Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಆಗ ವೇಟರ್, ಈಗ ಐಎಎಸ್ ಅಧಿಕಾರಿ !

ಆಗ ವೇಟರ್, ಈಗ ಐಎಎಸ್ ಅಧಿಕಾರಿ !

ವಾರ್ತಾಭಾರತಿವಾರ್ತಾಭಾರತಿ3 Nov 2016 12:52 PM IST
share
ಆಗ ವೇಟರ್, ಈಗ ಐಎಎಸ್ ಅಧಿಕಾರಿ !

# ಛಲ, ಸತತ ಪರಿಶ್ರಮಕ್ಕೆ ಇನ್ನೊಂದು ಹೆಸರು ಜಯಗಣೇಶ
# 6 ಬಾರಿ ವಿಫಲವಾದರೂ ಬಿಡಲಿಲ್ಲ ಪ್ರಯತ್ನ

ನವದೆಹಲಿ, ನ.3: ಒಂದೊಮ್ಮೆ ವೇಟರ್ ಆಗಿ ಕೆಲಸ ಮಾಡಿದ್ದ ಯುವಕನೊಬ್ಬ ಆರು ಸತತ ವಿಫಲ ಯತ್ನಗಳ ಬಳಿಕ ಕೊನೆಯ ಯತ್ನದಲ್ಲಿ ಸಫಲತೆ ಸಾಧಿಸಿ ಇದೀಗ ಐಎಎಸ್ ಅಧಿಕಾರಿಯಾದ ರೋಚಕ ಹಾಗೂ ಸ್ಫೂರ್ತಿದಾಯಕ ಕಥೆಯಿದು. ಛಲ, ಸತತ ಪರಿಶ್ರಮಕ್ಕೆ ಇನ್ನೊಂದು ಹೆಸರೇ ಈ ಯುವಕ.

