ರೋಶನ್ ಬೇಗ್ ವಿರುದ್ಧ ಆರೋಪಕ್ಕೆ ಶೋಭಾ ಬಳಿ ಸಾಕ್ಷ ಏನಿದೆ : ಸಿಎಂ ಪ್ರಶ್ನೆ

ಬೆಂಗಳೂರು, ನ.5: ಆರ್‌ಎಸ್‌ಎಸ್ ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ಮತ್ತು ಸಚಿವ ರೋಶನ್ ಬೇಗ್ ಕೈವಾಡ ಇದೆ ಎಂದು ಆರೋಪಿಸುವುದಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಬಳಿ ಸಾಕ್ಷ ಏನಿದೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿ ನಾಯಕರು ರುದ್ರೇಶ್ ಹತ್ಯೆಯನ್ನು ಮುಂದಿಟ್ಟುಕೊಂಡು ರಾಜಕೀಯ ಲಾಭ ಪಡೆಯುವ ಯತ್ನದಲ್ಲಿದ್ದಾರೆ.
ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಕೆಡಿಸುವುದರಲ್ಲಿ ಬಿಜೆಪಿ ನಿರತವಾಗಿದೆ.
ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜಕೀಯ ಲಾಭಕ್ಕಾಗಿ ಬಿಜೆಪಿ ಸುಳ್ಳುವ ಆರೋಪ ಮಾಡುತ್ತಾ ಸಮಾಜದಲ್ಲಿನ ಸ್ವಾಸ್ಥವನ್ನು ಕೆಡಿಸಲು ಹೊರಟಿದೆ ಎಂದು ಸಿಎಂ ಆರೋಪಿದರು.
Next Story





