ಕುಂಡುಝ್: ನ್ಯಾಟೊ ದಾಳಿ; 30 ನಾಗರಿಕರ ಸಾವು
ಕುಂಡುಝ್, ನ. 3: ಅಫ್ಘಾನಿಸ್ತಾನದ ಹಿಂಸಾ ಪೀಡಿತ ಉತ್ತರದ ರಾಜ್ಯ ಕುಂಡುಝ್ ಮೇಲೆ ಅಮೆರಿಕ ನೇತೃತ್ವದ ನ್ಯಾಟೊ ಪಡೆಗಳು ಗುರುವಾರ ನಡೆಸಿದ ದಾಳಿಯಲ್ಲಿ ಕನಿಷ್ಠ 30 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತರಲ್ಲಿ ಮಹಿಳೆಯರು ಮತ್ತು ಮಕ್ಕಳೂ ಸೇರಿದ್ದಾರೆ.‘‘ಅಫ್ಘಾನ್ ಪಡೆಗಳು ಮತ್ತು ಮಿತ್ರ ಪಡೆಗಳು ತಾಲಿಬಾನ್ ಬಂಡುಕೋರರ ವಿರುದ್ಧ ಜಂಟಿ ಕಾರ್ಯಾಚರಣೆ ನಡೆಸಿದವು. ಬಾಂಬ್ ದಾಳಿಯಲ್ಲಿ 30 ಅಫ್ಘಾನ್ ನಾಗರಿಕರು ಹುತಾತ್ಮರಾದರು ಹಾಗೂ 25 ಮಂದಿ ಗಾಯಗೊಂಡರು’’ ಎಂದು ಪ್ರಾಂತೀಯ ವಕ್ತಾರ ಮಹ್ಮೂದ್ ದಾನಿಶ್ ಹೇಳಿದರು.
Next Story





