ಐವರು ಆರೋಪಿಗಳ ಬಂಧನ
ಕೈಗಾ ಟೌನ್‌ಶಿಪ್ ಕಳವು ಪ್ರಕರಣ

ಕಾರವಾರ, ನ.5: ಕೈಗಾ ಟೌನ್‌ಶಿಪ್‌ನಲ್ಲಿ ಕೆಲ ದಿನಗಳ ಹಿಂದೆ ನಡೆದ ಮನೆ ಕಳ್ಳತನಕ್ಕೆ ಸಂಬಂಧಿಸಿದಂತೆ ಐದು ಜನ ಆರೋಪಿಗಳನ್ನು ಬಂಧಿಸುವ ಮೂಲಕ ಅವರಿಂದ ಒಟ್ಟು, 214 ಗ್ರಾಂ ಚಿನ್ನ ಹಾಗೂ 4.72 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ. ದೇವರಾಜ್ ಹೇಳಿದರು.
ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೈಗಾ ಟೌನ್‌ಶಿಪ್‌ನಲ್ಲಿ ಭದ್ರತೆಯ ನಡುವೆಯೂ ಮೂರು ಮನೆಗಳಲ್ಲಿ ಲಕ್ಷಾಂತರ ರೂ. ವೌಲ್ಯದ ಆಭರಣ ನಗದು ಕಳ್ಳತನ ನಡೆಸಿದ ಎನ್‌ಪಿಸಿಐಎಲ್ ಉದ್ಯೋಗಿಗಳಾದ ಐವರನ್ನು ಬಂಧಿಸಲಾಗಿದೆ. ಅವರಲ್ಲಿ ಸಚಿನ್ ವಿಷ್ಣು ನಾಯ್ಕ (21), ನಯೀಮ್ ಉಮರ್ ಖಾನ್(20), ದೀಪಕ್ ಕಾನಡೆ(17) ಓಂಕಾರ ಕಾನಡೆ (17)ಪವನ್ ಚಲವಾದಿ(17) ಬಂಧಿತರು.
ಪ್ರಕರಣದ ಹಿನ್ನೆಲೆ:
ಪವನ್‌ಕುಮಾರ್ ಎಚ್. ಜೆ. ಗೌಡ ಎಂಬವರು ದೀಪಾವಳಿಯ ಸಂದಭರ್ದಲ್ಲಿ ಹೆಂಡತಿ ಮಕ್ಕಳ ಜೊತೆಗೆ ತಮ್ಮ ಊರಾದ ಮಂಡ್ಯಕ್ಕೆ ತೆರಳಿದ್ದರು. ಊರಿಗೆ ತೆರಳುವ ಸಂದರ್ಭದಲ್ಲಿ ಕಪಾಟಿಗೆ ಹೊರಗಿನಿಂದ ಬೀಗ ಹಾಕಿರಲಿಲ್ಲ. ಮನೆಯಿಂದ ವಾಪಸ್ ಬಂದ ಸಂದಭರ್ದಲ್ಲಿ ಬಾಗಿಲು ತೆರೆದು ನೋಡಿದಾಗ ಮನೆಯ ಒಳಗಿನಿಂದ ಬಾಲ್ಕನಿಗೆ ಹೋಗುವ ಬಾಗಿಲು ತೆರೆದಿತ್ತು. ಬಳಿಕ ಮನೆಯೊಳಗಿದ್ದ ಕಪಾಟಿನ ಬಾಗಿಲು ತೆರೆದು ಪರಿಶೀಲನೆ ನಡೆಸಿದ್ದಾರೆ. ಯಾರೋ ಕಳ್ಳರು ಬೆಡ್ ರೂಮ್ ಕಿಟಕಿಯ ಗ್ರಿಲ್ಸ್ ಬಾಗಿಲು ತೆರೆದು ಮನೆಯೊಳಗೆ ನುಗ್ಗಿ ಕಪಾಟಿನಲ್ಲಿದ್ದ 135 ಗ್ರಾಂ ತೂಕ 3.50 ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣ ಮತ್ತು 