200 ದಿನ ಕೆಲಸ ನೀಡಲು ಕೇಂದ್ರಕ್ಕೆರಾಜ್ಯಸರಕಾರ ಮನವಿ
ರಾಜ್ಯದಲ್ಲಿನ ಭೀಕರ ಬರ ಹಿನ್ನೆಲೆ; ಉದ್ಯೋಗ ಖಾತರಿ ಯೋಜನೆಯಡಿ
ಬೆಂಗಳೂರು, ನ.5: ರಾಜ್ಯದಲ್ಲಿನ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಆ ವರ್ಷದಲ್ಲಿ 200 ದಿನ ಉದ್ಯೋಗ ಖಾತ್ರಿ ಯೋಜನೆಯಡಿ ಜನರಿಗೆ ಕೂಲಿ ಕೆಲಸ ನೀಡಬೇಕು. ಅಲ್ಲದೆ, ಬರ ಪರಿಹಾರಕ್ಕೆ ಕೇಂದ್ರ ಸರಕಾರ ಹೆಚ್ಚಿನ ನೆರವು ನೀಡಬೇಕು ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಇಂದಿಲ್ಲಿ ಮನವಿ ಮಾಡಿದ್ದಾರೆ.
ಶನಿವಾರ ವಿಧಾನಸೌಧದಲ್ಲಿ ಸಚಿವ ಸಂಪುಟ ಉಪ ಸಮಿತಿ ಸಭೆಯ ಬಳಿಕ ಮಾಧ್ಯಮ ಪ್ರತಿನಿಗಳೊಂದಿಗೆ ಮಾತನಾಡಿದ ಅವರು, ನ.14ರ ಒಳಗಾಗಿ ರಾಜ್ಯದ ಬರ ಸ್ಥಿತಿಯ ಬಗ್ಗೆ ಕೇಂದ್ರಕ್ಕೆ ನಿಖರ ಮಾಹಿತಿ ನೀಡಲಾಗುವುದು. ಅಲ್ಲದೆ, ಅಗತ್ಯವಿರುವ ಕಡೆಗಳಲ್ಲಿ ಜಾನುವಾರುಗಳಿಗೆ ಮೇವು, ಗೋಶಾಲೆ ಆರಂಭಿಸಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದರು.
ಬರ ನಿರ್ವಹಣೆಗೆ ಸರಕಾರ ಸನ್ನದ್ಧ: ರಾಜ್ಯದಲ್ಲಿನ ಬರ ಸ್ಥಿತಿಯಿಂದ ಕೃಷಿ ಮತ್ತು ತೋಟಗಾರಿಕೆ ಬೆಳೆ ಹಾನಿ ಸುಮಾರು 12 ಸಾವಿರ ಕೋಟಿ ರೂ.ಗಳಷ್ಟು ಎಂದು ಅಂದಾಜು ಮಾಡಿದ್ದು, ಮಾರ್ಗಸೂಚಿಯನ್ವಯ 3,375 ಕೋಟಿ ರೂ. ಕೇಂದ್ರ ಸರಕಾರ ನೆರವು ನೀಡಬೇಕೆಂದು ಕೃಷಿ ಸಚಿವ ಕೃಷ್ಣ ಭೈರೇಗೌಡ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ಬೀದರ್, ಕಲಬುರಗಿ, ಯಾದಗಿರಿ ಸೇರಿದಂತೆ ನೆರೆ ಹಾವಳಿಯಿಂದ 2,485 ಕೋಟಿ ರೂ.ನಷ್ಟ ಉಂಟಾಗಿದ್ದು, ಮಾರ್ಗಸೂಚಿಯನ್ವಯ 386 ಕೋಟಿ ರೂ.ಪರಿಹಾರ ನೀಡಬೇಕು ಎಂದ ಅವರು, ರಾಜ್ಯದ 400 ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ತೊಂದರೆ ಇದ್ದು ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ತಿಳಿಸಿದರು.ುಡಿಯುವ ನೀರಿಗೆ ಯಾವುದೇ ತೊಂದರೆಯಾಗದಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದ್ದು, ಎಲ್ಲ್ಲ ಜಿಲ್ಲೆಗಳ ಜಿಲ್ಲಾಕಾರಿ ಗಳ 314 ಕೋಟಿ ರೂ. ಹಣ ಕುಡಿಯುವ ನೀರಿನ ಬಳಕೆಗೆ ಮೀಸಲಿಡಲಾಗಿದೆ. ಈ ಹಣ ಖರ್ಚಾದ ತಕ್ಷಣ ಹಣದ ಅಗತ್ಯವಿದ್ದಲ್ಲಿ ಇನ್ನೂ ಹೆಚ್ಚಿನ ನೆರವು ನೀಡಲಾಗುವುದು ಎಂದು ಅವರು ತಿಳಿಸಿದರು.