Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. 11 ಮಹಡಿಗಳ ಕಟ್ಟಡ ಎಷ್ಟು ಸೆಕೆಂಡುಗಳಲ್ಲಿ...

11 ಮಹಡಿಗಳ ಕಟ್ಟಡ ಎಷ್ಟು ಸೆಕೆಂಡುಗಳಲ್ಲಿ ನೆಲಸಮವಾಯಿತು ನೋಡಿ!

ವಾರ್ತಾಭಾರತಿವಾರ್ತಾಭಾರತಿ3 Nov 2016 12:01 PM IST
share
11 ಮಹಡಿಗಳ ಕಟ್ಟಡ ಎಷ್ಟು ಸೆಕೆಂಡುಗಳಲ್ಲಿ ನೆಲಸಮವಾಯಿತು ನೋಡಿ!

ಚೆನ್ನೈನ ಮೌಳಿವಕ್ಕಂನಲ್ಲಿ 11 ಮಹಡಿಯ ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಕುಸಿದು ಬಿದ್ದು 61 ಮಂದಿ ಪ್ರಾಣ ಕಳೆದುಕೊಂಡು ಎರಡೂವರೆ ವರ್ಷದ ಬಳಿಕ ಅದರ ಅವಳಿ ಕಟ್ಟಡವನ್ನೂ ಈಗ ಮೂರೇ ಸೆಕೆಂಡುಗಳಲ್ಲಿ ನಷ್ಟಮಾಡಲಾಗಿದೆ.

ಈ ಕಟ್ಟಡವನ್ನು ಆರಂಭದಲ್ಲಿ ಸಂಜೆ 2ರಿಂದ 4 ಗಂಟೆ ಸಮಯದಲ್ಲಿ ಉರುಳಿಸುವುದು ಎಂದು ಉದ್ದೇಶಿಸಿದ್ದರೂ, ತಾಂತ್ರಿಕ ಸಮಸ್ಯೆಗಳಿಂದ ಸಂಜೆ 6.25 ಗಂಟೆಗೆ ನಾಶ ಮಾಡಲಾಗಿದೆ. ಕಾಂಚೀಪುರಂ ಜಿಲ್ಲೆಯ ಆಡಳಿತ ಮತ್ತು ಚೆನ್ನೈ ನಗರ ಪೊಲೀಸರು ಹಲವು ಸುರಕ್ಷಾ ಕ್ರಮಗಳನ್ನು ಈ ಕಟ್ಟಡ ನಾಶದ ಸಂದರ್ಭ ಕೈಗೊಂಡಿದೆ. ಈ ಕಟ್ಟಡದ 100 ಮೀಟರ್ ಆಸುಪಾಸಿನಲ್ಲಿ ನೆಲೆಸಿರುವ ಜನರಿಗೆ ಮದುವೆ ಹಾಲ್ ಒಂದರಲ್ಲಿ ಇರಿಸಲಾಗಿತ್ತು. ಮಂಗಳವಾರ ಮತ್ತು ಬುಧವಾರ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಪೊಲೀಸರು ಪೊರೂರ್-ಕುಂದ್ರತ್ತೂರ್ ರಸ್ತೆಯಲ್ಲಿ ಸಾರಿಗೆ ನಿಷೇಧಿಸಿದ್ದರು.

ನಂಬಿಕೆ ಉರುಳಿದ್ದು ಹೇಗೆ?

