ವಾಯು ಮಾಲಿನ್ಯ: ದಿಲ್ಲಿಯಲ್ಲಿ1,700 ಪ್ರಾಥಮಿಕ ಶಾಲೆಗಳಿಗೆ ಇಂದು ರಜೆ!

ಹೊಸದಿಲ್ಲಿ,ನ. 5: ವಾಯು ಮಲಿನೀಕರಣದಿಂದಾಗಿ ದಿಲ್ಲಿಯಲ್ಲಿ ಇಂದು 1,700 ಪ್ರಾಥಮಿಕ ಶಾಲೆಗಳಿಗೆ ಸರಕಾರ ಇಂದು ರಜೆಘೋಷಿಸಿದೆ. ಮೂರು ನಗರಸಭೆ ವ್ಯಾಪ್ತಿಯ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ವರದಿಯಾಗಿದೆ.
ದಕ್ಷಿಣ ದಿಲ್ಲಿನಗರಸಭೆ, ಉತ್ತರದಿಲ್ಲಿ ನಗರಸಭೆ, ಪೂರ್ವ ದಿಲ್ಲಿ ನಗರಸಭೆಯ ಅಧೀನದಲ್ಲಿ ಬರುವ ಪ್ರಾಥಮಿಕ ಶಾಲೆಗಳಲ್ಲಿ ಕಲಿಯುತ್ತಿರುವ ಹತ್ತು ಲಕ್ಷ ಮಕ್ಕಳಿಗೆ ಈ ರಜೆ ಅನ್ವಯವಾಗಿದೆ.
ಪ್ರಾರ್ಥನೆ, ಮತ್ತು ಇತರ ಪಠ್ಯಚಟುವಟಿಕೆಗಳನ್ನು ತರಗತಿ ಕೋಣೆಯಹೊರಗೆ ಮಾಡುವುದನ್ನು ಮುಂಬರುವ ದಿನಗಳಲ್ಲಿ ತೊರೆಯಬೇಕೆಂದು ಅಧ್ಯಾಪಕರಿಗೆ ಸೂಚನೆ ಕಳುಹಿಸಲಾಗಿದೆ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.
ದೀಪಾವಳಿಯಿಂದಾಗಿ ದಿಲ್ಲಿಯಲ್ಲಿ ವಾಯು ಮಲಿನೀಕರಣದ ಪ್ರಮಾಣ ಕ್ರಮಾತೀತವಾಗಿ ಹೆಚ್ಚಳಗೊಂಡಿದೆ. ಮಲಿನವಸ್ತುಗಳನ್ನು ಸಾರ್ವಜನಿಕ ಪ್ರದೇಶಗಳಲ್ಲಿ ಉರಿಸುವುದು ಮತ್ತು ಅದನ್ನು ಎಸೆಯುವವರಿಗೆ 5,000 ರೂಪಾಯಿ ದಂಡ ವಿಧಿಸಲಾಗುವುದು ಎಂದು ನಗರಸಭೆ ಅಧಿಕಾರಿಗಳು ಹೇಳಿದ್ದಾರೆಂದು ವರದಿ ತಿಳಿಸಿದೆ.
Next Story





