ನೀವು ಯಾಕೆ ಟಿಪ್ಪು ಸುಲ್ತಾನ್ ಜಯಂತಿ ಆಚರಿಸುತ್ತಿದ್ದೀರಿ :ರಾಜ್ಯ ಸರಕಾರಕ್ಕೆ ಹೈಕೋರ್ಟ್ ಪ್ರಶ್ನೆ

ಬೆಂಗಳೂರು, ನ.3: ನೀವು ಯಾಕೆ ಟಿಪ್ಪು ಸುಲ್ತಾನ್ ಜಯಂತಿ ಆಚರಿಸುತ್ತಿದ್ದೀರಿ . ಟಿಪ್ಪು ಸುಲ್ತಾನ್ ಸ್ವಾತಂತ್ರ‍್ಯ ಹೋರಾಟಗಾರ ಎನ್ನುವುದು ಸರಿಯೆ ? ಎಂದು ರಾಜ್ಯ ಹೈಕೋರ್ಟ್ ರಾಜ್ಯ ಸರಕಾರವನ್ನು ಪ್ರಶ್ನಿಸಿದೆ.
ಟಿಪ್ಪು ಜಯಂತಿ ಆಚರಣೆಗೆ ಸಂಬಂಧಿಸಿ ರಾಜ್ಯ ಸರಕಾರದ ವಿರುದ್ಧ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇತ್ಯರ್ಥಪಡಿಸಿದ ಮುಖ್ಯ ನ್ಯಾಯಮೂರ್ತಿ ಎಸ್.ಕೆ. ಮೂರ್ತಿ ಅವರು ಟಿಪ್ಪು ಜಯಂತಿ ಆಚರಣೆಗೆ ಸಂಬಂಧಿಸಿ ಅಡ್ವೊಕೇಟ್ ಜನರಲ್ ಅವರಲ್ಲಿ ವಿವರಣೆ ಕೇಳಿದರು. ಆದರೆ ಅಡ್ವೊಕೇಟ್ ಜನರಲ್ ಅವರು ಕಾಲಾವಕಾಶ ಕೋರಿದರು.
ಸಜನ್ ಪೂವಯ್ಯ ಅವರು ಅರ್ಜಿದಾರರ ಪರ ವಾದ ಮಂಡಿಸಿ ದೇಶದ ಇತರ ರಾಜರುಗಳ ಜನ್ಮ ಜಯಂತಿ ಯಾಕಿಲ್ಲ ? ಎಂದು ಪಶ್ನಿಸಿದರು.
ನಾಳೆ ಬೆಳಗ್ಗೆ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸುವಂತೆ ಹೈಕೋರ್ಟ್ ಅರ್ಜಿದಾರರಿಗೆ ಸೂಚಿಸಿದೆ. ನ.8ರ ಮೊದಲು ಮನವಿ ಪರಿಶೀಲಿಸಿ ಕ್ರಮ ಕೈಕೊಳ್ಳುವಂತೆ ಮುಖ್ಯ ಕಾರ್ಯದರ್ಶಿಗೆ ಆದೇಶ ನೀಡಿದೆ.
ಟಿಪ್ಪು ಏನಾಗಿದ್ದ ಎನ್ನುವ ಬಗ್ಗೆ ಇತಿಹಾಸಕಾರರು ನಿರ್ಧರಿಸಲಿ ಎಂದು ಸಿ.ಜೆ ಹೇಳಿದರು.





