ಸಚಿವರ ಪ್ರವಾಸ
ರಮಾನಾಥ ರೈ
ಮಂಗಳೂರು, ನ.3: ಅರಣ್ಯ ಸಚಿವ ಬಿ.ರಮಾನಾಥ ರೈ ನ. 4ರಂದು ದ.ಕ. ಜಿಲ್ಲಾ ಪ್ರವಾಸದಲ್ಲಿರುವರು.
ಅಂದು ಅಪರಾಹ್ನ 3ಕ್ಕೆ ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗದ ವತಿಯಿಂದ ಕುಂಟಿಕಾನದಲ್ಲಿ ನೂತನ ನರ್ಮ್ ಬಸ್ ಘಟಕದ ಉದ್ಘಾಟನಾ ಸಮಾ ರಂಭದಲ್ಲಿ ಭಾಗವಹಿಸುವರು. ಸಂಜೆ 4 ಗಂಟೆಗೆ ಉಜಿರೆ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಮಂಗಳೂರು, ಶಿವಮೊಗ್ಗ, ಕೊಡಗು ಅರಣ್ಯ ಇಲಾಖಾ ವೃತ್ತದ ಅರಣ್ಯ ಕ್ರೀಡಾಕೂಟದ ಸಮಾ ರೋಪ ಸಮಾರಂಭ, 5:30ಕ್ಕೆ ಮಣಿನಾಲ್ಕೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುವ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯ, ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರ ಇದರ ಎನ್ನೆಸ್ಸೆಸ್ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು ಎಂದು ಪ್ರಕಟನೆ ತಿಳಿಸಿದೆ.
ಯು.ಟಿ.ಖಾದರ್
ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ನ.4 ಮತ್ತು 5ರಂದು ದ.ಕ. ಜಿಲ್ಲಾ ಪ್ರವಾಸದಲ್ಲಿರುವರು.
4ರಂದು ಬೆಳಗ್ಗೆ 8:30ಕ್ಕೆ ನಗರದ ಸರ್ಕ್ಯುಟ್ ಹೌಸ್‌ನಲ್ಲಿ ಸಾರ್ವ ಜನಿಕರನ್ನು ಭೇಟಿ ಮಾಡಲಿದ್ದಾರೆ. ಅಪರಾಹ್ನ 3ಕ್ಕೆ ಮಂಗಳೂರು ನಗರದ ನರ್ಮ್ ಬಸ್ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು.
ನ.5ರಂದು ಳಗ್ಗೆ 9ಕ್ಕೆ ವೆಲೆನ್ಸಿಯಾ ದಲ್ಲಿ ತ್ರಿವೇಣಿ ಆಯುರ್ವೇದಿಕ್ ಸಂಸ್ಥೆ ಉದ್ಘಾಟನೆ, 10ಕ್ಕೆ ದೇರಳಕಟ್ಟೆ ಬಿ.ಸಿ.ಸಿ. ಹಾಲ್‌ನಲ್ಲಿ ಮಂಗಳೂರು ತಾಲೂಕುಮಟ್ಟದ ಜನಸಂಪರ್ಕ ಸಭೆ ಯಲ್ಲಿ ಭಾಗವಹಿಸುವರು ಎಂದು ಪ್ರಕಟನೆ ತಿಳಿಸಿದೆ.
ರಾಮಲಿಂಗಾರೆಡ್ಡಿ
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನ.4ರಂದು ದ.ಕ. ಮತ್ತು ಉಡುಪಿ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ.
ಅಂದು ಬೆಳಗ್ಗೆ 8:20ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಸಚಿವರು 10 ಗಂಟೆಗೆ ಉಡುಪಿಗೆ ತೆರಳುವರು. ಅಪರಾಹ್ನ 3:30ಕ್ಕೆ ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗ ವತಿಯಿಂದ ನಗರದಲ್ಲಿ ಜೆಎನ್-ನರ್ಮ್ ಯೋಜನೆಯಡಿ ನಿರ್ಮಾಣಗೊಂಡ ನೂತನ ಬಸ್ ಘಟಕ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು. ಬಳಿಕ ನಗರದಲ್ಲಿ ಸಾರ್ವಜನಿಕರಿಂದ ಸಾರಿಗೆ ಇಲಾಖೆಗೆ ಸಂಬಂಧಿಸಿದಂತೆ, ಸಲಹೆಗಳು ದೂರು ಗಳು ಹಾಗೂ ಕುಂದು ಕೊರತೆಗಳ ಮನವಿ ಸ್ವೀಕಾರ ಮತ್ತು ಕಾಂಗ್ರೆಸ್ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಸ್ಥಳೀಯ ಮುಖಂಡರ ಭೇಟಿ, ನಂತರ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡುವರು. ರಾತ್ರಿ 7:35ಕ್ಕೆ ಮಂಗಳೂರು ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ತೆರಳುವರು ಎಂದು ಪ್ರಕಟನೆ ತಿಳಿಸಿದೆ.







