ಯುವ ಜನರು ದೇಶದ ಶಕ್ತಿ: ಕೃಷ್ಣ ಭೈರೇಗೌಡ
ಯುವ ಕಾಂಗ್ರೆಸ್ ಸದಸ್ಯತ್ವ ಅಭಿಯಾನ
ಬೆಂಗಳೂರು, ನ.5: ಯುವಜನತೆ ದೇಶದ ನಿಜವಾದ ಶಕ್ತಿಯಾಗಿದ್ದಾರೆ. ಆ ಹಿನ್ನೆಲೆಯಲ್ಲಿಯೇ ಹನ್ನೆರಡು ವರ್ಷಗಳ ಹಿಂದೆಯೇ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂ ಅವರು ಯುವ ಕಾಂಗ್ರೆಸ್‌ಅನ್ನು ಅಸ್ತಿತ್ವಕ್ಕೆ ತಂದಿದ್ದಾರೆ ಎಂದು ಕೃಷಿ ಸಚಿವ ಕೃಷ್ಣ ಭೈರೇಗೌಡ ತಿಳಿಸಿದ್ದಾರೆ.
ಶನಿವಾರ ಇಲ್ಲಿನ ಬ್ಯಾಟರಾಯನಪುರ ಕ್ಷೇತ್ರದ ಯುವ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಯುವ ಮಿಲನ’ ಹೆಸರಿನ ಮಹತ್ತರ ಯೋಜನೆ ಯುವಕರನ್ನು ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿದೆ ಎಂದರು.
ಯುವಕರಿಂದ ದೇಶದ ರಾಜಕೀಯದಲ್ಲಿ ಹೊಸ ತಿರುವು ನೀಡಲೆಂದು ಯುವ ಕಾಂಗ್ರೆಸ್ ಅನ್ನು ರಾಹುಲ್‌ಗಾಂ ಸ್ಥಾಪನೆ ಮಾಡಿದರು. ಯುವಕರು ರಾಜಕಾರಣವನ್ನು ಕಲಿತು ಸಕ್ರಿಯ ರಾಜಕಾರಣ ಮಾಡುವುದು ಮತ್ತು ದೇಶದ ಭವಿಷ್ಯಕ್ಕಾಗಿ ಶ್ರಮಿಸಬೇಕೆಂದು ಅವರು ಕರೆ ನೀಡಿದರು.
ಯುವಜನತೆ ಕೇವಲ ಧ್ಯೇಯೋದ್ದೇಶಗಳ ಜೊತೆಗೆ ಪ್ರಸಕ್ತ ರಾಜಕೀಯದಲ್ಲಿ ಪಾಲ್ಗೊಳ್ಳುವ ಮೂಲಕ ದೇಶದ ಅಭಿವೃದ್ಧಿಗೆ ಶ್ರಮಿಸಬೇಕೆಂದು ಕೋರಿದರು.
ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ ಸದಸ್ಯೆ ಮಮತಾ, ದೊಡ್ಡಜಾಲ ಗ್ರಾ.ಪಂ. ಅಧ್ಯಕ್ಷ ಮಹೇಶ್, ಮುಖಂಡರಾದ ಉತ್ತರಹಳ್ಳಿ ವಿಜಯ ಕುಮಾರ್, ಲಕ್ಷ್ಮಿ , ಹರಿಒದಲಾದವರು ಉಪಸ್ಥಿತರಿದ್ದರು.





