ಅಪರೇಷನ್ ಬ್ಲೂಸ್ಟಾರ್‌ನಲ್ಲಿ ಬ್ರಿಟನ್ ಶಾಮೀಲು? : ಸ್ಪಷ್ಟೀಕರಣ ನೀಡುವಂತೆ ಥೆರೇಸಾ ಮೇಗೆ ಪ್ರತಿಪಕ್ಷ ಆಗ್ರಹ

ಲಂಡನ್,ನ.5: ಬ್ರಿಟನ್ ಪ್ರಧಾನಿ ಥೆರೇಸಾ ಮೇ ಮೂರು ದಿನಗಳ ಭಾರತ ಪ್ರವಾಸ ಕೈಗೊಳ್ಳುವ ಮುನ್ನ ಅವರು, 1984ರಲ್ಲಿ ಅಮೃತಸರದ ಸ್ವರ್ಣಮಂದಿರದಲ್ಲಿ ಸಿಖ್ಖ್ ಉಗ್ರರ ಲ್ಲಿ ನಡೆದ ಅಪರೇಶನ್ ಬ್ಲೂಸ್ಟಾರ್ ಸೇನಾ ಕಾರ್ಯಾಚರಣೆ ಯಲ್ಲಿ ಬ್ರಿಟನ್‌ನ್ದ ಪಾತ್ರದ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಪ್ರತಿಪಕ್ಷವಾದ ಲೇಬರ್‌ಪಾರ್ಟಿ ಆಗ್ರಹಿಸಿದೆ.
1984ರ ಜೂನ್‌ನಲ್ಲಿ ಸ್ವರ್ಣದೇಗುಲದಲ್ಲಿ ನಡೆದ ಸೇನಾ ಕಾರ್ಯಾಚರಣೆಯಲ್ಲಿ ಬ್ರಿಟಿಶ್ ಸರಕಾರ ಶಾಮೀಲಾಗಿದ್ದ ಬಗ್ಗೆ ಪುರಾವೆಗಳನ್ನು ಒದಗಿಸುವ ದಾಖಲೆಪತ್ರಗಳನ್ನು ಬ್ರಿಟಿಶ್ ವಿದೇಶಾಂಗ ಸಚಿವಾಲಯವು ಕಿತ್ತುಹಾಕಿದೆಯೆಂಬ ಬ್ರಿಟನ್‌ನ ಸಿಖ್ಖ್ ಒಕ್ಕೂಟವು ಆರೋಪ ಮಾಡಿರುವ ಹಿನ್ನೆಲೆಯಲ್ಲಿ, ಬ್ರಿಟನ್‌ನ ಸಿಖ್ಖ್ ಸಮುದಾಯಕ್ಕೆ ಸತ್ಯವನ್ನು ತಿಳಿದುಕೊಳ್ಳಲು ಹಕ್ಕಿದೆಯೆಂದು ಲೇಬರ್ ಪಕ್ಷದ ನಾಯಕ ಟಾಮ್ ವಾಟ್ಸನ್ ಹೇಳಿದ್ದಾರೆ.
‘‘ಭಾರತಕ್ಕೆ ಭೇಟಿ ನೀಡುವ ಮೊದಲು 1984ರಲ್ಲಿ ಸುವರ್ಣದೇಗಲದ ಮೇಲೆ ನಡೆದ ಸೇನಾದಾಳಿ ಹಾಗೂ ಆನಂತರದ ಘಟನೆಗಳ ಬಗ್ಗೆ ತೆರೇಸಾ ಮೇ ಸ್ಪಷ್ಟನೆ ನೀಡಬೇಕು. ಆ ಸಮಯದಲ್ಲಿ ಮಾರ್ಗರೇಟ್ ಥ್ಯಾಚರ್ ನೇತೃತ್ವದ ಆಡಳಿತವು ಭಾರತ ಸರಕಾರದ ಜೊತೆ ನಿಕಟವಾಗಿ ಕೆಲಸ ಮಾಡಿತ್ತು’’ ಎಂದು ವ್ಯಾಟ್ಸನ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.





