ಸಮಾಜದಲ್ಲಿ ಸಹೋದರತೆ ಬೆಳೆಸಲಿಕ್ಕಾಗಿ ಬಿಜೆಪಿಯನ್ನು ದೂರವಿಡಬೇಕು: ಲಾಲು

ಪಾಟ್ನ, ನ. 5: " ಭಾರತೀಯ ಜನತಾಪಾರ್ಟಿಯನ್ನು ದೂರವಿಟ್ಟು ದೇಶದ ರಾಜಕೀಯವನ್ನು ಶುಚಿಗೊಳಿಸಬೇಕಾಗಿದೆ" ಎಂದು ಆರ್ಜೆಡಿ ಅಧ್ಯಕ್ಷ ಲಾಲುಪ್ರಸಾದ್ ಯಾದವ್ ಹೇಳಿದ್ದಾರೆಂದು ವರದಿಯಾಗಿದೆ. ಸಮಾಜವಾದಿ ಪಾರ್ಟಿಯ ರಜತ ಜಯಂತಿ ಸಮಾರಂಭದಲ್ಲಿ ಪಾಲ್ಗೊಳ್ಳಲು ಬಂದಿದ್ದ ಲಾಲು ಪ್ರಸಾದ್"ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಮೇಲೆ ಕೋಮುವಾದ ಹೆಚ್ಚಳಗೊಂಡಿದೆ. ಬಿಜೆಪಿಯನ್ನು ದೂರವಿಟ್ಟು ಸಹೋದರತೆಯನ್ನು ಹೆಚ್ಚಿಸಬೇಕಾಗಿದೆ" ಎಂದು ಹೇಳಿದ್ದಾರೆ. ಉತ್ತರಪ್ರದೇಶ ಚುನಾವಣೆಯ ಹಿನ್ನೆಲೆಯಲ್ಲಿ ಮಹಾಘಟಬಂಧನ್(ಮಹಾಮೈತ್ರಿ)ಕುರಿತು ಸ್ಪಷ್ಟವಾಗಿ ಯಾವುದೇ ಸೂಚನೆ ನೀಡಿಲ್ಲ. ಆದರೆ ಜಾತ್ಯತೀತ ಮತಗಳು ವಿಭಜನೆಯಾಗದಂತೆ ನೋಡಿಕೊಳ್ಳಲು ಎಲ್ಲ ಪ್ರಯತ್ನ ಮಾಡಬೇಕೆಂದು ಅಭಿಪ್ರಾಯಿಸಿದ್ದಾರೆ. ಒಂದು ವೇಳೆ ಹಾಗೆ ಮಾಡಿದರೆ ಬಿಹಾರದಂತೆ ಉತ್ತರಪ್ರದೇಶದಲ್ಲಿಯೂ ಬಿಜೆಪಿಯನ್ನು ಬಹಳ ಸುಲಭವಾಗಿ ಸೋಲಿಸಲು ಸಾಧ್ಯವಿದೆ ಎಂದು ಹೇಳಿದ್ದಾರೆ.
ಜ್ಞಾನೇಶ್ವರ್ ಮಿಶ್ರ ಪಾರ್ಕ್‌ನಲ್ಲಿ ಆಯೋಜಿಸಲಾದ ಸಮಾಜವಾದಿ ಪಕ್ಷದ ರಜತ ಜಯಂತಿಗೆ ಭಾರಿ ಜನಸಂದಣಿನೆರೆದಿದೆ. ಅಖಿಲೇಶ್ ಯಾದವ್ ಬೆಂಬಲಿಗರು ಅವರ ಫೋಟೊದೊಂದಿಗೆ ಕಾರ್ಯಕ್ರಮ ಸ್ಥಳದಲ್ಲಿ ನೆರೆದಿದ್ದಾರೆ. ವಿಧಾನಪರಿಷತ್ ಸದಸ್ಯ ಸನಿಯಾದವ್ ಪಾರ್ಟಿನೇತಾಜಿ(ಮುಲಾಯಂ ಸಿಂಗ್‌ಯಾದವ್)ಯವರದ್ದು ಮತ್ತು ಪಕ್ಷದ ಮುಖ ಅಖಿಲೇಶ್ ಯಾದವ್ ಆಗಿದ್ದಾರೆ. ಆದ್ದರಿಂದ ಕಾರ್ಯಕ್ರಮ ನೇತಾಜಿಯವರದ್ದು ಮತ್ತು ಪಾರ್ಟಿಯ ಭವಿಷ್ಯ ಅಖಿಲೇಶ್ ಯಾದವ್ ಆಗಿದ್ದಾರೆ ಎಂದು ಹೇಳಿದ್ದಾರೆ. ಆದರೆ ಸನಿಯಾದವ್ ಶಿವಪಾಲ್ ಯಾದವ್‌ರ ಹೆಸರನ್ನು ಪ್ರಸ್ತಾಪಿಸಿಲ್ಲ ಎಂದು ವರದಿತಿಳಿಸಿದೆ.







