ಇಂದಿನ ಕಾರ್ಯಕ್ರಮ
ಉಡುಪಿ ಜಿಲ್ಲೆ
ಜನಸ್ಪಂದನ: ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅಧ್ಯಕ್ಷತೆಯಲ್ಲಿ ಉಡುಪಿ ಹೋಬಳಿ ಮಟ್ಟದ ಜನಸ್ಪಂದನಾ ಕಾರ್ಯಕ್ರಮ. ಸಮಯ: ಬೆಳಗ್ಗೆ 11ಕ್ಕೆ. ಸ್ಥಳ:ಬ್ರಹ್ಮಶ್ರೀ ನಾರಾಯಣಗುರು ಸಭಾಭವನ, ಬನ್ನಂಜೆ ಉಡುಪಿ. ರಕ್ತದಾನ ಶಿಬಿರ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ, ಜಿಲ್ಲಾ ಆಸ್ಪತ್ರೆ ರಕ್ತನಿಧಿ ಕೇಂದ್ರ, ಲಯನ್ಸ್ ಕ್ಲಬ್ ಉಡುಪಿ ಮಿಡ್‌ಟೌನ್ ಹಾಗೂ ಉಡುಪಿ ಎಚ್‌ಡಿಎಫ್‌ಸಿ ಬ್ಯಾಂಕ್ ಸಹಯೋಗದಲ್ಲಿ ಆಯೋಜಿಸಿದ 8ನೆ ವರ್ಷದ ಬೃಹತ್ ರಕ್ತದಾನ ಶಿಬಿರ. ಸಮಯ: ಬೆಳಗ್ಗೆ 10ರಿಂದ. ಸ್ಥಳ: ಅಟಲ್ ಬಿಹಾರಿ ವಾಜಪೇಯಿ ಸಭಾಂಗಣ, ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ, ಮಣಿಪಾಲ. ಸಂಸ್ಕೃತಿ-2016: ರೋಟರಿ ಉಡುಪಿ ವತಿಯಿಂದ ರೋಟರಿ ಸಾಂಸ್ಕೃತಿಕ ಉತ್ಸವ 2016ರಲ್ಲಿ ಸಾಂಸ್ಕೃತಿಕ ಸ್ಪರ್ಧೆ, ಜನಪದ ಲೋಕ, ಕೃಷಿ ಮೇಳ ಹಾಗೂ ಆಹಾರೋತ್ಸವ. ಸಮಯ: ಅಪರಾಹ್ನ 3ಕ್ಕೆ. ಸ್ಥಳ: ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪ, ಉಡುಪಿ.
ವಾರ್ಷಿಕ ಮಹಾಸಭೆ: ಮಣಿಪಾಲ ವಿವಿ ಸ್ಕೂಲ್ ಆಫ್ ಲೈಫ್ ಸಾಯನ್ಸ್ ಹಾಗೂ ಸೊಸೈಟಿ ಆಫ್ ಬಯಾಲಾಜಿಕಲ್ ಕೆಮಿಸ್ಟ್ ಇವುಗಳ ಜಂಟಿ ಆಶ್ರಯದಲ್ಲಿ ಕರಾವಳಿ ಕರ್ನಾಟಕ ವಲಯ ಸೊಸೈಟಿ ಆಫ್ ಬಯಾಲಾಜಿಕಲ್ ಕೆಮಿಸ್ಟ್ ಇದರ ಐದನೆ ವಾರ್ಷಿಕ ಮಹಾಸಭೆ. ಸಮಯ: ಬೆಳಗ್ಗೆ 9ರಿಂದ. ಸ್ಥಳ: ಲೆಕ್ಚರ್ ಹಾಲ್, ಇಂಟರ್ಯಾಕ್ಟ್ ಬಿಲ್ಡಿಂಗ್ ಮಣಿಪಾಲ. ಸಮಾಧಾನ ಮಹೋತ್ಸವ: ಫೆಲೋಶಿಪ್ ಆಫ್ ಉಡುಪಿ ಜಿಲ್ಲಾ ಚರ್ಚ್‌ಗಳ ಒಕ್ಕೂಟದ ವತಿಯಿಂದ ‘ಸಮಾಧಾನದ ಮಹೋತ್ಸವ’ ಆಧ್ಯಾತ್ಮಿಕ ಕಾರ್ಯಕ್ರಮದ ಉದ್ಘಾಟನೆ. ಸಮಯ: ಸಂಜೆ 5:30ರಿಂದ. ಸ್ಥಳ: ಕ್ರಿಶ್ಚಿಯನ್ ಪಿ.ಯು.ಕಾಲೇಜು ಮೈದಾನ,ಮಿಷನ್ ಕಾಂಪೌಂಡ್ ಉಡುಪಿ.
