ್‌ನಲ್ಲಿ ಸಾಯಿಸಿದರು ಎನ್ನುತ್ತಿದ್ದಂತೆ ಅವರಿಂದ ಅಳು ತಡೆಯಲಾಗಿಲ್ಲ. ಒಂದು ವಾಹನದಿಂದ ಇಳಿಸಿದ ಬಳಿಕ ತನ್ನ ಪುತ್ರನಿಗೆ ಗುಂಡಿಟ್ಟು ಸಾಯಿಸಿದ್ದಾರೆ ಎಂದು ಊರವರು ನನಗೆ ತಿಳಿಸಿದ್ದಾರೆಂದು ಮುಮ್ತಾಝ್ ಹೇಳಿದ್ದಾರೆ. ಮಗನ ಕೊಲೆಗಡುಕರಿಗೆ ಕಠಿಣ ಶಿಕ್ಷೆಯಾಗುವವರೆಗೂ ಕಾನೂನು ಹೋರಾಟದಲ್ಲಿ ತೊಡಗಿಸುವೆ ಎಂದೂ ಈ ಸಂದರ್ಭದಲ್ಲಿ ಅವರು ಹೇಳಿದ್ದಾರೆ.
ರಾಜ್ಯದ ಪಿಡಬ್ಲ್ಯೂ ಇಲಾಖೆಯಲ್ಲಿ ಮುಜೀಬ್‌ನ ತಂದೆ ಜಮೀಲ್ ಉದ್ಯೋಗಿಯಾಗಿದ್ದಾರೆ. ಭೋಪಾಲ್‌ನಿಂದ ಖಾಸಗಿ ಆ್ಯಂಬುಲೆನ್ಸ್‌ನಿಂದ ಮಗನ ಮೃತದೇಹವವನ್ನು ಕರೆತರುವಾಗ ತಮ್ಮ ಮುಂದಿನಿಂದ ಮತ್ತು ಹಿಂದಿನಿಂದ ಎರಡು ಪೊಲೀಸ್ ವಾಹನಗಳಿದ್ದವು ಮತ್ತು ಎಲ್ಲಿಯೂ ಆ್ಯಂಬುಲೆನ್ಸ್‌ನ್ನು ನಿಲ್ಲಿಸಲು ಬಿಡಲಿಲ್ಲ ಎಂದು ಮುಮ್ತಾಝ್ ಹೇಳಿದ್ದಾರೆ. ಮೂವತ್ತು ಕಿಲೋಮೀಟರ್ ಪ್ರಯಾಣಿಸಿದ ಬಳಿಕ ಗುಜರಾತ್ ಗಡಿ ದಾಹೋದ್‌ನಲ್ಲಿ ವಾಹನ ನಿಲ್ಲಿಸಿ ಸ್ವಲ್ಪ ನೀರು ಕುಡಿದೆವುಎಂದು ಮುಮ್ತಾಝ್ ಹೇಳಿದ್ದಾರೆ.
ಅಹ್ಮದಾಬಾದ್ ಬಾಂಬ್ ಸ್ಫೋಟ ಪ್ರಕರಣದಲ್ಲಿ 2008ರ ಜುಲೈಯಲ್ಲಿ ಮುಜೀಬ್ ವಿರುದ್ಧ ಕೇಸು ದಾಖಲಾಯಿತು ಎಂದು ಆತನ ವಕೀಲರಾದ ಡಿಡಿಪಠಾಣ್ ತಿಳಿಸಿದ್ದಾರೆ. ದರೋಡೆ, ಕಳ್ಳತನ, ಓರ್ವ ಕಾನ್‌ಸ್ಟೇಬಲ್‌ನ ಕೊಲೆ ಒಬ್ಬ ಪೊಲೀಸರನ ಕೊಲೆಯತ್ನ ಕೇಸು ಮುಜೀಬ್ ವಿರುದ್ಧ ಹೊರಿಸಲಾಗಿತ್ತು. ಆದರೆ ಅಹ್ಮದಾಬಾದ್ ಸ್ಫೋಟ ನಡೆಯುವ ಹೊತ್ತಿಗೆ ಗುಜರಾತ್‌ನ ಪ್ರಸಿದ್ಧ ಎಲ್‌ಡಿ ಕಾಲೇಜ್ ಆಫ್ ಇಂಜಿನಿಯರಿಂಗ್‌ನಲ್ಲಿ ಮುಜೀಬ್ ವ್ಯಾಸಂಗ ನಡೆಸುತ್ತಿದ್ದ. ಸ್ಫೋಟನಡೆದದ್ದರಿಂದ ಪೊಲೀಸರು ಬಂಧಿಸಬಹುದೆಂದು ಹೆದರಿ ಮುಜೀಬ್ ಅಡಗಿ ಕೂತಿದ್ದ. ಆನಂತರ ಆತನಿಗೆ ಕಲಿಕೆ ಮುಂದುವರಿಸಲು ಸಾಧ್ಯವಾಗಿರಲಿಲ್ಲ. ಯಾವಾಗಲೂ ಉದ್ದ ಗಡ್ಡ ಬಿಡುವುದು ಆತನ ಅಭ್ಯಾಸವಾಗಿತ್ತು ಮೃತದೇಹ ಲಭಿಸುವಾಗಲೂ ಆತ ಪೂರ್ಣ ಗಡ್ಡಧಾರಿಯಾಗಿ ಇದ್ದ.ಜೈಲು ತಪ್ಪಿಸಿದ್ದಾನೆ ಎಂದು ಹೇಳುವುದು ನಂಬಿಕೆಗರ್ಹವಲ್ಲ. ಮುಜೀಬ್ ಯಾವತ್ತೂ ಹೀಗೆ ಮಾಡಲು ಸಾಧ್ಯವಿಲ್ಲ ಎಂದು ವಕೀಲ ಡಿಡಿ ಪಠಾಣ್ ಹೇಳಿದ್ದಾರೆ. ಜೀನ್ಸ್, ಟೀಶರ್ಟ್, ಸ್ಪೋರ್ಟ್ಸ್ ಶೂ, ವಾಚ್ ಧರಿಸಿದ್ದ ರೀತಿಯಲ್ಲಿ ಮುಜೀಬ್‌ನ ಮೃತದೇಹವಿತ್ತು. ನಾವು ಆತನ ಜೀನ್ಸ್ ಟೀಶರ್ಟ್ ಜೈಲಿಗೆ ಹೋಗಿ ಕೊಟ್ಟೇ ಇಲ್ಲ. ಮರಣೋತ್ತರ ಪರೀಕ್ಷೆ ನಂತರ ಮೃತದೇಹವವನ್ನು ಸರಿಯಾಗಿ ಹೊಲಿಯದಿರುವುದರಿಂದ ಅದರಿಂದ ರಕ್ತಸುರಿಯುತ್ತಿತ್ತು. ನಂತರ ಇನ್ನೋರ್ವ ವೈದ್ಯರ ಸಹಾಯದಿಂದ ಆಗಾಯಕ್ಕೆ ಹೊಲಿಗೆ ಹಾಕಿಸಲಾಯಿತು ಎಂದು ಪಠಾಣ್ ತಿಳಿಸಿದ್ದಾರೆಂದು ವರದಿಯಾಗಿದೆ.







