ಮಹಿಳೆಯ ಸರ ಅಪಹರಣ
ಉಡುಪಿ, ನ.5: ಅಂಬಲಪಾಡಿ ನಾಗರಕಟ್ಟೆ ಸಮೀಪ ಇಂದು ಬೆಳಗ್ಗೆ 7:45ರ ಸುಮಾರಿಗೆ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಕತ್ತಿನಲ್ಲಿದ್ದ ಲಕ್ಷಾಂತರ ರೂ. ವೌಲ್ಯದ ಸರವನ್ನು ಅಪರಿಚಿತರಿಬ್ಬರು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಅಂಬಲಪಾಡಿ ಶ್ರೀನಿಕೇತನ ಭುಜಂಗರಾವ್ ಕಂಪೌಂಡ್ ನಿವಾಸಿ ನಿರಂಜನ್ ನಾಯಕ ಎಂಬವರ ಪತ್ನಿ ಕುಮುದಿನಿ ನಾಯಕ(53) ಅಂಬಲ ಪಾಡಿ ಜಂಕ್ಷನ್ ಬಳಿ ನಡೆದುಕೊಂಡು ಹೋಗುತ್ತಿರುವಾಗ ಕಪ್ಪುಬಣ್ಣದ ಬೈಕಿನಲ್ಲಿ ಹೆಲ್ಮೆಟ್ ಧರಿಸಿಕೊಂಡು ಬಂದ ಇಬ್ಬರು ಅಪರಿಚಿತರು ಕುಮುದಿನಿಯ ಕುತ್ತಿಗೆಯಲ್ಲಿದ್ದ 6 ಪವನ್ ತೂಕದ ಕರಿಮಣಿ ಸರ ಮತ್ತು 23 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತು ಪರಾರಿಯಾದರು.
ಕಳವಾದ ಚಿನ್ನದ ಒಟ್ಟು ಮೌಲ್ಯ 1.85 ಲಕ್ಷ ರೂ. ಎಂದು ಅಂದಾಜಿಸ ಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
Next Story





