ಸಮಾಜ ಕಲ್ಯಾಣ ಇಲಾಖೆಯಲ್ಲಿ ಅಕ್ರಮ: ಐವರು ಸಹಾಯಕ ನಿರ್ದೇಶಕರ ಅಮಾನತು

ಕೋಲಾರ, ನ.5: ಕೋಲಾರ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯಲ್ಲಿ ವಿದ್ಯಾರ್ಥಿ ನಿಲಯಗಳಿಗೆ ಸಂಬಂಧಿಸಿದ ಸಾಮಗ್ರಿಗಳ ಖರೀದಿಯಲ್ಲಿ ನಡೆದಿರುವ ಅವ್ಯವಹಾರ ಸಾಬೀತಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ಇಲಾಖೆಯ ಐವರು ಸಹಾಯಕ ನಿರ್ದೇಶಕರನ್ನು ಅಮಾನತುಗೊಳಿಸಲಾಗಿದೆ.
ಸಹಾಯಕ ನಿರ್ದೇಶಕರಾದ ಮಾಲೂರಿನ ರಾಮಸ್ವಾಮಿ, ಅನಸೂಯಮ್ಮ ಶ್ರೀನಿವಾಸಪುರ, ಶಾಂತಮ್ಮ ಬಂಗಾರಪೇಟೆ, ಶಿವಕುಮಾರ್ ಮುಳಬಾಗಿಲು ಹಾಗೂ ಕಸ್ತೂರಿಬಾಯಿ ಅಮಾನತು ಗೊಂಡ ಅಧಿಕಾರಿಗಳಾಗಿದ್ದಾರೆ.
ಸಮಾಜ ಕಲ್ಯಾಣ ಇಲಾಖೆಯಲ್ಲಿ ಜಿಲ್ಲಾ ವ್ಯಾಪ್ತಿಯ ಹಾಸ್ಟಲ್ಗಳಿಗೆ ಸಾಮಗ್ರಿಗಳ ಖರೀದಿಯಲ್ಲಿ 1.60 ಕೋಟಿ ಅವ್ಯವಹಾರ ನಡೆದಿತ್ತು. ಈ ಬಗ್ಗೆ ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕಚಂದ್ರ ಮತ್ತು ಜಿಲ್ಲಾ ಪಂಚಾಯತ್ ಸಿಇಒ ಬಿ.ಬಿ.ಕಾವೇರಿಯವರು ಸಮಾಜ ಕಲ್ಯಾಣ ಇಲಾಖೆ ಆಯುಕ್ತರಿಗೆ ಜಂಟಿ ವರದಿ ಸಲ್ಲಿಸಿದ್ದರು.
Next Story





