‘ತುಳುನಾಡ ಬಾಲೆ ಬಂಗಾರ್’ ಮುದ್ದು ಮಕ್ಕಳ ಫೋಟೊ ಸ್ಪರ್ಧೆ
ಮಂಜೇಶ್ವರ, ನ.4: ತುಳುವೆರೆ ಆಯನೋ ಕೂಟೊ ಬದಿಯಡ್ಕದ ಆಶ್ರಯದಲ್ಲಿ ಡಿ.9ರಿಂದ ಮೊದಲ್ಗೊಂಡು 13ರವರೆಗೆ ಬದಿಯಡ್ಕದಲ್ಲಿ ನಡೆಯಲಿರುವ ವಿಶ್ವ ತುಳುವೆರೆ ಆಯನೋ-2016 ಅಂಗವಾಗಿ ವಿಶ್ವ ತುಳುವೆರೆ ಆಯನೋ ಮಂಜೇಶ್ವರ ಪಂಚಾಯತ್ ಸಮಿತಿಯ ವತಿಯಿಂದ ‘ಮಕ್ಕಳ ದಿನಾಚರಣೆ’ ಪ್ರಯುಕ್ತ ತುಳುನಾಡಿನ ‘ತುಳುನಾಡ ಬಾಲೆ ಬಂಗಾರ್’ ಎಂಬ ಮಕ್ಕಳ ಫೋಟೊ ಸ್ಪರ್ಧೆ ನಡೆಯಲಿದೆ.
ಸ್ಪರ್ಧೆಯಲ್ಲಿ ಭಾಗವಹಿಸುವ ಮಕ್ಕಳ ಪೋಷಕರು ತಮ್ಮ 4 ವರ್ಷದೊಳಗಿನ ಮಗುವಿನ 6್ಡ9 ಇಂಚಿನ 1 ಭಾವಚಿತ್ರವನ್ನು ನ.20ರೊಳಗೆ ಕಳುಹಿಸಬೇಕು. ಭಾವಚಿತ್ರದ ಹಿಂದೆ ಮಗುವಿನ ಹೆಸರು, ಜನನ ದಿನಾಂಕ, ಹೆತ್ತವರ ಹೆಸರು ಮತ್ತು ವಿಳಾಸ, ದೂ.ಸಂ. ಭಾವಚಿತ್ರ ತೆಗೆದ ಛಾಯಾಚಿತ್ರಗಾರರ ಹೆಸರು, ಸ್ಟುಡಿಯೋ ಹೆಸರನ್ನು ಸ್ಪಷ್ಟವಾಗಿ ಬರೆದಿರಬೇಕು. ತುಳುನಾಡ ಉಡುಗೆ-ತೊಡುಗೆಯ ಸಂಸ್ಕೃತಿಯನ್ನು ಬಿಂಬಿಸಲು ಈ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಭಾವಚಿತ್ರ ದಲ್ಲಿ ಮುದ್ದು ಮಕ್ಕಳ ನೈಜತೆಯ ಹಾವ- ಭಾವಕ್ಕೆ ಪ್ರಾಧಾನ್ಯತೆ ಕಲ್ಪಿಸುವಂತಿರಬೇಕು.
ಸ್ಪರ್ಧೆಯಲ್ಲಿ ಪ್ರಥಮ. ದ್ವಿತೀಯ, ತೃತೀಯ, ಚತುರ್ಥ, ಪಂಚಮ ಬಹುಮಾನಗಳು ಹಾಗೂ ಆಯ್ದು 50 ಮಂದಿ ಮುದ್ದು ಕಂದಮ್ಮಗಳಿಗೆ ಸಮಾಧಾನಕರ ಬಹುಮಾನ ನೀಡಲಾಗುವುದು.
ಸ್ಪರ್ಧೆಯಲ್ಲಿ ವಿಜೇತರಾದ ಭಾವಚಿತ್ರವನ್ನು ವಿಶ್ವ ತುಳುವರೆ ಆಯನೋದ ‘ತುಳುನಾಡ ತೇರು’ ಆಗಮಿಸುವ ನ.25ರಂದು ನಡೆಯುವ ಸಮಾರಂಭದಲ್ಲಿ ಪ್ರದರ್ಶನಕ್ಕಿಡಲಾಗುವುದು. ಅಂದು ವೇದಿಕೆಯಲ್ಲಿ ಉಪಸ್ಥಿತರಿರುವ ಗಣ್ಯರ ಸಮ್ಮುಖದಲ್ಲಿ ಬಹುಮಾನ ವಿತರಿಸಲಾಗುವುದು.
ಈ ಸ್ಪರ್ಧೆಗೆ ಕಾಸರಗೋಡು, ದ.ಕ., ಉಡುಪಿ, ಕೊಡಗು ಜಿಲ್ಲೆಯವರು ಭಾಗವಹಿಸಬಹುದು. ಭಾವಚಿತ್ರವನ್ನು ಹಾಗೂ ಸಂಪೂರ್ಣ ವಿವರವನ್ನು ಬರೆದು ಸಂಕಬೈಲು ಸತೀಶ ಅಡಪ, ಅಧ್ಯಕ್ಷರು, ವಿಶ್ವ ತುಳುವೆರೆ ಆಯನೋ ಮಂಜೇಶ್ವರ ಪಂಚಾಯತ್ ಸಮಿತಿ, ಅನುಗ್ರಹ ಇಂಡಸ್ಟ್ರೀಸ್ ಹೊಸಂಗಡಿ, ಮಂಜೇಶ್ವರ, ಕಾಸರಗೋಡು ಜಿಲ್ಲೆ -671323 ಇಲ್ಲಿಗೆ ಕಳುಹಿಸಬಹುದು.
ಹೆಚ್ಚಿನ ಮಹಿತಿಗಾಗಿ ಮೊ.ನಂ.: 9746368580 ಸಂಚಾರಿವಾಣಿ ಸಂಖ್ಯೆಯನ್ನು ಸಂಪರ್ಕಿಸಲು ಪ್ರಕಟನೆಯಲ್ಲಿ ಕೋರಿದೆ.





