ನ.6ರಂದು ಪುಚ್ಚತ್ತಬೈಲು ಹಯಾತುಲ್ ಇಸ್ಲಾಂ ಮದ್ರಸದ ನೂತನ ಕಟ್ಟಡಕ್ಕೆ ಶಿಲಾನ್ಯಾಸ

ಮಂಜೇಶ್ವರ, ನ.4: ಪುಚ್ಚತ್ತಬೈಲು ಹಯಾತುಲ್ ಇಸ್ಲಾಂ ಮದ್ರಸದ ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ ನವೆಂಬರ್ 6 ರಂದು ನಡೆಯಲಿದೆಯೆಂದು ಪದಾಧಿಕಾರಿಗಳು ಮಂಜೇಶ್ವರ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಸಯ್ಯದ್ ಅತಾವುಲ್ಲಾ ತಂಙಳ್, ಜಲಾಲುದ್ದೀನ್ ಸಅದಿ ತಂಙಳ್, ಉದ್ಯಮಿ ಉಪ್ಪಳ ಗೇಟ್ ಲತೀಫ್ ಶಿಲಾನ್ಯಾಸ ನೆರವೇರಿಸುವರು. ಜಮಾಅತ್ ಅಧ್ಯಕ್ಷ ಅಹ್ಮದ್ ಹಾಜಿ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭವನ್ನು ಅತಾವುಲ್ಲಾ ತಂಙಳ್ ಉದ್ಯಾವರ ಉದ್ಘಾಟಿಸುವರು. ಜಲಾಲುದ್ದೀನ್ ತಂಙಳ್ ದುಆಗೆ ನೇತೃತ್ವ ನೀಡುವರು. ಹುಸೈನ್ ಸಅದಿ ಕೆ.ಸಿ ರೋಡು ಮುಖ್ಯ ಭಾಷಣ ಮಾಡುವರು. ಖತೀಬ್ ಶಾಫಿ ಸಅದಿ , ಉಮರುಲ್ ಫಾರೂಕ್ ಮದನಿ ಮೊದಲಾದವರು ಉಪಸ್ಥಿತರಿರುವರು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅಹ್ಮದ್ ಹಾಜಿ, ಫಕ್ರಬ್ಬ ಹಾಜಿ, ಮೂಸ ಮದನಿ, ಬಾವ, ಖಲೀಲ್ ಅಹ್ಸನಿ, ಇಬ್ರಾಹೀಂ ಮೊದಲಾದವರು ಉಪಸ್ಥಿತರಿದ್ದರು.
Next Story