 2014 ಜೂನ್ 28ರಂದು ಕುಸಿದು ಬಿದ್ದಿದ್ದ ಅಪಾರ್ಟ್‌ಮೆಂಟ್ ಕಟ್ಟಡದ ಹೆಸರೇ 'ಫೈತ್'. ಇದನ್ನು ಮೌಳಿವಕ್ಕಂನಲ್ಲಿ ಮಧುರೈ ಮೂಲದ ಪ್ರೈಮ್ ಸೃಷ್ಟಿ ಹೌಸಿಂಗ್ ಪ್ರೈವೇಟ್ ಲಿಮಿಟೆಡ್ ನಿರ್ಮಿಸಿದೆ. ಕಟ್ಟಡ ಮಳೆಗೆ ಕುಸಿದು ಬಿದ್ದು ಹಲವು ಕಾರ್ಮಿಕರು ಸಾವಿಗೀಡಾಗಿದ್ದರು. ಸುಪ್ರೀಂಕೋರ್ಟ್ ನಂತರ 'ಬಿಲೀಫ್‌' ಎನ್ನುವ ಇದರ ಅವಳಿ ಕಟ್ಟಡವನ್ನೂ ಉರುಳಿಸುವಂತೆ ಆದೇಶಿಸಿತ್ತು. ಸುಪ್ರೀಂಕೋರ್ಟ್‌ನ ಮೂವರು ಸದಸ್ಯರ ಪೀಠ ಅವಳಿ ಕಟ್ಟಡದಲ್ಲೂ ಹಲವು ಕೊರತೆಗಳಿರುವುದನ್ನು ಕಂಡಿತ್ತು. ಈ ಹಿನ್ನೆಲೆಯಲ್ಲಿ ಕಂಚೀಪುರಂ ಜಿಲ್ಲಾಡಳಿತ ಕಟ್ಟಡವನ್ನೇ ಉರುಳಿಸಲು ತೀರ್ಮಾನಿಸಿತ್ತು. ಆದರೆ ಬಿಲ್ಡರ್ ಮದ್ರಾಸ್ ಹೈಕೋರ್ಟ್‌ನಲ್ಲಿ ಆದೇಶ ತಡೆಹಿಡಿಯುವಂತೆ ಹೇಳಿತ್ತು. ಕಟ್ಟಡ ನಿರ್ಮಾಣ ಸಂಸ್ಥೆ ಮತ್ತು ತಮಿಳುನಾಡು ಸರ್ಕಾರದ ನಡುವೆ ತಿಂಗಳ ಕಾಲ ನಡೆದ ಕಾನೂನು ಸಮರದ ಬಳಿಕ ನ್ಯಾಯಾಲಯ ಕಟ್ಟಡ ನಾಶ ಮಾಡಲು ಒಪ್ಪಿಗೆ ನೀಡಿತು. ನಂತರ ಬಿಲ್ಡರ್ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಹಾಕಿದಾಗ ಮೇ 12ರಂದು ಕಟ್ಟಡ ನಾಶಕ್ಕೆ ಅದು ಆದೇಶಿಸಿತ್ತು.

ಕಾಂಚೀಪುರಂ ಜಿಲ್ಲಾಧಿಕಾರಿ ಚೆನ್ನೈ ಮೆಟ್ರೋಪೊಲಿಟನ್ ಅಭಿವೃದ್ಧಿ ಪ್ರಾಧಿಕಾರಕ್ಕೆ ಕಟ್ಟಡ ನಾಶದ ಪ್ರಕ್ರಿಯೆ ನಡೆಸುವಂತೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಯೋಜನಾ ಸಮಿತಿ ತಿರುಪುರ್ ಮೂಲದ ಮಾಗ್ಲಿಂಕ್ ಇನ್ಫ್ರಾ ಪ್ರಾಜೆಕ್ಟ್ ಅನ್ನು ಕಟ್ಟಡನಾಶಕ್ಕೆ ನೇಮಿಸಿತು. ಈಗ ಕಟ್ಟಡ ನಾಶಕ್ಕೆ ಒಟ್ಟು ರು. 50 ಲಕ್ಷ ವೆಚ್ಚವಾಗಿದೆ.

#Moulivakkam Building is Demolished in Just 10 seconds !!! #moulivakkambuilding pic.twitter.com/yjlSbK54Ah

— Vasanth Tamil (@VasanthTamil_) November 2, 2016

ಕೃಪೆ: timesofindia.indiatimes.com

share
ವಾರ್ತಾಭಾರತಿ
ವಾರ್ತಾಭಾರತಿ
Next Story
X