ಬೆಳಗಾವಿ ಮೇಯರ್,ಉಪಮೇಯರ್, ಶಾಸಕರುಗಳ ನಾಮಫಲಕಗಳಿಗೆ ಮಸಿ ಬಳಿದ ಕರವೇ

ಬೆಳಗಾವಿ, ನ.5: ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆಯನ್ನು ವಿರೋಧಿಸಿ ಕರ್ನಾಟಕ ರಕ್ಷಣ ವೇದಿಕೆ( ನಾರಾಯಣ ಗೌಡ ಬಣ) ಕಾರ್ಯಕರ್ತರು ಇಂದು ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ‍್, ಉಪಮೇಯರ‍್ ನಾಮಫಲಕಗಳಿಗೆ ಮಸಿ ಬಳಿದಿದ್ದಾರೆ.
ಬೆಳಗ್ಗೆ ಕನ್ನಡ ಪರ ಘೋಷಣೆ ಕೂಗುತ್ತಾ ಪಾಲಿಕೆಯ ಕಚೇರಿ ನುಗ್ಗಿದ ಕರವೇ ಕಾರ್ಯಕರ್ತರು ಮೇಯರ್, ಉಪ ಮೇಯರ್ ಮತ್ತು ಅಲ್ಲಿರುವ ಇಬ್ಬರು ಶಾಸಕರುಗಳ ಕಚೇರಿ ನಾಮಫಲಕಕ್ಕೆ ಕಪ್ಪು ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ ಪಾಲಿಕೆ ಮೇಯರ್ ಸರಿತಾ ಪಾಟೀಲ್ ಹಾಗೂ ಉಪಮೇಯರ್ ಸಂಜಯ್ ಶಿಂಧೆ ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವದ ದಿನ ಕಪ್ಪು ಪಟ್ಟಿ ಧರಿಸಿ ಕರಾಳ ದಿನ ಆಚರಿಸಿದ್ದ ಆರೋಪ ಹೊಂದಿದ್ದಾರೆ. ಇಬ್ಬರು ಶಾಸಕರುಗಳಾದ ಸಂಭಾಜಿ ಪಾಟೀಲ್ ಮತ್ತು ಸಂಜಯ್ ಪಾಟೀಲ್ ಅವರ ಕಚೇರಿ ನಾಮಫಲಕ ಮತ್ತು ಬಾಗಿಲಿಗೂ ಕರವೇ ಕಾರ್ಯಕರ್ತರು ಮಸಿ ಬಳಿದು ಪ್ರತಿಭಟನೆ ನಡೆಸಿದರು. ಪೊಲೀಸರು ಸ್ಥಳಕ್ಕೆ ಆಗಮಿಸಿ ಐವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
Next Story