6,000 ರೂ. ಕಳವಾಗಿತ್ತು. ಕಳವಾದ ಬಗ್ಗೆ ಪವನಕುಮಾರ್ ಅವರು ಪೊಲೀಸರಿಗೆ ದೂರು ಸಲ್ಲಿಸಿದ್ದರು. ಅದೇ ರೀತಿ ಕೇರಳ ಮೂಲದ ಮಜ್ಜೇಶ ಎಸ್. ತನ್ನ ಕುಟುಂಬದ ಜೊತೆಗೆ ಗೆಳೆಯರೊಂದಿಗೆ ಪ್ರವಾಸಕ್ಕೆ ತೆಳಿದ್ದರು. ಈ ಸಂದಭರ್ವನ್ನು ಕಂಡು ಕಿಟಕಿಯ ಗ್ರಿಲ್ಸ್ ತೆಗೆದು ಕಪಾಟಿನಲ್ಲಿದ್ದ 102 ಗ್ರಾಂ ತೂಕ 3ಲಕ್ಷ ರೂ. ವೌಲ್ಯದ ಚಿನ್ನ ಹಾಗೂ 6,800 ರೂ. ಕಳವು ಮಾಡಿದ್ದರು. ಈ ಬಗ್ಗೆ ಮಜ್ಜೇಶ ಅವರು ದೂರು ದಾಖಲಿಸಿದ್ದರು ಎಂದು ವಿವರಣೆಯನ್ನು ನೀಡಿದರು. ಚಟದ ದಾಸರಾಗಿದ್ದ ಇವರು ಹಣ ಹೊಂದಿಸಲು ಪೆಟ್ರೋಲ್ ಕದಿಯುತ್ತಿದ್ದರು. ಈಗ ಮನೆಗಳ ಕಳ್ಳತನಕ್ಕೆ ಇಳಿದಿದ್ದರು. ಅದರಂತೆ ದೀಪಾವಳಿ ಸಂದಭರ್ದಲ್ಲಿ ಕೈಗಾದ ಎನ್‌ಪಿಸಿಐಎಲ್ ಉದ್ಯೋಗಿಗಳು ಮನೆಯಲ್ಲಿ ಇಲ್ಲದಿರುವುದನ್ನು ಗಮನಿಸಿ ಕಳ್ಳತನ ಹೊಂಚು ಹಾಕಿದ್ದರು.
ಅದರಂತೆ ಅ.31 ರಂದು ರಾತ್ರಿ ವೇಳೆ ಕಳ್ಳತನ ನಡೆಸಿದ್ದು, ಮನೆ ಮಾಲಕರು ಮನೆಗೆ ಬಂದಾಗ ಕಳ್ಳತನ ಬೆಳಕಿಗೆ ಬಂದಿತ್ತು. ಬಳಿಕ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತ್ವರಿತಗತಿಯಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ. ಕಾರವಾರ ಡಿವೈಎಸ್ಪಿ ಎನ್‌ಟಿ. ಪ್ರಮೋದರಾವ್ ಮಾರ್ಗದರ್ಶನದಲ್ಲಿ ಸಿಪಿಐ ಶರಣಗೌಡ, ಕದ್ರಾ ಪಿಎಸ್‌ಐ ಗೋಪಾಲ ಜೋಗಳೇಕರ್, ಮಲ್ಲಾಪುರ ಪಿಎಸ್‌ಐ ಗೋಪಾಲ ಜೋಗಳೇಕರ್, ಮಲ್ಲಾಪುರ ಪಿಎಸ್‌ಐ ಕೆ. ಆರ್. ಪುಟ್ಟಸ್ವಾಮಿ ಎಎಸ್‌ಐ ಈಶ್ವರ ನಾಯ್ಕ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿದ್ದರು.







