Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಮಣಿಪಾಲ: ಇಬ್ಬರ ಅಂಗಾಂಗ ದಾನದಿಂದ 6...

ಮಣಿಪಾಲ: ಇಬ್ಬರ ಅಂಗಾಂಗ ದಾನದಿಂದ 6 ಮಂದಿಗೆ ಜೀವದಾನ

ವಾರ್ತಾಭಾರತಿವಾರ್ತಾಭಾರತಿ5 Nov 2016 8:07 PM IST
share
ಮಣಿಪಾಲ: ಇಬ್ಬರ ಅಂಗಾಂಗ ದಾನದಿಂದ 6 ಮಂದಿಗೆ ಜೀವದಾನ

ಮಣಿಪಾಲ, ನ.5: ಇಲ್ಲಿನ ಕಸ್ತೂರ್ಬಾ ಆಸ್ಪತ್ರೆಯಲ್ಲಿ ‘ಮೆದುಳು ನಿಷ್ಕೃಿಯ’ ಗೊಂಡ ಇಬ್ಬರು ರೋಗಿಗಳ ಅಂಗಾಂಗಗಳನ್ನು ದಾನವಾಗಿ ನೀಡಲಾಗಿದೆ. ಇದರಿಂದ ಒಟ್ಟು ಆರು ಮಂದಿಗೆ ಜೀವದಾನ ದೊರಕಿದಂತಾಗಿದೆ ಎಂದು ಕೆಎಂಸಿಯ ಮೆಡಿಕಲ್ ಸುಪರಿಂಟೆಂಡೆಂಟ್ ಹಾಗೂ ಸಿಒಒ ಡಾ.(ಕ) ಎಂ.ದಯಾನಂದ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವೈದ್ಯರಿಂದ ‘ಮೆದುಳು ನಿಷ್ಕೃಿಯ’ವಾಗಿದೆ ಎಂದು ಘೋಷಿಸಲ್ಪಟ್ಟ ರೋಗಿಗಳ ಹೆಸರುಗಳನ್ನು ಕಿಶೋರ್ ಮತ್ತು ವೆಲೇರಿಯನ್ ಡಿಸೋಜ ಎಂದು ಡಾ.ದಯಾನಂದ ತಿಳಿಸಿದ್ದಾರೆ. ಇವರ ಅಂಗಾಂಗಗಳು ಆರು ಮಂದಿಗೆ ಹೊಸ ಬದುಕನ್ನು ನೀಡಿದ್ದಲ್ಲದೇ, ನಾಲ್ಕು ಕಾರ್ನಿಯಾಗಳು ನಾಲ್ಕು ಮಂದಿಗೆ ಕಣ್ಣಿನ ದೃಷ್ಟಿಯನ್ನು ಮತ್ತೆ ನೀಡುವಲ್ಲಿ ಸಹಕಾರಿಯಾಗಿವೆ ಎಂದವರು ಹೇಳಿದ್ದಾರೆ.

