ಅತ್ಯಂತ ದೊಡ್ಡ ಬಾಹ್ಯಾಕಾಶ ದೂರದರ್ಶಕ ಪೂರ್ಣ

ವಾಶಿಂಗ್ಟನ್, ನ. 3: ಜಗತ್ತಿನ ಅತ್ಯಂತ ದೊಡ್ಡ ಬಾಹ್ಯಾಕಾಶ ಟೆಲಿಸ್ಕೋಪ್‌ನ ನಿರ್ಮಾಣ ಕಾರ್ಯವನ್ನು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಪೂರ್ಣಗೊಳಿಸಿದೆ. ಇದಕ್ಕಾಗಿ ಅದು ಎರಡು ದಶಕಗಳನ್ನು ತೆಗೆದುಕೊಂಡಿದೆ.
ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್‌ನ್ನು ನಾಸಾದ 26 ವರ್ಷಗಳ ಹಳೆಯ ಹಬಲ್ ಬಾಹ್ಯಾಕಾಶ ಟೆಲಿಸ್ಕೋಪ್‌ನ ಉತ್ತರಾಧಿಕಾರಿಯಾಗಿ ಪರಿಗಣಿಸಲಾಗಿದೆ ಎಂದು ನಾಸಾ ಬುಧವಾರ ಪ್ರಕಟಿಸಿದೆ.
ಈ ಬಾಹ್ಯಾಕಾಶ ದೂರದರ್ಶಕವನ್ನು ಏರಿಯಾನ್ 5 ರಾಕೆಟೊಂದು 2018 ಅಕ್ಟೋಬರ್‌ನಲ್ಲಿ ಫ್ರೆಂಚ್ ಗಯಾನದಿಂದ ಉಡಾಯಿಸುವುದು ಎಂದು ನಾಸಾ ತಿಳಿಸಿದೆ ಎಂದು ಕ್ಸಿನುವಾ ವಾರ್ತಾ ಸಂಸ್ಥೆ ವರದಿ ಮಾಡಿದೆ.
‘‘ನಾವು ಈ ಹಿಂದೆ ಕಾಣದಿರುವುದನ್ನು ಕಾಣಲು ನಮಗೆ ಸಾಧ್ಯವಾಗಲಿದೆ. ಯಾಕೆಂದರೆ ಈ ದೂರದರ್ಶಕ ಹಬಲ್ ಟೆಲಿಸ್ಕೋಪ್‌ಗಿಂತಲೂ ಶಕ್ತಿಶಾಲಿಯಾಗಿದೆ’’ ಎಂದು ವೆಬ್‌ನ ಹಿರಿಯ ಯೋಜನಾ ವಿಜ್ಞಾನಿ, ಜ್ಞಾನಪೀಠ ಪ್ರಶಸ್ತಿ ವಿಜೇತ ಜಾನ್ ಮ್ಯಾತರ್ ಹೇಳಿದರು.
Next Story





