ಕಾಡುಪ್ರಾಣಿಯ ಬೇಟೆ: ಇಬ್ಬರ ಬಂಧನ

ಬೆಳ್ತಂಗಡಿ, ನ.4: ತಾಲೂಕಿನ ಚಾರ್ಮಾಡಿ ಕಾನಪ್ಪಾಡಿ ಮೀಸಲು ಅರಣ್ಯದಲ್ಲಿ ಉಡ ಜಾತಿಯ ಕಾಡುಪ್ರಾಣಿಯ ಬೇಟೆಯಾಡಿದ ಇಬ್ಬರು ಆರೋಪಿಗಳನ್ನು ಬೆಳ್ತಂಗಡಿ ವಲಯ ಅರಣ್ಯಾಧಿಕಾರಿಯವರ ನೇತೃತ್ವದ ತಂಡ ಬಂಧಿಸಿದೆ.
ಬಂಧಿತ ಆರೋಪಿಗಳು ಮಿತ್ತಬಾಗಿಲು ನಿವಾಸಿ ಶೇಖರ ಆಳ್ವ(39) ಹಾಗೂ ಪುದುವೆಟ್ಟು ನಿವಾಸಿ ಚಿದಾನಂದ ಗೌಡ (28) ಎಂಬವರಾಗಿದ್ದಾರೆ.
ಇವರಿಂದ ಬೇಟೆಗೆ ಉಪಯೋಗಿಸಿದ ಕತ್ತಿ ಹಾಗೂ ಜೀವಂತ ಉಡವನ್ನು ವಶಪಡಿಸಿಕೊಂಡ ಅರಣ್ಯ ಇಲಾಖೆಯ ಅಧಿಕಾರಿಗಳು ಅದಕ್ಕೆ ಚಿಕಿತ್ಸೆ ಕೊಡಿಸಿ ಸುರಕ್ಷಿತವಾಗಿ ಕಾಡಿಗೆ ಮರಳಿಸಿದ್ದಾರೆ.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
Next Story





