‘ಅಫ್ಘಾನ್ ಮೊನಲಿಸಾ’ಗೆ ಪಾಕಿಸ್ತಾನದಲ್ಲಿ ಜಾಮೀನು ನಿರಾಕರಣೆ

ಇಸ್ಲಾಮಾಬಾದ್, ನ. 3: ನಕಲಿ ಗುರುತು ಚೀಟಿ ಸೃಷ್ಟಿಸಿ ಪಾಕಿಸ್ತಾನದಲ್ಲಿ ವಾಸವಿದ್ದುದಕ್ಕಾಗಿ ಬಂಧನಕ್ಕೊಳಗಾದ ’ಅಫ್ಘಾನ್ ಮೊನಲಿಸಾ" ಶರ್ಬತ್ ಗುಲರಿಗೆ ಜಾಮೀನು ಲಭಿಸಿಲ್ಲ ಎಂದು ವರದಿಯಾಗಿದೆ. ಅವರ ಜಾಮೀನು ಅರ್ಜಿಯನ್ನು ಪರಿಗಣಿಸಿದ ವಿಶೇಷ ಕೋರ್ಟು ಶರ್ಬತ್‌ಗುಲಗೆ ಜಾಮೀನು ನೀಡಲು ನಿರಾಕರಿಸಿದೆ. ನಂತರ ಮಹಿಳೆಯನ್ನು ಪೇಶಾವರ ಸೆಂಟ್ರಲ್ ಜೈಲ್‌ಗೆ ಹದಿನಾಲ್ಕುದಿವಸದ ನ್ಯಾಯಾಂಗ ಬಂಧನ ವಿಧಿಸಿ ಕಳುಹಿಸಿಕೊಡಲಾಗಿದೆ. ಅಕ್ಟೋಬರ್ 26ರಂದು ಶರ್ಬತ್‌ರನ್ನು ಪಾಕಿಸ್ತಾನದ ಫೆಡರಲ್ ಇನ್‌ವೆಸ್ಟಿಗೇಶನ್ ಏಜೆನ್ಸಿ ಪೇಶಾವರದ ಮನೆಯಿಂದ ಬಂಧಿಸಿತ್ತು. ಗುಲಗೆ ಪಾಕ್ ಪೌರತ್ವ ನೀಡಿದ ಮೂವರು ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ಆರೋಪ ಸಾಬೀತಾದರೆ ಶರ್ಬತ್‌ರಿಗೆ ಏಳುವರ್ಷದಿಂದ ಹದಿನಾಲ್ಕು ವರ್ಷಗಳವರೆಗೆ ಜೈಲುವಾಸ ಸಿಗುವ ಸಾಧ್ಯತೆ ಇದೆ.
2014 ಎಪ್ರಿಲ್‌ನಲ್ಲಿ ಶರ್ಬತ್ ಗುಲ ಶರ್ಬತ್ ಬೀವಿ ಎಂಬ ಹೆಸರಿನಲ್ಲಿ ಈ ಮಹಿಳೆಗುರುತು ಚೀಟಿ ಪಡೆದಿದ್ದರು ಎಂದು ಆರೋಪ ಹೊರಿಸಲಾಗಿದೆ. ಕಂಪ್ಯೂಟರಿನಲ್ಲಿ ನಕಲಿ ಗುರುತು ಕಾರ್ಡು ಮಾಡಲಾಗಿದೆ. ಸಾವಿರಾರು ಅಫ್ಘಾನ್ ನಿರಾಶ್ರಿತರಲ್ಲಿ ಶರ್ಬತ್ ಕೂಡಾ ಓರ್ವರಾಗಿದ್ದಾರೆ. ಈ ನಡುವೆ ದೇಶಾದ್ಯಂತ ನಕಲಿ ಗುರುತು ಕಾರ್ಡ್‌ಗಳ ತಪಾಸಣೆ ನಡೆಸುವ ವೇಳೆ ಶರ್ಬತ್ ಸಿಕ್ಕಿಬಿದ್ದಿದ್ದರುಎಂದು ವರದಿ ತಿಳಿಸಿದೆ.
1984ರಲ್ಲಿ ಸೋವಿಯತ್ ಯೂನಿಯನ್ ಅಫ್ಘಾನ್ ಅತಿಕ್ರಮಣ ಕಾಲದಲ್ಲಿ ಪಾಕಿಸ್ತಾನದ ನಿರಾಶ್ರಿತ ಶಿಬಿರವೊಂದರಲ್ಲಿ ಫೊಟೋಗ್ರಾಫರ್ ಶರ್ಬತ್‌ರ ಫೊಟೋ ತೆಗೆದಿದ್ದರು. ಅದು ನಂತರ ಮ್ಯಾಗಝಿನ್ ವೊಂದರಲ್ಲಿ ಕವರ್ ಫೊಟೋ ಆಗಿ ಪ್ರಕಟವಾಗಿತ್ತು. ಆನಂತರ ಶರ್ಬತ್ ಅಫ್ಘಾನಿಸ್ತಾನದ ಮೊನಲಿಸಾ ಎಂದು ಖ್ಯಾತರಾಗಿದ್ದರು.







