ಮಾಜಿ ಸೈನಿಕರಿಗೆ ಒಆರ್‌ಒಪಿ ಯೋಜನೆ ಜಾರಿಗೆ ಆಗ್ರಹಿಸಿ ಆಪ್‌ನಿಂದ ಧರಣಿ

ಸುಳ್ಯ, ನ.4: ಮಾಜಿ ಸೈನಿಕರಿಗೆ ಒಂದು ಶ್ರೇಣಿ-ಒಂದು ಪಿಂಚಣಿ ಯೋಜನೆಯನ್ನು ಜಾರಿಗೆ ಮಾಡುವ ವಿಚಾರದಲ್ಲಿ ಕೇಂದ್ರ ಸರಕಾರ ಪಲಾಯನವಾದಿ ಧೋರಣೆಯನ್ನು ಅನುಸರಿಸುತ್ತಿದೆ ಎಂದು ಆರೋಪಿಸಿ ಆಮ್ ಆದ್ಮಿ ಪಕ್ಷದ ವತಿಯಿಂದ ಸುಳ್ಯದಲ್ಲಿ ಪ್ರತಿಭಟನೆ ನಡೆಯಿತು.
ಸುಳ್ಯ ಹಳೆ ಬಸ್ ನಿಲ್ದಾಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಒಆರ್‌ಒಪಿ ಯೋಜನೆ ಜಾರಿಯಾಗದೇ ಬೇಸತ್ತು ಆತ್ಮಹತ್ಯೆ ಮಾಡಿದ ಮಾಜಿ ಯೋಧ ರಾಮ್‌ಕಿಶನ್ ಗ್ರೇವಾಲ್ ಅವರಿಗೆ ಸಂತಾಪ ಸೂಚಿಸಲಾಯಿತು.
ಎಎಪಿ ಮುಖಂಡ ಕೃಷ್ಣೆಗೌಡ ಮಾತನಾಡಿ, ಮಾಜಿ ಸೈನಿಕರಿಗೆ ಒಆರ್‌ಒಪಿ ಯೋಜನೆಯ ಹೆಸರಿನಲ್ಲಿ ಮೋಸ ಮಾಡಿದ ನಾಚಿಕೆಗೇಡಿನ ಮೋದಿ ಸರಕಾರ ಮೃತ ಯೋಧನ ಪುತ್ರನನ್ನೇ ಬಂಧಿಸಿದೆ ಎಂದು ದೂರಿದರು.
ಮುಖಂಡರಾದ ರಾಮಕೃಷ್ಣ ಬೀರಮಂಗಲ, ರಶೀದ್ ಜಟ್ಟಿಪಳ್ಳ, ನವೀನ್, ಸಂಶುದ್ದೀನ್, ದೀಕ್ಷಿತ್, ಕೇಪು, ಡಿ.ಎಂ.ಶಾರೀಕ್ ಉಪಸ್ಥಿತರಿದ್ದರು.
Next Story





