ರಾಷ್ಟ್ರ ವಿರೋಧಿ ಕೃತ್ಯದ ಶಂಕೆ: 25 ಎನ್‌ಜಿಒಗಳಿಗೆ ವಿದೇಶಿ ದೇಣಿಗೆ ಪಡೆಯಲು ನಿಷೇಧ

ಹೊಸದಿಲ್ಲಿ, ನ.5: ರಾಷ್ಟ್ರ ವಿರೋಧಿ ಕೃತ್ಯಗಳಲ್ಲಿ ತೊಡಗಿವೆ ಎನ್ನಲಾಗಿರುವ 25 ಎನ್‌ಜಿಒಗಳಿಗೆ (ಸರಕಾರೇತರ ಸಂಸ್ಥೆ)ಗಳು ವಿದೇಶಗಳಿಂದ ದೇಣಿಗೆ ಪಡೆಯಲು ವಿದೇಶ ವ್ಯವಹಾರ ಸಚಿವಾಲಯ ಅನುಮತಿ ನಿರಾಕರಿಸಿದೆ. ಈ ಹಿಂದೆ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ ಯನ್ವಯ (ಎಫ್‌ಸಿಆರ್‌ಎ) ಗೃಹ ಸಚಿವಾಲಯವು ಈ ಸಂಸ್ಥೆಗಳಿಗೆ ಪರವಾನಿಗೆ ನೀಡಿದ್ದು ಅಕ್ಟೋಬರ್‌ಗೆ ಅದರ ವಾಯಿದೆ ಮುಗಿದಿತ್ತು.
ಪರವಾನಿಗೆ ನವೀಕರಣ ಪ್ರಕ್ರಿಯೆಗೆ ಅರ್ಜಿ ಹಾಕಿದ್ದ 33 ಸಾವಿರ ಎನ್‌ಜಿಒಗಳ ಪೈಕಿ ಸುಮಾರು 20 ಸಾವಿರ ಎನ್‌ಜಿಒಗಳಿಗೆ ವಿದೇಶಗಳಿಂದ ದೇಣಿಗೆ ಪಡೆಯಲು ಅನುಮತಿ ನೀಡಲಾಗಿದೆ. ಪರವಾನಿಗೆ ನವೀಕರ ಣಕ್ಕೆ ಸುಮಾರು 12 ಸಾವಿರದಷ್ಟು ಎನ್‌ಜಿಒಗಳು ಅರ್ಜಿ ಹಾಕಿ ರಲಿಲ್ಲ. ಸುಮಾರು 1,700 ಎನ್‌ಜಿಒಗಳ ಲೈಸೆನ್ಸ್ ಗಳನ್ನು ತಡೆಹಿಡಿಯಲಾಗಿದ್ದು ಮುಂದಿನ ವಾರಾಂತ್ಯದೊಳಗೆ ಇನ್ನಷ್ಟು ಮಾಹಿತಿ ಒದಗಿಸಲು ಸೂಚಿಸಲಾಗಿದೆ. ಅದಾಗ್ಯೂ, ಗ್ರೀನ್‌ಪೀಸ್ ಸಂಸ್ಥೆ ಮತ್ತು ಗುಜರಾತ್‌ನ ಸಮಾಜ ಕಾರ್ಯಕರ್ತೆ ತೀಸ್ತಾ ಸೆಟಲ್‌ವಾಡ್ ವರ ಸಬ್ರಂಗ್ ಟ್ರಸ್ಟ್‌ನ ಲೈಸೆನ್ಸ್ ನವೀಕರಿಸ ಲಾಗಿದೆ.
ಇವುಗಳ ಲೈಸೆನ್ಸ್ ಅನ್ನು ಈ ಹಿಂದೆ ರದ್ದು ಮಾಡಲಾಗಿತ್ತು. ಲೈಸೆನ್ಸ್ ನಿರಾಕರಿಸಲ್ಪಟ್ಟಿರುವ ಱಪೀಪಲ್ಸ್ ವಾಚ್‌ೞಮತ್ತು ಱಇಂಡಿಯನ್ ಸೋಷಿ ಯಲ್ ಆ್ಯಕ್ಷನ್ ಫೋರಂ (ಇನ್‌ಸಾಫ್)ೞಸಂಸ್ಥೆಗಳು ಇದನ್ನು ಕೋರ್ಟಿನಲ್ಲಿ ಪ್ರಶ್ನಿಸಲು ನಿರ್ಧರಿಸಿವೆ. ಱಇನ್‌ಸಾಫ್‌ೞಕೈಗಾರೀಕೆಗಳ ಕಾರಣ ಸ್ಥಳಾಂತರಗೊಂಡವರ ಪರವಾಗಿ ಕಾರ್ಯ ನಿರ್ವಹಿಸುತ್ತಿದೆ. ಱಪೀಪಲ್ಸ್ ವಾಚ್‌ೞಕುಂಡಂಕುಳಂ ಅಣು ಸ್ಥಾವರದ ವಿರುದ್ಧ ಪ್ರತಿಭಟನೆ ನಡೆಸುತ್ತಿದೆ. 12 ಸಾವಿರದಷ್ಟು ಸಂಸ್ಥೆಗಳು ಪರವಾನಿಗೆ ನವೀಕರಣಕ್ಕೆ ಅರ್ಜಿ ಹಾಕಿಲ್ಲ. ಇವಲ್ಲಿ ಕೆಲವು ನಿಷ್ಕ್ರಿಯಗೊಂಡಿವೆ ನಿಜ. ಆದರೆ ಪ್ರಸ್ತುತ ಲೈಸೆನ್ಸ್ ನವೀಕರಣ ಸಂದರ್ಭ ಎಫ್‌ಸಿಆರ್‌ಎ ನಡೆಸುತ್ತಿರುವ ಪರಿಶೀಲನೆ ಒಂದು ರೀತಿಯ ಪೀಡನೆಯಂತಿರುವ ಕಾರಣ ಬಹುತೇಕ ಎನ್‌ಜಿಒಗಳು ಲೈಸೆನ್ಸ್ ನವೀಕರಣದ ಉಸಾಬರಿಗೆ ಹೋಗಿಲ್ಲ ಎನ್ನುತ್ತಾರೆ ನ್ಯಾಷನಲ್ ಫೌಂಡೇಷನ್ ಆಫ್ ಇಂಡಿಯಾ ಸಂಸ್ಥೆಯ ಮುಖ್ಯಸ್ಥ ಅಮಿತಾಬ್ ಬೆಹರ್.







