ಪ್ರೆಸ್ಟೀಜ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ರಸ್ತೆ ಸುರಕ್ಷತೆ, ಪ್ರಥಮ ಚಿಕಿತ್ಸೆಯ ಕುರಿತು ಜನಜಾಗೃತಿ ಕಾರ್ಯಕ್ರಮ

ಮಂಗಳೂರು, ನ.4: ರಸ್ತೆ ಸುರಕ್ಷತೆ ಮತ್ತು ಪ್ರಥಮ ಚಿಕಿತ್ಸೆಯ ಕುರಿತು ಜನಜಾಗೃತಿ ಕಾರ್ಯಕ್ರಮವು ಪ್ರೆಸ್ಟೀಜ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಇತ್ತೀಚೆಗೆ ನಡೆಯಿತು.
ಮುಖ್ಯ ಅಥಿತಿಗಳಾಗಿ ಭಾಗವಹಿಸಿದ್ದ ಎಸ್ಸೈ ಆರ್.ಕೆ.ಗವರ್, ಕದ್ರಿ ಪೂರ್ವ ಸಂಚಾರ ವಿಭಾಗದ ಎಎಸ್ಸೈ ಸುರೇಶ್ ಐತಾಳ್, ಕೆ.ಎಸ್.ಹೆಗ್ಡೆ ಆಸ್ಪತ್ರೆಯ ವೈದ್ಯ ಡಾ.ಹಸೀಬ್ ಅಮನ್, ಸಂಚಾರ ಪೊಲೀಸ್ ಅಧಿಕಾರಿ ದಯಾನಂದ ಮತ್ತು ಇಮ್ತಿಯಾಝ್ ರಸ್ತೆ ಸುರಕ್ಷತಾ ಕ್ರಮಗಳ ಕುರಿತು ವೀಡಿಯೋ ಕ್ಲಿಪ್ಪಿಂಗ್ ಸಹಿತ ಹಾಗೂ ಪ್ರಥಮ ಚಿಕಿತ್ಸಾ ವಿಧಾನಗಳ ಕುರಿತು ವಿವರವಾದ ಮಾಹಿತಿ ನೀಡಿದರು.
ಗೌರವ ಅತಿಥಿಗಳಾಗಿ ಶಾಲಾ ವ್ಯವಸ್ಥಾಪಕ ಅಧ್ಯಕ್ಷ ರೇಷ್ಮಾ ಹೈದರ್, ಪ್ರಾಂಶುಪಾ ಫಿರೋಝಾ ಫಯಾಝ್, ಸಾರ್ವಜನಿಕ ಸಂಪನ್ಮೂಲ ಅಧಿಕಾರಿ ದೀಪಾಲಿ ಶೆಣೈ ಹಾಗೂ ಹೀನಾ ಹಸೀಬ್ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳು ಸಂಚಾರ ನಿಯಮಗಳನ್ನು ಹಾಡಿನ ಮೂಲಕ ಹಾಗೂ ಪ್ರಥಮ ಚಿಕಿತ್ಸಾ ವಿಧಾನವನ್ನು ಪಿ.ಪಿ.ಟಿ ಪ್ರೆಸೆಂಟೇಶನಿನ ಮೂಲಕ ಪ್ರಸ್ತುತ ಪಡಿಸಿದರು. ಶಾಲಾ ಅಧ್ಯಕ್ಷ ಹೈದರ್ ಅಲಿ ಅತಿಥಿಗಳನ್ನು ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕವೃಂದವರು ಉಪಸ್ಥಿತರಿದ್ದು, ಉಪಯುಕ್ತ ಮಾಹಿತಿಗಳನ್ನು ಪಡೆದರು.





