ಸುಣ್ಣ ಮಾರಾಟ ನಿಷೇಧ
ಉಡುಪಿ, ನ.3: ಎಲೆ ಅಡಿಕೆ ಸೇವನೆ ಸಂದರ್ಭ ಉಪಯೋಗಿಸುವ ಸುಣ್ಣವನ್ನು ಚಿಕ್ಕ ಪ್ಲಾಸ್ಟಿಕ್ ಪ್ಯಾಕೆಟ್ ಹಾಗೂ ಟ್ಯೂಬ್‌ಗಳಲ್ಲಿ ತಯಾರು ಮಾಡುವುದು ಮತ್ತು ಮಾರಾಟ ಮಾಡುವುದನ್ನು ಸರಕಾರ ನಿಷೇಧಿಸಿದೆ. ಸುಣ್ಣವನ್ನು ಡಬ್ಬಿಗಳಲ್ಲಿ ಮಾತ್ರ ತಯಾರು ಮಾಡಿ ಮಾರಾಟ ಮಾಡ ಬಹುದು. ಆದ್ದರಿಂದ ಪ್ಲಾಸ್ಟಿಕ್ ಪ್ಯಾಕೆಟ್ ಹಾಗೂ ಟ್ಯೂಬ್‌ಗಳಲ್ಲಿ ತಯಾರು ಮಾಡುವವರು, ದಾಸ್ತಾನುದಾರರು ಹಾಗೂ ಮಾರಾಟ ಮಾಡುವವರ ವಿರುದ್ಧ ಕಾನೂನು ರೀತಿಯ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯ ಅಂಕಿತ ಅಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