56 ವರ್ಷ ಪ್ರಾಯದ ವೆಲೇರಿಯನ್ ಡಿಸೋಜ ಅವರು ಉಡುಪಿಯ ಕುಂಜಿಬೆಟ್ಟಿನವರಾಗಿದ್ದು, ಇವರು ನ.3ರಂದು ರಾತ್ರಿ ಪೆರಂಪಳ್ಳಿ ಬಳಿ ನಡೆದ ರಸ್ತೆ ಅಫಘಾತದಲ್ಲಿ ತಲೆಗೆ ತೀವ್ರವಾಗಿ ಗಾಯಗೊಂಡು 10:20ಕ್ಕೆ ಕೆಎಂಸಿಯ ತೀವ್ರನಿಗಾ ಘಟಕಕ್ಕೆ ದಾಖಲಾಗಿದ್ದರು. ಆಸ್ಪತ್ರೆಯ ನ್ಯೂರೋಸರ್ಜರಿ ವಿಭಾಗ ಇವರ ಚಿಕಿತ್ಸೆ ನಡೆಸಿದ್ದರೂ ಪ್ರಯೋಜನವಾಗಿರಲಿಲ್ಲ. ಅವರು ಬದುಕುಳಿಯುವ ಸಾಧ್ಯತೆ ಇಲ್ಲವಾದ್ದರಿಂದ ‘ಹ್ಯೂಮನ್ ಆರ್ಗನ್ ಆ್ಯಕ್ಟ್ 1994’ರಂತೆ ಮಾನವ ಅಂಗಾಂಗ ದಾನಕ್ಕೆ ಅನುಸರಿಸಬೇಕಾದ ಕ್ರಮದಂತೆ ನ.4ರಂದು ಅಪರಾಹ್ನ 2:30ಕ್ಕೆ ನಾಲ್ವರು ಹಿರಿಯ ವೈದ್ಯರು ರೋಗಿಯನ್ನು ‘ಮೆದುಳು ನಿಷ್ಕೃಿಯ’ವೆಂದು ಘೋಷಿಸಿದ್ದು, ಅದೇ ದಿನ ರಾತ್ರಿ 9:40ಕ್ಕೆ ಎರಡನೇ ಬಾರಿ ಇದೆ ಘೋಷಣೆ ಮಾಡಿದ್ದರು.

ಈ ನಡುವೆ ವಲೇರಿಯನ್ ಅವರ ಪತ್ನಿ ತನ್ನ ಪತಿಯ ಅಂಗಾಂಗಳನ್ನು ದಾನ ಮಾಡುವ ಇಚ್ಛೆಯನ್ನು ವ್ಯಕ್ತಪಡಿಸಿದರು. ಅದರಂತೆ ಗಂಡನ ಕಣ್ಣಿನ ಎರಡೂ ಕಾರ್ನಿಯಾ, ಎರಡು ಕಿಡ್ನಿ ಹಾಗೂ ಲೀವರ್‌ಗಳನ್ನು ‘ಹ್ಯುಮನ್ ಆರ್ಗನ್ ಟ್ರಾನ್ಸ್‌ಪ್ಲಾಂಟೇಷನ್ ಆ್ಯಕ್ಟ್ 1994’ರ ಮಾರ್ಗದರ್ಶನದಂತೆ ದಾನ ಮಾಡಲು ಮುಂದಾದರು.

ಹೀಗೆ ವಲೇರಿಯನ್ ದಾನ ನೀಡಿದ ಎರಡು ಕಿಡ್ನಿಗಳಲ್ಲಿ ಒಂದಕ್ಕೆ ಮಣಿಪಾಲ ಕೆಎಂಸಿಯಲ್ಲಿ ದಾಖಲಾದ ರೋಗಿಯೊಬ್ಬರನ್ನು ದಾನಿಯಾಗಿ ಗುರುತಿಸಲಾಗಿದೆ. ಇನ್ನೊಂದನ್ನು ಮಂಗಳೂರಿನ ಎಜೆ ಆಸ್ಪತ್ರೆಯ ರೋಗಿಗೆ ನೀಡಲಾಗುವುದು. ಲಿವರ್‌ನ್ನು ಬೆಂಗಳೂರಿನ ಅಪೋಲೊ ಆಸ್ಪತ್ರೆಯ ರೋಗಿಯೊಬ್ಬರಿಗೆ ಜೋಡಿಸಲಾಗುವುದು.

