ಎಸ್ಸೆಸೆಫ್‌ನಿಂದ ಮಾನವತಾ ಸಂಚಲನಾ ಬೈಕ್ ರ್ಯಾಲಿ

ಮಂಗಳೂರು, ಅ. 4: ಧಾರ್ಮಿಕ ಮತ್ತು ಲೌಕಿಕ ಶಿಕ್ಷಣದ ಕೊರತೆಯಿಂದ ಕೆಲವರು ಹಾದಿ ತಪ್ಪುತ್ತಿದ್ದಾರೆ. ಧಾರ್ಮಿಕ ಮತ್ತು ಲೌಕಿಕ ಶಿಕ್ಷಣಕ್ಕೆ ಎಲ್ಲರು ಒತ್ತು ನೀಡಿ ಶಿಕ್ಷಣ ಬೆಳವಣಿಗೆಗೆ ಸಹಕರಿಸಬೇಕೆಂದು ಎಸ್ಸೆಸೆಫ್ ಜಿಲ್ಲಾಧ್ಯಕ್ಷ ಹಾಫಿಝ್ ಯಾಕೂಬ್ ಸಅದಿ ಹೇಳಿದ್ದಾರೆ.
ಅವರು ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಆಶ್ರಯದಲ್ಲಿ ಎಸ್‌ಇಡಿಸಿ ಸ್ಫಟಿಕ ಸಂಭ್ರಮದ ಪ್ರಚಾರ ಮತ್ತು ಕರ್ನಾಟಕ ಯಾತ್ರೆಯ ಸ್ಮರಣಾರ್ಥ ಶುಕ್ರವಾರ ತಲಪಾಡಿಯಿಂದ ತೊಕ್ಕೊಟ್ಟು ವರೆಗೆ ಹಮ್ಮಿಕೊಳ್ಳಲಾದ ಮಾನವತಾ ಸಂಚಲನಾ ಬೈಕ್ ರ್ಯಾಲಿಯ ಸಮಾರೋಪದಲ್ಲಿ ಮಾತನಾಡಿದರು. ಕೇಂದ್ರ ಸರಕಾರ ಜಾರಿ ಮಾಡಲುದ್ದೇಶಿಸಿರುವ ಏಕರೂಪ ಶಾಸನ ಧಾರ್ಮಿಕ ಸಿದ್ದಾಂತಕ್ಕೆ ವಿರುದ್ಧವಾಗಿದ್ದು, ಇದನ್ನು ಎಲ್ಲರೂ ವಿರೋಧಿಸಲೇ ಬೇಕೆಂದು ಕರೆ ನೀಡಿದರು.
ಸಚಿವ ಖಾದರ್ ಮಾತನಾಡಿ, ಎಸ್ಸೆಸೆಫ್ ವಿವಿಧ ಉದ್ದೇಶಗಳನ್ನಿಟ್ಟು ಮಾಡುತ್ತಿರುವ ಮಾನವತಾ ಸಂಚಲನಾ ರ್ಯಾಲಿ ಬಹಳಷ್ಟು ಮಹತ್ವತೆ ಪಡೆದಿದೆ. ಇಂತಹ ಕಾರ್ಯಕ್ರಮಗಳಿಂದ ಸಮಾಜದ ಎಡರು ತೊಡರುಗಳನ್ನು ಸರಿಪಡಿಸಿಕೊಂಡು ಬರಲು ಸಾಧ್ಯವಾಗುತ್ತದೆ ಎಂದರು.
ಎಸ್ ವೈಎಸ್ ರಾಜ್ಯಾಧ್ಯಕ್ಷ ಬಾಫಕಿ ಮುಸ್ಲಿಯಾರ್‌ರವರು ಝಿಯಾರತ್ ಮಾಡುವ ಮೂಲಕ ರ್ಯಾಲಿಗೆ ಚಾಲನೆ ನೀಡಿದರು. ಎಸ್ಸೆಸ್ಸೆಫ್ ಜಿಲ್ಲಾ ಉಪಾಧ್ಯಕ್ಷ ಕೆ.ಪಿ. ಸಿರಾಜುದ್ದೀನ್ ಸಖಾಫಿ ಕನ್ಯಾನ ಉದ್ಘಾಟಿಸಿದರು. ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಉಪಾಧ್ಯಕ್ಷ ಮುಸ್ತಫಾ ಝುಹ್‌ರಿ ಕಾರ್ಯಕ್ರಮದ ಅಧ್ಯಕ್ಷತೆ ವಸಿದ್ದರು. ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಉಪಾಧ್ಯಕ್ಷ ಜಮಾಲುದ್ದೀನ್ ಸಖಾಫಿ, ಕಾರ್ಯದರ್ಶಿ ಖುಬೈಬ್ ತಂಙಳ್, ದ.ಕ. ಜಿಲ್ಲಾ ಎಸ್ಸೆಸ್ಸೆಫ್ ಕೋಶಾಧಿಕಾರಿ ಅಲ್ತಾಫ್ ಕುಂಪಲ, ಸುಲೈಮಾನ್ ಹಾಜಿ ಅಸೈಗೋಳಿ ಮೊದಲಾದವರು ಉಪಸ್ಥಿತರಿದ್ದರು. ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಪ್ರಧಾನ ಕಾರ್ಯದರ್ಶಿ ಇಸ್ಮಾಯೀಲ್ ಮಾಸ್ಟರ್ ಸ್ವಾಗತಿಸಿದರು.







