ಬೈಕ್‌ಗೆ ಅಪರಿಚಿತ ವಾಹನ ಢಿಕ್ಕಿ: ನಾಲ್ವರಿಗೆ ಗಾಯ

ಮುಲ್ಕಿ, ನ.3: ರಾಷ್ಟ್ರೀಯ ಹೆದ್ದಾರಿ 66ರ ಪಡುಪಣಂಬೂರು ಎಂಬಲ್ಲಿ ಅಪರಿಚಿತ ವಾಹನವೊಂದು ಢಿಕ್ಕಿಯಾಗಿ ಬೈಕ್ ಸವಾರ ಸಹಿತ ನಾಲ್ವರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಬುಧವಾರ ರಾತ್ರಿ ನಡೆದಿದೆ.
ಗಾಯಗೊಂಡವರನ್ನು ಬೈಕ್ ಸವಾರ ಕಾರ್ಕಳ ನಿವಾಸಿಗಳಾದ ಹರೀಶ್ ಆಚಾರ್ಯ, ರೇಖಾ, ಹರ್ಷಿತಾ, ಆಂಶಿಕ ಎಂದು ಗುರುತಿಸಲಾಗಿದೆ.
ಪಡುಬಿದ್ರೆ ಕಡೆಯಿಂದ ಹರೀಶ್ ಆಚಾರ್ಯ ಎಂಬವರು ಪತ್ನಿ ಹಾಗೂ ಮಕ್ಕಳೊಂದಿಗೆ ತನ್ನ ಬೈಕ್‌ನಲ್ಲಿ ಕಾವೂರು ಕಡೆಗೆ ಹೋಗುತ್ತಿದ್ದ ವೇಳೆ ರಾಷ್ಟ್ರೀಯ ಹೆದ್ದಾರಿ 66ರ ಪಡುಪಣಂಬೂರು ಬಳಿ ವಾಹನವೊಂದನ್ನು ಓವರ್‌ಟೇಕ್ ಮಾಡುವ ಭರದಲ್ಲಿ ಅಪರಿಚಿತ ವಾಹನ ಢಿಕ್ಕಿ ಹೊಡೆದು ಪರಾರಿಯಾಗಿದೆ.
ಪರಿಣಾಮ ಬೈಕಿನಲ್ಲಿದ್ದ ನಾಲ್ವರು ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಸುರತ್ಕಲ್ ಉತ್ತರವಲಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