ದ್ಯೋಗ ಖಾತರಿ ಯೋಜನೆಯಡಿ ಈ ವರ್ಷ 6 ಕೋಟಿ ಮಾನವ ದಿನಗಳಿಗೆ ಬಜೆಟ್ ನಿಗದಿಯಾಗಿದ್ದು, ಈಗಾಗಲೇ 5 ಕೋಟಿ ಮಾನವ ದಿನಗಳು ಉಪಯೋಗವಾಗಿದೆ. ಇನ್ನೂ ಹೆಚ್ಚಿಗೆ ಮಾನವ ದಿನಗಳು ಹಾಗೂ ಆರ್ಥಿಕ ನೆರವು ಒದಗಿಸುವಂತೆ ಕೇಂದ್ರಕ್ಕೆ ಸದ್ಯದಲ್ಲೇ ಮನವಿ ಮಾಡಲಾಗುವುದು ಎಂದು ಅವರು ಮಾಹಿತಿ ನೀಡಿದರು.ೇಂದ್ರದಿಂದ ಆಗಮಿಸಿದ್ದ ಬರ ಅಧ್ಯಯನ ತಂಡವು 15 ಜಿಲ್ಲೆಗಳಲ್ಲಿ ಬರ ಅಧ್ಯಯನ ಮುಗಿಸಿ ಇನ್ನೆರಡು ದಿನಗಳಲ್ಲಿ ಕೇಂದ್ರಕ್ಕೆ ವರದಿ ನೀಡಲಿದೆ. ಈಗಾಗಲೇ ರಾಜ್ಯ ಸರಕಾರವು 139 ಬರ ಪೀಡಿತ ತಾಲೂಕುಗಳ ಪ್ರಾಥಮಿಕ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಲಾಗಿದೆ.
ಇಂದಿನ ಸಭೆಯಲ್ಲಿ ಜಾನುವಾರುಗಳಿಗೆ ಮೇವು ಸಂಗ್ರಹಿಸಲು ಆದ್ಯತೆ ನೀಡಬೇಕೆಂದು ಸೂಚಿಸಲಾಗಿದ್ದು, ಮೇವು ಖರೀದಿಗೆ ಸರಕಾರ ಹೆಚ್ಚಿನ ಹಣ ನೀಡಲಿದೆ. ಮುಂದಿನ ದಿನಗಳಲ್ಲಿ ಬರದ ತೀವ್ರತೆ ಹೆಚ್ಚಾಗುವ ಸಾಧ್ಯತೆಯಿದ್ದು ಬರ ನಿರ್ವಹಣೆಗೆ ಸಂಬಂಸಿದಂತೆ ಸರಕಾರ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ತಿಳಿಸಿದರು.
ರಾಜ್ಯದಲ್ಲಿನ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಆ ವರ್ಷದಲ್ಲಿ 200 ದಿನ ಉದ್ಯೋಗ ಖಾತ್ರಿ ಯೋಜನೆಯಡಿ ಜನರಿಗೆ ಕೂಲಿ ಕೆಲಸ ನೀಡಬೇಕು. ಬರ ಪರಿಹಾರಕ್ಕೆ ಕೇಂದ್ರ ಸರಕಾರ ಹೆಚ್ಚಿನ ನೆರವು ನೀಡಬೇಕು. ನ.14ರ ಒಳಗಾಗಿ ರಾಜ್ಯದ ಬರ ಸ್ಥಿತಿಯ ಬಗ್ಗೆ ಕೇಂದ್ರಕ್ಕೆ ನಿಖರ ಮಾಹಿತಿ ನೀಡಲಾಗುವುದು. ಅಗತ್ಯವಿರುವೆಡೆ ಗೋಶಾಲೆ ಆರಂಭಿಸಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ
-ಕಾಗೋಡು ತಿಮ್ಮಪ್ಪ, ಸಚಿವ
ಉದ್ಯೋಗ ಖಾತರಿ ಯೋಜನೆಯಡಿ ಈ ವರ್ಷ 6 ಕೋಟಿ ಮಾನವ ದಿನಗಳಿಗೆ ಬಜೆಟ್ ನಿಗದಿಯಾಗಿದ್ದು, ಈಗಾಗಲೇ 5 ಕೋಟಿ ಮಾನವ ದಿನಗಳು ಉಪಯೋಗವಾಗಿದೆ. ಇನ್ನೂ ಹೆಚ್ಚಿಗೆ ಮಾನವ ದಿನಗಳು ಹಾಗೂ ಆರ್ಥಿಕ ನೆರವು ಒದಗಿಸುವಂತೆ ಕೇಂದ್ರಕ್ಕೆ ಸದ್ಯದಲ್ಲೇ ಮನವಿ ಮಾಡಲಾಗುವುದು.
-ಕೃಷ್ಣಭೈರೇಗೌಡ, ಸಚಿವ







