ಲೂಯಿಸ್ ಹ್ಯಾಮಿಲ್ಟನ್ ಮೇಲೆರಗಿದ ಹುಲಿ !

ಮೆಕ್ಸಿಕೊ, ನ.3: ಮೂರು ಬಾರಿ ವಿಶ್ವ ಚಾಂಪಿಯನ್ ಆಗಿರುವ ಮರ್ಸಿಡಸ್‌ನ ಲೂವಿಸ್ ಹ್ಯಾಮಿಲ್ಟನ್ ಮೆಕ್ಸಿಕೊ ಗ್ರಾನ್ ಪ್ರಿಯಲ್ಲಿ ಜಯ ಗಳಿಸಿದ ಬಳಿಕ ಹುಲಿಯನ್ನು ಎದುರಿಸುವ ಮೂಲಕ ಈ ಗೆಲುವನ್ನು ಹೆಚ್ಚು ಸ್ಮರಣೀಯವನ್ನಾಗಿಸಿಕೊಂಡರು.
ಎಫ್ ಒನ್ ಚಾಲಕರು ಸ್ಪರ್ಧೆಯಲ್ಲಿ ಭಾಗವಹಿಸುವಾಗ ಸವಾಲು ಎದುರಿಸಬೇಕಾಗುತ್ತದೆ. ವೇಗದಲ್ಲಿ ಕಾರು ಚಲಾಯಿಸುವ ಚಾಲಕರು ಅಪಾಯವನ್ನು ಮೆಟ್ಟಿ ನಿಲ್ಲುತ್ತಾರೆ. ಆದರೆ ಹ್ಯಾಮಿಲ್ಟನ್ ಮೆಕ್ಸಿಕೊದಲ್ಲಿ ನಡೆದ ಎಫ್ ಒನ್ ಗ್ರಾನ್ ಪ್ರಿಯಲ್ಲಿ ಜಯಸಿದ ಬೆನ್ನಿಗೆ ಟೈಗರ್ ಸಫಾರಿಗೆ ತೆರಳಿದರು.
ಅಲ್ಲಿನ ಹುಲಿಯೊಂದು ಹ್ಯಾಮಿಲ್ಟನ್ ಅವರನ್ನು ಅಪ್ಪಿಕೊಂಡಿತು. ಹುಲಿ ಅವರನ್ನು ಹಿಡಿದಾಗ ಹ್ಯಾಮಿಲ್ಟನ್ ಹುಲಿಯ ಬೆನ್ನು ಸವರಿದರು. ಹುಲಿ ಅವರೊಂದಿಗೆ ಆಟವಾಡಿತು. ಹ್ಯಾಮಿಲ್ಟನ್ ಮೆಕ್ಸಿಕೊ ವಿಜಯವನ್ನು ಹುಲಿಯೊಂದಿಗೆ ಆಡುತ್ತಾ ಹೆಚ್ಚು ಸ್ಮರಣಿಯವನ್ನಾಗಿಸಿದ್ದರು.
Next Story







