ಡಬ್ಲುಐಸಿಬಿ ಕೇಂದ್ರ ಗುತ್ತಿಗೆ ನಿರಾಕರಿಸಿದ ಸ್ಯಾಮುಯೆಲ್ಸ್
ಆ್ಯಂಟಿಗುವಾ,ನ.3: ವೆಸ್ಟ್‌ಇಂಡೀಸ್‌ನ ಹಿರಿಯ ಆಟಗಾರರಾದ ಮರ್ಲಾನ್ ಸ್ಯಾಮುಯೆಲ್ಸ್, ಡರೆನ್ ಬ್ರಾವೊ ಹಾಗೂ ಟ್ವೆಂಟಿ-20 ನಾಯಕ ಕಾರ್ಲಸ್ ಬ್ರಾತ್‌ವೈಟ್ ವೆಸ್ಟ್‌ಇಂಡೀಸ್ ಕ್ರಿಕೆಟ್ ಮಂಡಳಿಯ(ಡಬ್ಲುಐಸಿಬಿ) ಕೇಂದ್ರ ಗುತ್ತಿಗೆಯನ್ನು ನಿರಾಕರಿಸಿದ್ದಾರೆ.
ಸ್ಯಾಮುಯೆಲ್ಸ್, ಬ್ರಾವೊ ಹಾಗೂ ಬ್ರಾತ್‌ವೇಟ್ ಸೆ.2017ಕ್ಕೆ ಕೊನೆಗೊಳ್ಳಲಿರುವ ಕೇಂದ್ರ ಗುತ್ತಿಗೆಯ ಒಪ್ಪಂದ ಸಹಿ ಹಾಕಲು ನಿರಾಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪಾಕ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿರುವ ಸ್ಯಾಮುಯೆಲ್ಸ್ ಏಕದಿನ ಹಾಗು ಟ್ವೆಂಟಿ-20 ತಂಡದ ಪ್ರಮುಖ ಆಟಗಾರನಾಗಿದ್ದಾರೆ. 48 ಟೆಸ್ಟ್‌ನಲ್ಲಿ 40ರ ಸರಾಸರಿ ಹೊಂದಿರುವ ಬ್ರಾವೊ ವಿಂಡೀಸ್‌ನ ಪ್ರಮುಖ ಆಟಗಾರನಾಗಿದ್ದು, ಎಡಗೈ ಬ್ಯಾಟ್ಸ್‌ಮನ್ ಏಕದಿನ ತಂಡದಲ್ಲೂ ಸ್ಥಾನ ಪಡೆದಿದ್ದಾರೆ.
ಒಪ್ಪಂದ ಸಹಿ ಹಾಕಿದ ಆಟಗಾರರು: ದೇವೇಂದ್ರ ಬಿಶೂ, ಜೆರ್ಮೈನ್ ಬ್ಲಾಕ್‌ವುಡ್, ಕ್ರೆಗ್ ಬ್ರಾತ್‌ವೈಟ್, ರಾಸ್ಟನ್ ಚೇಸ್, ಕಮಿನ್ಸ್, ಶೇನ್ ಡೌರಿಚ್, ಎಸ್.ಗ್ಯಾಬ್ರಿಯೆಲ್, ಜೇಸನ್ ಹೋಲ್ಡರ್, ಹೋಪ್,ಲಿಯೊನ್ ಜಾನ್ಸನ್, ಜೋಸೆಫ್, ವರಿಕನ್.





