ಕಾಂಗ್ರೆಸ್,ಆಪ್ ಶವಗಳನ್ನಿಟ್ಟುಕೊಂಡು ರಾಜಕೀಯ ಮಾಡುತ್ತಿವೆ:ಸಚಿವ ಸಿಂಗ್

ಹೊಸದಿಲ್ಲಿ,ನ.4: ಒಆರ್‌ಒಪಿಗೆ ಸಂಬಂಧಿಸಿದಂತೆ ಮಾಜಿ ಯೋಧ ರಾಮಕಿಶನ್ ಗ್ರೆವಾಲ್ ಆತ್ಮಹತ್ಯೆ ಕುರಿತ ವಿವಾದ ತಾರಕಕ್ಕೇರಿರುವ ಮಧ್ಯೆಯೇ ಇಂದು ಕಾಂಗ್ರೆಸ್ ಮತ್ತು ಆಪ್ ವಿರುದ್ಧ ದಾಳಿ ನಡೆಸಿದ ಕೇಂದ್ರ ಸಚಿವ ವಿ.ಕೆ.ಸಿಂಗ್ ಅವರು, ಅವು ಶವಗಳನ್ನಿಟ್ಟುಕೊಂಡು ರಾಜಕೀಯ ಮಾಡುತ್ತಿವೆ ಎಂದು ಆರೋಪಿಸಿದರು. ಇವೆರಡೂ ಪಕ್ಷಗಳಿಗೆ ರಾಜಕೀಯ ಮಾಡಲು ಯಾವುದೇ ವಿಷಯ ಉಳಿದಿಲ್ಲ ಮತ್ತು ‘ಸಮಾನ ಶ್ರೇಣಿ ಸಮಾನ ಪಿಂಚಣಿ’ ಕುರಿತು ಅವುಗಳಿಗೆ ಏನೂ ಗೊತ್ತಿಲ್ಲ. ಹೀಗಾಗಿ ಅವು ಮೃತದೇಹಗಳನಿಟ್ಟುಕೊಂಡು ರಾಜಕೀಯ ಮಾಡುತ್ತಿವೆ. ಎಂದಾದರೂ ಯಾವುದೇ ಯೋಧನ ಅಂತ್ಯಸಂಸ್ಕಾರದಲ್ಲಿ ಅವು ಪಾಲ್ಗೊಂಡಿವೆಯೇ ಕೇಳಿ ಎಂದು ಇಲ್ಲಿ ಸಮ್ಮೇಳನವೊಂದರ ನೇಪಥ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು ಹೇಳಿದರು.
Next Story





