12 ಆದಿವಾಸಿ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದವರಲ್ಲಿ 7 ಮಂದಿ ಅಧ್ಯಾಪಕರು !
.jpg)
ಬುಲ್ದಾನ,ಮಹಾರಾಷ್ಟ್ರ, ನ. 4: ಬೋರ್ಡಿಂಗ್ ಶಾಲೆಯ ಹನ್ನೆರಡು ಆದಿವಾಸಿ ಹೆಣ್ಣುಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಬಂಧಿಸಲ್ಪಟ್ಟಿರುವವರಲ್ಲಿ ಏಳು ಮಂದಿ ಅಧ್ಯಾಪಕರು ಸೇರಿರುವ ಹೇಯ ಘಟನೆಯೊಂದು ವರದಿಯಾಗಿದೆ. ಮಹಾರಾಷ್ಟ್ರದ ಬುಲ್ದಾನ ಜಿಲ್ಲೆಯ ನಿನಾದಿ ಆಶ್ರಮ ಸ್ಕೂಲ್‌ನಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿತ್ತು. ಬೋರ್ಡಿಂಗ್‌ನಲ್ಲಿ ವಾಸವಿದ್ದು ಕಲಿಯುತ್ತಿದ್ದ ಹನ್ನೆರಡರಿಂದ ಹದಿನಾಲ್ಕುವರ್ಷ ವಯೋಮಾನದ ವಿದ್ಯಾರ್ಥಿನಿಗಳನ್ನು ಈ ದುರುಳರು ಲೈಂಗಿಕವಾಗಿ ಬಳಸಿಕೊಂಡಿದ್ದರು.
ದೀಪಾವಳಿ ರಜೆಯಲ್ಲಿ ಮನೆಗೆ ಹೋಗಿದ್ದ ವಿದ್ಯಾರ್ಥಿನಿಯರಲ್ಲಿ ನಾಲ್ಕುಮಂದಿ ಶಾಲೆಗಳು ಮರಳಲು ತಯಾರಾಗಲಿಲ್ಲ. ಮಕ್ಕಳು ಆಡುತ್ತಿದ್ದ ಸಂದರ್ಭದಲ್ಲಿ ಒಬ್ಬಳು ಹೊಟ್ಟೆ ನೋವು ಎಂದು ಹೇಳಿ ದೂರ ನಿಂತಳು. ವೈದ್ಯರಲ್ಲಿ ತಪಾಸಣೆಗೆ ತೆರಳಿದಾಗ ಬಾಲಕಿ ಗರ್ಭಿಣಿಯೆಂದು ತಿಳಿದು ಬಂದಿತ್ತು. ಸಾಮಾಜಿಕಕಾರ್ಯಕರ್ತರು ಈ ಕುರಿತು ವಿಚಾರಿಸಿದಾಗ ಶಾಲೆಯಲ್ಲಿ ನಡೆದ ಲೈಂಗಿಕ ಅತ್ಯಾಚಾರವನ್ನು ವಿದ್ಯಾರ್ಥಿನಿಯರು ಬಹಿರಂಗಪಡಿಸಿದ್ದರು. ನಂತರ ನಡೆಸಿದ ಆರೋಗ್ಯತಪಾಸಣೆಯಲ್ಲಿ ಇನ್ನಿಬ್ಬರು ಬಾಲಕಿಯರೂ ಗರ್ಭಿಣಿಯರೆಂದು ತಿಳಿದು ಬಂದಿದೆ. ತಾವು ಮಾತ್ರವಲ್ಲ ಇನ್ನೂ ಎಂಟು ವಿದ್ಯಾರ್ಥಿನಿಯರಿಗೆ ಶಾಲೆಯಲ್ಲಿ ಇದೇ ರೀತಿ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಪೊಸ್ಕೊ ಕಾನೂನುಪ್ರಕಾರ ಈವರೆಗೆ ಹನ್ನೊಂದು ಮಂದಿಯನ್ನು ಬಂಧಿಸಲಾಗಿದೆ ಇವರಲ್ಲಿ ಹೆಡ್‌ಮಾಸ್ಟರ್ ಸಹಿತ ಎಂಟು ಮಂದಿ ಅಧ್ಯಾಪಕರು ಮತ್ತು ನಾಲ್ಕು ಮಂದಿ ಶಾಲೆಯ ಇತರ ನೌಕರರು ಸೇರಿದ್ದಾರೆ. ಮಕ್ಕಳು ದೂರು ನೀಡಿಯೂ ಕ್ರಮಜರಗಿಸದಿರುವುದಕ್ಕಾಗಿ ಹೆಡ್‌ಮಾಸ್ಟರ್‌ರನ್ನು ಬಂಧಿಸಲಾಗಿದೆ. ಶಾಲೆಯ ಹಳೆ ವಿದ್ಯಾರ್ಥಿ ಪ್ರಕರಣದ ಮುಖ್ಯ ಆರೋಪಿಯಾಗಿದ್ದಾನೆ. 105 ಮಕ್ಕಳು ಈಶಾಲೆಯಲ್ಲಿಕಲಿಯುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ 1000 ಇಂತಹ ಶಾಲೆಗಳಿವೆ ಎಂದು ವರದಿ ತಿಳಿಸಿದೆ.





