ಸಂಸತ್ತಿನ ಅನುಮೋದನೆಯಿಲ್ಲದೆ ಬ್ರೆಕ್ಸಿಟ್ ಸಾಧ್ಯವಿಲ್ಲ: ಬ್ರಿಟನ್ ಹೈಕೋರ್ಟ್
ಲಂಡನ್, ನ. 3: ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಬರುವ ಪ್ರಕ್ರಿಯೆಗೆ (ಬ್ರೆಕ್ಸಿಟ್) ಸಂಸತ್ತಿನಿಂದ ಅನುಮೋದನೆ ಪಡೆಯದೆ ಪ್ರಧಾನಿ ಚಾಲನೆ ನೀಡುವುದು ಸಾಧ್ಯವಿಲ್ಲ ಎಂದು ಬ್ರಿಟನ್ ಹೈಕೋರ್ಟ್ ಹೇಳಿದೆ. ಇದು ಬ್ರಿಟನ್ ಸರಕಾರಕ್ಕೆ ದೊಡ್ಡ ಹಿನ್ನಡೆ ಎಂಬುದಾಗಿ ಪರಿಗಣಿಸಲಾಗಿದೆ. ಹೈಕೋರ್ಟ್ ಗುರುವಾರ ನೀಡಿರುವ ತೀರ್ಪನ್ನು ಸರಕಾರ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುವ ಸಾಧ್ಯತೆಗಳಿವೆ. ತಾನು ಮಾರ್ಚ್ 31ರೊಳಗೆ ಐರೋಪ್ಯ ಒಕ್ಕೂಟದ ಜೊತೆಗೆ ಅದರಿಂದ ಬ್ರಿಟನ್ ಹೊರಬರುವುದಕ್ಕೆ ಸಂಬಂಧಿಸಿದ ಮಾತುಕತೆಗಳನ್ನು ಆರಂಭಿಸುವುದಾಗಿ ಬ್ರಿಟನ್ ಪ್ರಧಾನಿ ತೆರೇಸಾ ಮೇ ಹೇಳಿದ್ದಾರೆ.
ಒಕ್ಕೂಟದಿಂದ ಹೊರಬರುವುದರಿಂದ ಜನರು ಹಕ್ಕುಗಳಿಂದ ವಂಚಿತರಾಗುತ್ತಾರೆ, ಹಾಗಾಗಿ, ಸಂಸತ್ತಿನ ಅನುಮೋದನೆಯಿಲ್ಲದೆ ಹಾಗೆ ಮಾಡಲು ಸಾಧ್ಯವಿಲ್ಲ ಎಂಬುದಾಗಿ ಬ್ರೆಕ್ಸಿಟ್ ವಿರೋಧಿಗಳು ವಾದಿಸುತ್ತಿದ್ದಾರೆ.
Next Story