ಪೇಜಾವರ ಶ್ರೀಗಳ ಪರ್ಯಾಯ: ಉಡುಪಿ ಶ್ರೀಕೃಷ್ಣ ಮಠದಲ್ಲಿ ಸಂಜೆ 5ಕ್ಕೆ ಚಂದ್ರಶಾಲೆ ಪುರಾಣ ವಿದ್ವಾನ್ ಬ್ರಹ್ಮಣ್ಯತೀರ್ಥಾಚಾರ್ಯರಿಂದ ಪ್ರವಚನ, 5:45ಕ್ಕೆ ರಾಜಾಂಗಣದಲ್ಲಿ ಧಾರ್ಮಿಕ ಉಪನ್ಯಾಸ ಬಳಿಕ ಪೇಜಾವರ ಶ್ರೀಗಳಿಂದ ಅನುಗ್ರಹ ಸಂದೇಶ. ರಾತ್ರಿ 7:30ಕ್ಕೆ ತುಳಸಿ ಪೂಜೆ. 7ರಿಂದ ರಾಜಾಂಗಣದಲ್ಲಿ ಯಕ್ಷ ಮಹಿಳಾ ಬಳಗ ಕೋಟ ಇವರಿಂದ ಯಕ್ಷಗಾನ ‘ಸುಧನ್ವ ಕಾಳಗ’.
ಸಾರ್ವಜನಿಕ ಅಹವಾಲು ಸಭೆ: ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು ಉಡುಪಿ ತಾಲೂಕಿನ ನಂದಿಕೂರು ಗ್ರಾಮದಲ್ಲಿ 35.06 ಹೆಕ್ಟೇರ್ (86.64 ಎಕರೆ) ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿ ಯೋಜನೆ ಕುರಿತು ಸಾರ್ವಜನಿಕ ಅಹವಾಲು ಆಲಿಕೆ ಸಭೆ. ಸಮಯ: ಬೆಳಗ್ಗೆ 10:30ಕ್ಕೆ. ಸ್ಥಳ: ಅಡ್ವೆ ಪಲಿಮಾರು ಕ್ರಾಸಿನ ಆನಂದಿ ಸಭಾಭವನ, ನಂದಿಕೂರು ಗ್ರಾಮ ಪಡುಬಿದ್ರೆ.
ಯಕ್ಷ ಪೌರ್ಣಮಿ: ನಮ್ಮ ಭೂಮಿಯ ಸಾಂಸ್ಕೃತಿಕ ವೇದಿಕೆ ನಮ್ಮ ಯಕ್ಷಭೂಮಿ ಪ್ರಥಮ ವರ್ಷದ ಸಂಭ್ರಮ ಯಕ್ಷ ಪೌರ್ಣಮಿ-2016 ದೀವಟಿಕೆ-ದೀವಳಿಗೆ ಉದ್ಘಾಟನಾ ಸಮಾರಂಭ. ಸಮಯ: ಸಂಜೆ 5:30ರಿಂದ. ಸ್ಥಳ: ನಮ್ಮಭೂಮಿ, ಹಟ್ಟಿಯಂಗಡಿ ಕ್ರಾಸ್ ಕುಂದಾಪುರ.





