ಉಪ್ಪಿನಂಗಡಿ: ಹುಖೂಕುಲ್ ಇಬಾದ್ ಸ್ನೇಹಸಮ್ಮಿಲನ ಕಾರ್ಯಕ್ರಮ

ಮಂಗಳೂರು, ನ.3: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್, ರೇಂಜ್ ಜಂಇಯತುಲ್ ಮುಅಲ್ಲಿಮೀನ್ ಮತ್ತು ಮದ್ರಸ ಮ್ಯಾನೇಜ್‌ಮೆಂಟ್ ಕಮಿಟಿಯ ಜಂಟಿ ಆಶ್ರಯದಲ್ಲಿ ಉಪ್ಪಿನಂಗಡಿ ಮತ್ತು ಕಡಬ ರೇಂಜ್‌ಗೊಳಪಟ್ಟ ಮಸೀದಿಗಳ ಖತೀಬರು, ಮದ್ರಸ ಅದ್ಯಾಪಕರು ಮತ್ತು ಮದ್ರಸ ಮ್ಯಾನೇಜ್‌ಮೆಂಟ್‌ನ ಪದಾಧಿಕಾರಿಗಳ ಸ್ನೇಹಸಮ್ಮಿಲನ ಕಾರ್ಯಕ್ರಮವು ಉಪ್ಪಿನಂಗಡಿಯ ಎಚ್.ಎಂ. ಆಡಿಟೋರಿಯಂ ನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉಪ್ಪಿನಂಗಡಿ ರೇಂಜ್ ಜಂಇಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಎಂ.ಎಂ ಇಬ್ರಾಹಿಂ ದಾರಿಮಿ ಉದ್ಘಾಟಿಸಿದರು. ಮಾಲಿಕುದ್ದೀನಾರ್ ಜುಮಾ ಮಸೀದಿ ಉಪ್ಪಿನಂಗಡಿಯ ಅಧ್ಯಕ್ಷ ಹಾಜಿ ಮುಸ್ತಫಾ ಕೆಂಪಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ‘ಹುಖೂಕುಲ್ ಇಬಾದ್-ಮನುಕುಲದ ಸೇವೆ’ ವಿಷಯದಲ್ಲಿ ಸಮಸ್ತ ಮುಶಾವರ ಕರ್ನಾಟಕ ಸದಸ್ಯ ಅಲ್‌ಹಾಜ್ ಇಬ್ರಾಹೀಂ ಬಾಖವಿ ಕೆ.ಸಿ.ರೋಡ್ ಮತ್ತು ಟ್ಯಾಲೆಂಟ್ ರಿಸರ್ಚ್ ಫೌಂಡೇಷನ್‌ನ ಸಲಹೆಗಾರ ರಫೀಕ್ ಮಾಸ್ಟರ್ ತರಗತಿ ನಡೆಸಿದರು.
ಕಾರ್ಯಕ್ರಮದಲ್ಲಿ ಕಡಬ ರೇಂಜ್ ಜಂ-ಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಪಿ.ಎಂ. ಇಬ್ರಾಹೀಂ ದಾರಿಮಿ, ಕಡಬ ರೇಂಜ್ ಮದ್ರಸ ಮ್ಯಾನೇಜ್‌ಮೆಂಟ್ ಅಧ್ಯಕ್ಷ ಹಾಜಿ ಎಸ್.ಅಬ್ದುಲ್ ಖಾದರ್, ಉಪ್ಪಿನಂಗಡಿ ರೇಂಜ್ ಮದ್ರಸ ಮ್ಯಾನೇಜ್‌ಮೆಂಟ್ ಅಧ್ಯಕ್ಷ ಹಾಜಿ ಅಬ್ದುಲ್ ರಹಿಮಾನ್ ಕೊಳ್ಳೆಜಾಲ್, ಕಡಬ ರೇಂಜ್ ಮದ್ರಸ ಮ್ಯಾನೇಜ್‌ಮೆಂಟ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಕಲಾರ, ಉಪ್ಪಿನಂಗಡಿ ರೇಂಜ್ ಮದ್ರಸ ಮ್ಯಾನೇಜ್‌ಮೆಂಟ್‌ನ ಪ್ರಧಾನ ಕಾರ್ಯದರ್ಶಿ ಹಾಜಿ ಯೂಸುಫ್, ಕರಾಯ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಅಶ್ರಫ್ ಕರಾಯ, ಸಮಸ್ತ ವಿದ್ಯಾಭ್ಯಾಸ ಬೋರ್ಡ್‌ನ ಮುಫತ್ತಿಸ್ ಹಾಜಿ ಅಬ್ದುಲ್ ರಶೀದ್ ಫೈಝಿ, ಎಸ್ಕೆಎಸ್ಸೆಸ್ಸೆಫ್‌ನ ಸಂಘಟನಾ ಕಾರ್ಯದರ್ಶಿ ಅಬ್ದುರ್ರಶೀದ್ ರಹ್ಮಾನಿ ಮತ್ತಿತರರು ಉಪಸ್ಥಿತರಿದ್ದರು.
ಉಪ್ಪಿನಂಗಡಿ ರೇಂಜ್ ಜಂಇಯತುಲ್ ಮುಅಲ್ಲಿಮೀನ್‌ನ ಪ್ರಧಾನ ಕಾರ್ಯದರ್ಶಿ ಕೆ.ಎಂ.ಎಸ್ ಸಿದ್ದೀಖ್ ಫೈಝಿ ಕರಾಯ ಸ್ವಾಗತಿಸಿದರು. ಟಿಆರ್‌ಎಫ್‌ನ ಪ್ರಧಾನ ಕಾರ್ಯದರ್ಶಿ ಡಿ.ಅಬ್ದುಲ್ ಹಮೀದ್ ಕಣ್ಣೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮ ಸಂಯೋಜಕ ಅಸ್ಪರ್ ಹುಸೈನ್ ವಂದಿಸಿದರು. ಕಡಬ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್‌ನ ಪ್ರಧಾನ ಕಾರ್ಯದರ್ಶಿ ಎಂ.ಕೆ. ಅಶ್ರಫ್ ಮೌಲವಿ ಕೋಲ್ಪೆ ಕಾರ್ಯಕ್ರಮ ನಿರೂಪಿಸಿದರು.
ಉಪ್ಪಿನಂಗಡಿ ಮತ್ತು ಕಡಬ ರೇಂಜ್‌ಗೊಳಪಟ್ಟ ಎಲ್ಲಾ ಮಸೀದಿಗಳ ಖತೀಬರು, ಮದ್ರಸಗಳ ಅಧ್ಯಾಪಕರು, ಮದ್ರಸ ಮ್ಯಾನೇಜ್‌ಮೆಂಟ್ ಕಮಿಟಿಗಳ ಪದಾಧಿಕಾರಿಗಳು, ಜಮಾಅತ್ ಕಮಿಟಿಯ ಪದಾಧಿಕಾರಿಗಳು ಭಾಗವಹಿಸಿದ್ದರು.