ತಮಿಳುನಾಡಿನ ವೆಲ್ಲೂರು ಜಿಲ್ಲೆಯ ವಿನಯಮಂಗಳಂ ಎಂಬ ಗ್ರಾಮದ ಈ ಯುವಕನ ಹೆಸರು ಕೆ. ಜಯಗಣೇಶ್. ಆತನ ತಂದೆಚರ್ಮದ ಫ್ಯಾಕ್ಟರಿಯೊಂದರಲ್ಲಿ ಉದ್ಯೋಗಿಯಾಗಿದ್ದು, ತಾಯಿ ಗೃಹಿಣಿಯಾಗಿದ್ದಾರೆ. ಇಬ್ಬರು ಸಹೋದರರು ಹಾಗೂ ಒಬ್ಬಳು ಸಹೋದರಿಗೆ ಈತನೇ ಹಿರಿಯ ಸಹೋದರ. ಅವರ ತಂದೆ ಕೇವಲ ಮೆಟ್ರಿಕ್ ತನಕ ವಿದ್ಯಾಭ್ಯಾಸ ಪಡೆದವರಾಗಿದ್ದುದರಿಂದ ತಮ್ಮ ಮಕ್ಕಳು ಹೆಚ್ಚಿನ ವಿದ್ಯಾಭ್ಯಾಸ ಪಡೆಯಬೇಕೆಂದು ಸದಾ ಬಯಸಿದರು. ಗ್ರಾಮದ ಶಾಲೆಯಲ್ಲಿ ಎಂಟನೆ ತರಗತಿಯ ತನಕ ಕಲಿತ ಜಯಗಣೇಶ ನೆರೆಂು ಪಟ್ಟಣದ ಶಾಲೆಯೊಂದರಲ್ಲಿ 10ನೆ ತರಗತಿ ಪೂರೈಸಿದರು. ಕಲಿಯುವುದರಲ್ಲಿ ಸದಾ ಮುಂದಿದ್ದ ಜಯಗಣೇಶ್ ಯಾವತ್ತೂ ತರಗತಿಯಲ್ಲಿ ಮೊದಲಿಗರಾಗಿದ್ದರು. ಮುಂದೆ ಪಾಲಿಟೆಕ್ನಿಕ್ ಸೇರಿದ ಅವರಿಗೆ ನಂತರ ಸರಕಾರಿ ಇಂಜಿನಿಯರಿಂಗ್ ಕಾಲೇಜೊಂದರಲ್ಲಿ ಪ್ರವೇಶಾತಿ ದೊರೆತು ಮೆಕ್ಯಾನಿಕಲ್ ಇಂಜಿನಿಯರಿಂಗ್ ಕಲಿತರು. ನಂತರ ಬೆಂಗಳೂರಿಗೆ ಹೋಗಿ ಉದ್ಯೋಗವೊಂದನ್ನು ಪಡೆದುಕೊಂಡರೂ ಅವರ ಮನಸ್ಸು ಸದಾ ತಮ್ಮ ಊರಿನಲ್ಲಿಯೇ ನೆಲೆಸಿತ್ತು. ತಮ್ಮ ಗ್ರಾಮದ ಜನರಿಗೆ ಸಹಾಯ ಮಾಡಬೇಕೆಂಬ ತುಡಿತ ಅವರಲ್ಲಿತ್ತು.
ಸ್ನೇಹಿತರೊಬ್ಬರಿಂದ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯ ಬಗ್ಗೆ ತಿಳಿದುಕೊಂಡ ಅವರು ಅದಕ್ಕೆ ತಯಾರಿ ನಡೆಸಲು ಆರಂಭಿಸಿದರು. ತಂದೆ ಕೂಡ ಅವರಿಗೆ ಪುಸ್ತಕಗಳನ್ನು ಖರೀದಿಸಿ ಕೊಟ್ಟು ಸಹಾಯ ಮಾಡಿದರು. ಹೆಚ್ಚನ ಜ್ಞಾನವಿಲ್ಲದೆ ಮೊದಲ ಎರಡು ಪ್ರಯತ್ನಗಳಲ್ಲಿ ವಿಫಲರಾದ ಅವರು ಸಮಾಜಶಾಸ್ತ್ರವನ್ನು ತಮ್ಮ ಮೂರನೇ ಪ್ರಯತ್ನಕ್ಕೆ ಆಯ್ದುಕೊಂಡರೂ ಅದರಲ್ಲೂ ವಿಫಲರಾದರು.
ಮುಂದೆ ಸರಕಾರ ಚೆನ್ನೈನಲ್ಲಿ ನಡೆಸುತ್ತಿದ್ದ ಉಚಿತ ಕೋಚಿಂಗ್ ತರಗತಿಗಳಿಗೆ ಪ್ರವೇಶ ಪಡೆದು ಪೂರ್ಣ ಪ್ರಮಾಣದಲ್ಲಿಅಭ್ಯಸಿಸಲು ಆರಂಭಿಸಿದರು. ಅಲ್ಲಿ ಕೋಚಿಂಗ್ ಪಡೆದು ಪ್ರಿಲಿಮಿನರಿ ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರಕ್ಯಾಂಟೀನ್ ಒಂದರಲ್ಲಿ ಬಿಲ್ಲಿಂಗ್ ಕ್ಲರ್ಕ್ ಆಗಿ ಕೆಲಸಕ್ಕೆ ಸೇರಿದರು. ಕ್ಯಾಂಟೀನಿನಲ್ಲಿ ಗ್ರಾಹಕರು ಹೆಚ್ಚಿದ್ದ ಸಮಯ ವೇಟರ್ ಆಗಿಂುೂ ಕಾರ್ಯ ನಿರ್ವಹಿಸಿದರು. ಆರನೆ ಪ್ರಯತ್ನದಲ್ಲಿ ಪ್ರಿಲಿಮಿನರಿ ಹಾಗೂ ಮುಖ್ಯ ಪರೀಕ್ಷೆಗಳೆರಡರಲ್ಲೂ ತೇರ್ಗಡೆ ಹೊಂದಿದರೂ ಸಂದರ್ಶನದಲ್ಲಿ ವಿಫಲರಾದರು. ಕೊನೆಯ ಪ್ರಯತ್ನದಲ್ಲಿ ಅವರಿಗೆ ಜಯ ದೊರೆತಿತ್ತಲ್ಲದೆ156ನೆ ರ್ಯಾಂಕ್ ಕೂಡ ಪಡೆದಿದ್ದಾರೆ.
ಅವರ ಛಲ ಹಾಗೂ ಅವರಲ್ಲಿನ ದೃಢತೆ ಸತತ ವೈಫಲ್ಯಗಳ ಹೊರತಾಗಿಯೂ ವಿಜಯ ಸಾಧಿಸುವಲ್ಲಿ ಅವರಿಗೆ ಸಹಾಯ ಮಾಡಿತೆಂಬುದು ನಿಸ್ಸಂಶಯ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X