ಜಯಲಲಿತಾ ಪೂರ್ಣ ಗುಣಮುಖ: ಅಪೊಲೊ ಆಸ್ಪತ್ರೆ

ಚೆನ್ನೈ, ನ.4: ತಮಿಳುನಾಡಿನ ಮುಖ್ಯಮಂತ್ರಿ ಜೆ.ಜಯಲಲಿತಾ ‘ಸಂಪೂರ್ಣ ಗುಣಮುಖರಾಗಿದ್ದಾರೆ’. ಯಾವಾಗ ಮನೆಗೆ ಹೋಗಬೇಕೆಂದು ನಿರ್ಧರಿಸುವುದು ಈಗ ಅವರಿಗೆ ಬಿಟ್ಟ ವಿಷಯವಾಗಿದೆಯೆಂದು ಇಲ್ಲಿನ ಅಪೊಲೊ ಆಸ್ಪತ್ರೆ ಶುಕ್ರವಾರ ಬೆಳಗ್ಗೆ ಹೇಳಿದೆಯೆಂದು ಪಿಟಿಐ ವರದಿ ಮಾಡಿದೆ.
68ರ ಹರೆಯದ ನಾಯಕಿಗೆ ಈಗ ಸುತ್ತಲೂ ನಡೆಯುತ್ತಿರುವುದು ಅರಿವಾಗುತ್ತಿದೆ. ತನಗೆ ಬೇಕಾದುದನ್ನು ಅವರು ಕೇಳುತ್ತಿದ್ದಾರೆಂದು ಆಸ್ಪತ್ರೆಯ ಮುಖ್ಯಸ್ಥ ಡಾ.ಪ್ರಾತಪ್ ರೆಡ್ಡಿ ತಿಳಿಸಿದ್ದಾರೆ. ಜಯಲಲಿತಾ ಸೆ.22ರಿಂದ ಆಸ್ಪತ್ರೆಯಲ್ಲಿದ್ದು ಶ್ವಾಸಕೋಶದ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಅವರು ಹೇಳಿದ್ದಾರೆ.
ಅವರನ್ನು ತೀವ್ರ ನಿಗಾ ವಿಭಾಗದಿಂದ ಶೀಘ್ರವೇ ಖಾಸಗಿ ಕೊಠಡಿಯೊಂದಕ್ಕೆ ವರ್ಗಾಯಿಸುವ ಸಾಧ್ಯತೆಯಿದೆಯೆಂದು ಹಿರಿಯ ಎಡಿಎಂಕೆ ನಾಯಕರೊಬ್ಬರು ಬೆಳಗ್ಗೆ ತಿಳಿಸಿದ್ದಾರೆ.
ಶ್ವಾಸಕೋಶದ ಸೋಂಕು ನಿಯಂತ್ರಣದಲ್ಲಿದೆ. ಜಯಲಲಿತಾ ಗಂಭೀರ ಹಂತವನ್ನು ದಾಟಿದ್ದಾರೆ. ಉಸಿರಾಟದ ವ್ಯವಸ್ಥೆಯನ್ನು ಕಳಚಲಾಗುತ್ತಿದೆ. ಅದನ್ನು ಆಗಾಗ ಮಾತ್ರ ಉಪಯೋಗಿಸಲಾಗುತ್ತಿದೆಯೆಂದು ಎಡಿಎಂಕೆ ವಕ್ತಾರ ಸಿ.ಪೊನ್ನಯ್ಯನ್ ಹೇಳಿದ್ದಾರೆ.
ಕಳೆದ ಒಂದು ವಾರದಿಂದ ಜಯಲಲಿತಾ ಅರೆ ದ್ರವಾಹಾರ ಸೇವಿಸುತ್ತಿದ್ದು ಈಗ ಜನರೊಂದಿಗೆ ಮಾತನಾಡುತ್ತಿದ್ದಾರೆಂದು ಅವರು ತಿಳಿಸಿದ್ದಾರೆ.





