ಕಂಬಳಕ್ಕೆ ಅನುಮತಿ: ಕೋಣಗಳ ಮೆರವಣಿಗೆ

ಉಡುಪಿ, ನ.5: ಸಂಪ್ರದಾಯಬದ್ಧ ಕಂಬಳ ನಡೆಸಲು ಹೈಕೋರ್ಟ್ ಅನುಮತಿ ನೀಡಿರುವುದಕ್ಕೆ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ವತಿ ಯಿಂದ ಇಂದು ಕೋಣಗಳ ಮೆರವಣಿಗೆ ನಡೆಸಿ ಹರ್ಷಾಚರಣೆ ನಡೆಸಲಾಯಿತು.
ನಗರದ ಕೆ.ಎಂ.ಮಾರ್ಗದಲ್ಲಿರುವ ಶೋಕಮಾತಾ ಇಗರ್ಜಿ ಎದುರಿನಿಂದ ಹೊರಟ ಅಲೆವೂರಿನ ಐತು ದೇವಾಡಿಗರ ಜೋಡಿ ಕೋಣಗಳ ಮೆರವಣಿಗೆ ಸರ್ವಿಸ್ ಬಸ್ ನಿಲ್ದಾಣದ ಕ್ಲಾಕ್ ಟವರ್‌ವರೆಗೆ ನಡೆಯಿತು. ಬಳಿಕ ಪಟಾಕಿ ಸಿಡಿಸಿ ಸಿಹಿ ತಿಂಡಿ ವಿತರಿಸಿ ಸಂಭ್ರಮ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು, ಕಂಬಳಪ್ರೇಮಿಗಳಾದ ಅಶೋಕ್ ಶೇರಿಗಾರ್ ಅಲೆವೂರು, ಸುಧಾಕರ್, ಪ್ರಸಾದ್, ದಯಾನಂದ ಶೆಟ್ಟಿ, ಸುದರ್ಶನ್ ಶೆಟ್ಟಿ, ಕರುಣಾಕರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
Next Story





