ಅಂಗಡಿಯಿಂದ ಕಳವಿಗೆ ವಿಫಲ ಯತ್ನ
ಸುಳ್ಯ, ನ.3: ದೊಡ್ಡತೋಟದಲ್ಲಿರುವ ಕರ್ನಾಟಕ ಸುಪಾರಿ ಸೆಂಟರ್ ಎಂಬ ಅಂಗಡಿಯ ಬೀಗ ಒಡೆದು ಕಳವಿಗೆ ವಿಫಲ ಯತ್ನ ನಡೆಸಿದ ಘಟನೆ ಬುಧವಾರ ರಾತ್ರಿ ನಡೆದಿದೆ. ಅಂಗಡಿಯ ಬಳಿ ಕಟ್ಟಡದ ಮಾಲಕ ಹೇಮಚಂದ್ರರವರ ಮನೆ ಇದ್ದು, ಮನೆಯ ಬಾಗಿಲಿಗೆ ಹೊರಗಿನಿಂದ ಚಿಲಕ ಹಾಕಲಾಗಿತ್ತು ಎನ್ನಲಾಗಿದೆ. ಹೇಮಚಂದ್ರರವರ ತಾಯಿ ರಾತ್ರಿ ಹೊರಗೆ ಬರಲು ನೋಡಿದಾಗ ಬಾಗಿಲಿನ ಚಿಲಕ ಹೊರಗಿನಿಂದ ಹಾಕಲಾಗಿತ್ತು ಎಂದು ತಿಳಿದು ಬಂದಿದೆೆ. ಈ ವಿಷಯವನ್ನು ಅವರು ಸ್ಥಳೀಯರಿಗೆ ತಿಳಿಸಿದ್ದು, ಸ್ಥಳೀಯರು ಬಂದು ನೋಡಿದಾಗ ಅಂಗಡಿಯ ಬೀಗ ಒಡೆದಿರುವ ಘಟನೆ ಗಮನಕ್ಕೆ ಬಂದಿದೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಪೊಲೀಸರು ಬಂದು ಸ್ಥಳ ಪರಿಶೀಲಿಸಿದ್ದಾರೆ.
Next Story





