ಶಾಂತಾ ದೇವಿ! : ಈಕೆ ಭಾರತದ ಪ್ರಪ್ರಥಮ ಮಹಿಳಾ ಟ್ರಕ್ ಮೆಕ್ಯಾನಿಕ್

ಮಹಿಳೆ ಈ ಕೆಲಸಕ್ಕೆ ಸರಿಯಾಗುವುದಿಲ್ಲ, ಇದು ಮಹಿಳೆಯ ಕೆಲಸವಲ್ಲ, 50 ಕೆ.ಜಿ ಟ್ರಕ್ ಟೈರನ್ನು ಮಹಿಳೆ ಎತ್ತಬಲ್ಲಳೆ? ಜ್ಯಾಕ್ ಹಾಕುವುದು ಹೇಗೆಂದು ಮಹಿಳೆಗೆ ಗೊತ್ತಿದೆಯೇ? ಮಹಿಳೆಯೊಬ್ಬರು ಮೆಕ್ಯಾನಿಕ್ ಕೆಲಸ ಮಾಡುತ್ತಾರೆಂದರೆ ಇಂತಹ ಹಲವಾರು ಸಂದೇಹಗಳು ಏಳುತ್ತವೆ. ಆದರೆ ಶಾಂತಿ ದೇವಿ ಇವೆಲ್ಲವನ್ನೂ ವೃತ್ತಿಪರತೆಯಿಂದ ಮಾಡುತ್ತಾರೆ.
ಏಷ್ಯಾದ ಅತೀ ದೊಡ್ಡ ಟ್ರಕ್ ನಿಲ್ದಾಣವಾಗಿರುವ ಸಂಜಯ್ ಟ್ರಾನ್ಸ್‌ಪೋರ್ಟ್ ನಗರದಲ್ಲಿ ಸಣ್ಣ ಚಹಾ ಅಂಗಡಿಯಿದೆ. ಅದರ ಪಕ್ಕದಲ್ಲೇ ಅಟೋಮೊಬೈಲ್ ವರ್ಕ್‌ಶಾಪ್‌ನಲ್ಲಿ 55 ವರ್ಷದ ಶಾಂತಿ ದೇವಿ ಕೆಲಸ ಮಾಡುತ್ತಾರೆ. ತಮ್ಮ ಪತಿಯೊಂದಿಗೆ ಈ ಎರಡೂ ಅಂಗಡಿಗಳನ್ನು ಶಾಂತಿ ದೇವಿ ನಡೆಸುತ್ತಾರೆ. ಪಂಕ್ಚರ್ ಸರಿಮಾಡಲೆಂದು ಅಂಗಡಿ ಹೊರಗೆ ನಿಂತಿರುವ ಟ್ರಕ್‌ಗಳಿಗೆ ಇವರೂ ಮೆಕ್ಯಾನಿಕ್. ಭಾರತದ ಮೊದಲ ಮಹಿಳಾ ಟ್ರಕ್ ಮೆಕ್ಯಾನಿಕ್ ಆಗಿರುವ ಶಾಂತಿ ದೇವಿ ಕಳೆದ 20 ವರ್ಷಗಳಿಂದ ಈ ಕೆಲಸದಲ್ಲಿ ತೊಡಗಿದ್ದಾರೆ. ತಮ್ಮ ಈ ಉದ್ಯೋಗದ ಬಗ್ಗೆ ಅವರಿಗೆ ಬಹಳ ಹೆಮ್ಮೆಯಿದೆ. "ಆಟೋಮೊಬೈಲ್ಸ್ ಬಗ್ಗೆ ಮತ್ತು ಟೈರ್‌ಗಳನ್ನು ಬದಲಿಸುವುದನ್ನು ಪತಿ ಮತ್ತು ಇತರ ಕೆಲಸಗಾರರು ಮಾಡುವ ಕೆಲಸವನ್ನು ನೋಡಿಯೇ ಕಲಿತೆ. ಇಂದು ನಾನು ಹಲವು ಪುರುಷರಿಗಿಂತ ಉತ್ತಮ ಮೆಕ್ಯಾನಿಕ್ ಎಂದು ಪ್ರತೀ ದಿನ ನನ್ನ ಕೆಲಸದಲ್ಲಿ ತೋರಿಸಿಕೊಡುತ್ತಿದ್ದೇನೆ. ಮಹಿಳೆಯರಿಗೆ ಇಷ್ಟವಾದರೆ ಅವರು ಯಾವ ಕೆಲಸ ಬೇಕಾದರೂ ಮಾಡಬಲ್ಲರು. ನಾನು ಈ ಕೆಲಸಕ್ಕೆ ಹೊರಡುವಾಗ ಪುರುಷರು ಈಗಲೂ ಅಚ್ಚರಿಯಿಂದ ಮತ್ತು ಆಸಕ್ತಿಯಿಂದ ಗಮನಿಸುತ್ತಾರೆ" ಎನ್ನುತ್ತಾರೆ ಶಾಂತಿ ದೇವಿ.





