ಆರೋಪ ಸಾಬೀತು ಮಾಡದಿದ್ದರೆ ಅವರೇ ತಪ್ಪಿತಸ್ಥರು :ಪರಮೇಶ್ವರ್

ಬೆಂಗಳೂರು, ನ. 5: ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣದಲ್ಲಿ ಸಚಿವ ರೋಷನ್ ಬೇಗ್ ಪಾತ್ರದ ಬಗ್ಗೆ ಸಂಸದೆ ಶೋಭಾ ಕರಂದ್ಲಾಜೆ ಆರೋಪ ಮಾಡಿದ್ದು, ತಮ್ಮ ಆರೋಪ ಸಾಬೀತು ಮಾಡದಿದ್ದರೆ ಅವರೇ ತಪ್ಪಿತಸ್ಥರು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಶನಿವಾರ ವಿಕಾಸಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜವಾಬ್ದಾರಿ ಸ್ಥಾನದಲ್ಲಿರುವ ಸಚಿವೆ ಶೋಭಾ ಕರಂದ್ಲಾಜೆ ಪರಿಶೀಲಿನೆ ನಡೆಸಿ ಹೇಳಿಕೆ ನೀಡಬೇಕು. ಹೀಗಾಗಿ ಈ ಬಗ್ಗೆ ಅವರೇ ಸಾಬೀತು ಮಾಡಬೇಕು ಎಂದರು.
Next Story





