ಟರ್ಕಿ: ಪೊಲೀಸ್ ಕಟ್ಟಡದ ಹೊರಗೆ ಸ್ಫೋಟ; 20 ಮಂದಿಗೆ ಗಾಯ

ದಿಯರ್‌ಬಕಿರ್ (ಟರ್ಕಿ), ನ. 4: ಟರ್ಕಿಯ ಆಗ್ನೇಯದ ನಗರ ದಿಯರ್‌ಬಾಕಿರ್‌ನಲ್ಲಿರುವ ಪೊಲೀಸ್ ಕಟ್ಟಡವೊಂದರ ಹೊರ ಭಾಗದಲ್ಲಿ ಶುಕ್ರವಾರ ಮುಂಜಾನೆ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಸುಮಾರು 20 ಮಂದಿ ಗಾಯಗೊಂಡಿದ್ದಾರೆ ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.
ಈ ನಗರವು ಟರ್ಕಿಯ ಕುರ್ದಿಶ್ ಸಮುದಾಯದ ಕೇಂದ್ರವಾಗಿದೆ.
ದೇಶದ ಪ್ರಮುಖ ಕುರ್ದಿಶ್ ಪರ ಪಕ್ಷದ ಇಬ್ಬರು ನಾಯಕರು ಮತ್ತು ಹಲವಾರು ಸಂಸದರನ್ನು ಪೊಲೀಸರು ಬಂಧಿಸಿದ ಗಂಟೆಗಳ ಬಳಿಕ ಸ್ಫೋಟ ಸಂಭವಿಸಿದೆ.
Next Story





