ಬೆಂಗಳೂರು ಎಫ್‌ಸಿಗೆ ದೋಹಾದಲ್ಲಿ ಭವ್ಯ ಸ್ವಾಗತ

ದೋಹಾ, ನ.3: ಎಎಫ್‌ಸಿ ಕಪ್ ಟೂರ್ನಿಯಲ್ಲಿ ಫೈನಲ್ ತಲುಪಿದ ಭಾರತದ ಮೊದಲ ಫುಟ್ಬಾಲ್ ಕ್ಲಬ್ ಆಗಿರುವ ಬೆಂಗಳೂರು ಎಫ್‌ಸಿಗೆ ದೋಹಾದಲ್ಲಿ ಭವ್ಯ ಸ್ವಾಗತ ನೀಡಿ ಬರಮಾಡಿಕೊಳ್ಳಲಾಗಿದೆ.
ಹಮದ್ ಇಂಟರ್‌ನ್ಯಾಶನಲ್ ಏರ್‌ಪೋರ್ಟ್‌ನಲ್ಲಿ ಬೆಳಗ್ಗಿನ ಜಾವ ಜಮಾಯಿಸಿದ್ದ 10 ರಿಂದ 15ರಷ್ಟಿದ್ದ ಫುಟ್ಬಾಲ್ ಅಭಿಮಾನಿಗಳು ಬೆಂಗಳೂರು ತಂಡವನ್ನು ಸ್ವಾಗತಿಸಿದರು.
ಬೆಂಗಳೂರು ಎಫ್‌ಸಿ ತಂಡ ಶನಿವಾರ ಇರಾಕ್ ಏರ್‌ಫೋರ್ಸ್ ಕ್ಲಬ್‌ನ ವಿರುದ್ದ ಫೈನಲ್ ಪಂದ್ಯ ಆಡಲಿದೆ.
ನಿಗದಿತ ವಿಮಾನ ರದ್ದುಗೊಂಡಿದ್ದರೂ ಕತರ್ ಇಂಡಿಯನ್ ಅಸೋಸಿಯೇಶನ್‌ನ ಸದಸ್ಯರು ಬೆಂಗಳೂರು ಫುಟ್ಬಾಲ್ ತಂಡದ ಬರುವಿಕೆಗಾಗಿ ಕಾದು ಕುಳಿತು ಆತ್ಮೀಯವಾಗಿ ಸ್ವಾಗತಿಸಿದರು.
‘‘ನಿಗದಿತ ವಿಮಾನ ರದ್ದಾಗಿದೆ ಎಂಬ ಬಗ್ಗೆ ನಮಗೆ ಮಾಹಿತಿ ಲಭಿಸಿತ್ತು. ಆದರೆ, ನಮ್ಮ ಹೀರೋಗಳನ್ನು ಸ್ವಾಗತಿಸದೇ ಏರ್‌ಪೋರ್ಟ್‌ನಿಂದ ವಾಪಸಾಗುವ ಪ್ರಶ್ನೆಯೇ ಎದುರಾಗಲಿಲ್ಲ್ಲ’’ ಎಂದು ಕತರ್ ಇಂಡಿಯನ್ ಅಸೋಸಿಯೇಶನ್‌ನ ಕ್ರೀಡೆ ಹಾಗೂ ಗೇಮ್ಸ್‌ನ ಪ್ರಧಾನ ಕಾರ್ಯದರ್ಶಿ ಸಫೀರ್ ಹೇಳಿದ್ದಾರೆ.
Next Story