ಅಂಗಾಂಗಗಳನ್ನು ಶನಿವಾರ ಅಪರಾಹ್ನ 3:30ರ ಸುಮಾರಿಗೆ ಮಣಿಪಾಲ ಆಸ್ಪತ್ರೆಯಿಂದ ಮಂಗಳೂರು ವಿಮಾನನಿಲ್ದಾಣಕ್ಕೆ, ಬಳಿಕ ಅಲ್ಲಿಂದ ಬೆಂಗಳೂರಿಗೆ ಹಾಗೂ ಮಣಿಪಾಲದಿಂದ ಮಂಗಳೂರಿನ ಎಜೆ ಆಸ್ಪತ್ರೆಗೆ ಗ್ರೀನ್ ಕಾರಿಡಾರ್ ವ್ಯವಸ್ಥೆಯೊಂದಿಗೆ ಕೊಂಡೊಯ್ಯಲಾಯಿತು. ಅಂಗಾಂಗ ಕಸಿಯನ್ನು ಮಣಿಪಾಲದ ಸರ್ಜನ್‌ಗಳಾದ ಡಾ.ಪದ್ಮರಾಜ್ ಹೆಗ್ಡೆ, ಡಾ.ಅರುಣ್ ಚಾವ್ಲ, ಡಾ.ಬಿ.ಎಂ.ಜೀಶನ್, ಡಾ.ಅನಿತಾ ಶೆಣೈ ಹಾಗೂ ಬೆಂಗಳೂರು ಅಪೋಲೊ ಆಸ್ಪತ್ರೆಯ ಡಾ.ಮಹೇಶ್ ಗೋಪಶೆಟ್ಟಿ ನಡೆಸಿದರು.

ಅಂಗಾಂಗ ದಾನ ಮಾಡಿದ ಮತ್ತೊಬ್ಬ ರೋಗಿ ಕಿಶೋರ್ (45) ಬ್ರಹ್ಮಾವರದವರು. ಇವರು ನ.3ರಂದು ರಾತ್ರಿ 11:45ಕ್ಕೆ ಜಾರಿಬಿದ್ದು ತಲೆಗೆ ತೀವ್ರವಾದ ಏಟು ಬಿದ್ದು ಮಣಿಪಾಲ ಕೆಎಂಸಿಯ ಐಸಿಯುಗೆ ದಾಖಲಾಗಿದ್ದರು. ಇವರು ಸಹ ನ್ಯೂರೋಸರ್ಜರಿ ವಿಭಾಗದಿಂದ ಚಿಕಿತ್ಸೆ ಪಡೆದರು. ಇವರ ಮೆದುಳು ನಿಷ್ಕೃಿಯತೆಯನ್ನು ನ.4ರ ಸಂಜೆ 6ಗಂಟೆಗೆ ನಾಲ್ವರು ಹಿರಿಯ ವೈದ್ಯರು ಘೋಷಿಸಿದ್ದು, ನ.5ರಂದು ಅಪರಾಹ್ನ 12 ಗಂಟೆಗೆ ಎರಡನೇ ಬಾರಿ ಘೋಷಿಸಲಾಗಿತ್ತು.

ಕಿಶೋರ್ ಅವರ ಸಹೋದರ ಮತ್ತು ಸಹೋದರಿಯರು ಅಂಗಾಂಗ ದಾನ ನೀಡಲು ಒಪ್ಪಿಗೆ ಸೂಚಿಸಿದ್ದು, ಇದರಂತೆ ಅದೇ ದಿನ ಸಂಜೆ 6:30ಕ್ಕೆ ಬೆಂಗಳೂರು ಬಿಜಿಎಸ್ ಆಸ್ಪತ್ರೆಯ ವೈದ್ಯರು ಬಂದು ಅಂಗಾಂಗ ಕಸಿ ಮಾಡಿದರು. ಅವರ ಎರಡು ಕಿಡ್ನಿಗಳನ್ನು ಕೆಎಂಸಿ ಮಣಿಪಾಲ ಹಾಗೂ ಕೆಎಂಸಿ ಮಂಗಳೂರಿನ ರೋಗಿಗಳಿಗೆ ನೀಡಲಾಗಿದೆ. ಲೀವರ್‌ನ್ನು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ಕೊಂಡೊಯ್ದು ಅಲ್ಲಿನ ರೋಗಿಗೆ ನೀಡಲಾಯಿತು ಎಂದು ಡಾ.ದಯಾನಂದ್ ಪ್ರಕಟಣೆಯಲ್ಲಿ ವಿವರಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X