ಎರಡನೆ ಟೆಸ್ಟ್‌ಗೆ ಆ್ಯಂಡರ್ಸನ್ ಲಭ್ಯ
ಮುಂಬೈ, ನ.5: ಇಂಗ್ಲೆಂಡ್‌ನ ವೇಗದ ಬೌಲರ್ ಜೇಮ್ಸ್ ಆ್ಯಂಡರ್ಸನ್ ಭಾರತ ವಿರುದ್ಧದ ಎರಡನೆ ಟೆಸ್ಟ್‌ಗೆ ತಂಡದ ಸೇವೆಗೆ ಲಭ್ಯರಿದ್ದಾರೆ.
ಭಾರತದ ವಿರುದ್ಧದ ಪಂದ್ಯಗಳಲ್ಲಿ ಯಶಸ್ವಿ ಬೌಲರ್ ಎನಿಸಿಕೊಂಡಿರುವ ಆ್ಯಂಡರ್ಸನ್ ಮಂಗಳವಾರ ಭಾರತಕ್ಕೆ ಆಗಮಿಸಲಿದ್ದಾರೆ. ಆದರೆ ನ.9ರಂದು ರಾಜ್‌ಕೋಟ್‌ನಲ್ಲಿ ಆರಂಭವಾಗಲಿರುವ ಮೊದಲ ಟೆಸ್ಟ್‌ನಲ್ಲಿ ಅಂತಿಮ ಹನ್ನೊಂದರ ಬಳಗದಲ್ಲಿ ಸೇರಿಕೊಳ್ಳುವುದಿಲ್ಲ ಎಂದು ತಂಡದ ಮೂಲಗಳು ತಿಳಿಸಿವೆ.
ಎರಡನೆ ಟೆಸ್ಟ್ ವಿಶಾಖಪಟ್ಟಣದಲ್ಲಿ ನ.14ರಂದು ಆರಂಭಗೊಳ್ಳಲಿದೆ.ಆ್ಯಂಡರ್ಸನ್ ಅವರು ಭಾರತದ ವಿರುದ್ಧದ ಸರಣಿಯಲ್ಲಿ ತಂಡಕ್ಕೆ ದೊಡ್ಡ ಕೊಡುಗೆ ನೀಡಲಿದ್ದಾರೆಂಬ ವಿಶ್ವಾಸವನ್ನು ನಾಯಕ ಅಲೆಸ್ಟೈರ್ ಕುಕ್ ವ್ಯಕ್ತಪಡಿಸಿದ್ದಾರೆ.
ಆ್ಯಂಡರ್ಸನ್ 2006, 2008 ಮತ್ತು 2012ರಲ್ಲಿ ಭಾರತ ವಿರುದ್ಧದ ಸರಣಿಯನ್ನಾಡಿದ್ದರು. 7 ಪಂದ್ಯಗಳಲ್ಲಿ ಅವರು 22 ವಿಕೆಟ್ ಪಡೆದಿದ್ದರು. ಇಂಗ್ಲೆಂಡ್‌ನಲ್ಲಿ ಕಳೆದ ಸರಣಿಯ 4 ಟೆಸ್ಟ್‌ಗಳಲ್ಲಿ ಆ್ಯಂಡರ್ಸನ್ 12 ವಿಕೆಟ್ ಪಡೆದಿದ್ದರು. ಭಾರತ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ಸೋತಿದ್ದರೂ, ಬಳಿಕ ಎರಡು ಟೆಸ್ಟ್‌ಗಳಲ್ಲಿ ಜಯ ಗಳಿಸಿ 2-1 ಅಂತರದಲ್ಲಿ ಇಂಗ್ಲೆಂಡ್ ಸರಣಿ ಜಯಿಸುವಲ್ಲಿ ಆ್ಯಂಡರ್ಸನ್ ದೊಡ್ಡ ಕೊಡುಗೆ ನೀಡಿದ್ದರು.





