ಬೈಕ್ ಸವಾರನಿಂದ 5 ಲಕ್ಷ ರೂ. ದರೋಡೆಗೈದ ಆರೋಪಿಯ ಸೆರೆ

ಕಾಸರಗೋಡು, ನ.5: ಬೈಕ್ ಸವಾರನೊಬ್ಬನನ್ನು ಬೆದರಿಸಿ ಐದು ಲಕ್ಷ ರೂ. ದರೋಡೆಗೈದ ಪ್ರಕರಣದ ಪ್ರಮುಖ ಆರೋಪಿಯೊಬ್ಬನನ್ನು ಎರಡು ವರ್ಷಗಳ ಬಳಿಕ ವಿದ್ಯಾನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಉಪ್ಪಳ ಕೊಡಿಬೈಲ್ನ ಉಮರ್ ಫಾರೂಕ್ ಇಬ್ರಾಹೀಂ(36) ಬಂಧಿತ ಆರೋಪಿ. ಈತನನ್ನು ತಿರುವನಂತಪುರ ವಿಮಾನ ನಿಲ್ದಾಣದಿಂದ ಬಂಧಿಸಲಾಗಿದೆ.
2014ರ ಜುಲೈ ಏಳರಂದು ಬೇವಿಂಜೆ ಸ್ಟಾರ್ ನಗರದಲ್ಲಿ ಜಲೀಲ್ ಎಂಬವರ ಬೈಕ್ ತಡೆದು ಬೆದರಿಸಿ ಐದು ಲಕ್ಷ ರೂ. ದರೋಡೆಗೈಯಲಾಗಿತ್ತು. ಈ ಪ್ರಕರಣದ ಪ್ರಮುಖ ಆರೋಪಿಯಾಗಿ ಗುರುತಿಸಲ್ಪಟ್ಟಿದ್ದ ಇಬ್ರಾಹೀಂ ಬಳಿಕ ದುಬೈಗೆ ಪರಾರಿಯಾಗಿದ್ದನು. ಈತನ ಪತ್ತೆಗೆ ಪೊಲೀಸರು ಲುಕ್‌ಔಟ್ ನೋಟಿಸ್ ಹೊರಡಿಸಿದ್ದರು. ಪ್ರಕರಣದ ತನಿಖೆಯನ್ನು ಇಂಟರ್‌ಪೋಲ್ ನಡೆಸುತ್ತಿತ್ತು. ಈ ನಡುವೆ ಈತ ದುಬೈಯಿಂದ ಊರಿಗೆ ಬರುತ್ತಿರುವ ಬಗ್ಗೆ ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ಪೊಲೀಸ್ ನಿಲ್ದಾಣದಲ್ಲಿ ಬಂಧಿಸಿದ್ದಾರೆ.
Next Story





