Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಮುಲಾಯಂ ರಾಮಾಯಣ

ಮುಲಾಯಂ ರಾಮಾಯಣ

ವಾರ್ತಾಭಾರತಿವಾರ್ತಾಭಾರತಿ6 Nov 2016 12:07 AM IST
share
ಮುಲಾಯಂ ರಾಮಾಯಣ

ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಕುಟುಂಬ ರಾಮಾಯಣ ಉತ್ತರ ಪ್ರದೇಶದಲ್ಲಿ ಅನಾವರಣಗೊಳ್ಳುತ್ತಿದೆ. ಅವರ ಎರಡನೆ ಪತ್ನಿ ಸಾಧನಾ ಗುಪ್ತ, ಇದೀಗ ಮನೆಯಲ್ಲಿ ಕೈಕೇಯಿ ಅವತಾರ ಎತ್ತಿದ್ದಾರೆ. ರಾಮಾಯಣದಲ್ಲಿ ದಶರಥನ ದ್ವಿತೀಯ ಪತ್ನಿ ಹಾಗೂ ರಾಮನ ಮಲತಾಯಿ ರಾಮನನ್ನು ಹದಿನಾಲ್ಕು ವರ್ಷ ಅಯೋಧ್ಯೆ ಸಾಮ್ರಾಜ್ಯದಿಂದ ಹೊರಗಿಟ್ಟು ಮಗ ಭರತನಿಗೆ ಪಟ್ಟಕಟ್ಟಲು ತಂತ್ರ ಹೂಡಿದ್ದು ಪುರಾಣ. ಕುಟುಂಬ ರಾಜಕೀಯದ ಬಗ್ಗೆ ಇಂಥ ಪುಕಾರು ಹುಟ್ಟಿಕೊಂಡಿರುವ ಬಗ್ಗೆ ಮುಲಾಯಂ ಅವರಿಗೂ ಮಾಹಿತಿ ಸಿಕ್ಕಿದೆ. ಇದಕ್ಕೆ ಪಕ್ಷದ ಸರ್ವೋಚ್ಚ ನಾಯಕ ಪ್ರತಿಕ್ರಿಯಿಸಿದ್ದು, ಕೈಕೇಯಿ ರಾಮನ ಮಲತಾಯಿ ಆಗಿದ್ದ ಕಾರಣ ಆಕೆಯ ಆದೇಶವನ್ನು ಪಾಲಿಸಿ, 14 ವರ್ಷ ವನವಾಸಕ್ಕೆ ಒಪ್ಪಿಕೊಂಡ; ಆದರೆ ಅಖಿಲೇಶ್ ಖಂಡಿತವಾಗಿಯೂ ರಾಮನಲ್ಲ ಎಂಬುದಾಗಿ. ಕಳೆದ ವಾರ ಕುಟುಂಬದಲ್ಲಿ ನಡೆದ ಸಂಧಾನವನ್ನು ನೋಡಿದರೆ, ಯಾದವ ರಾಮಾಯಣದ ಕೊನೆಯ ಅಧ್ಯಾಯ ಹೇಗಿರುತ್ತದೆ ಎಂದು ಕಾದು ನೋಡಬೇಕು!


ರಾಧಾಮೋಹನರ ಜೈವಿಕ ಕೃಷಿ ಪದ್ಧತಿ!
ಕೇಂದ್ರ ಕೃಷಿ ಸಚಿವ ರಾಧಾಮೋಹನ್ ಸಿಂಗ್ ಹಲವು ವರ್ಷಗಳಿಂದ ಬಿಜೆಪಿ ಕಿಸಾನ್ ಮೋರ್ಚಾದಲ್ಲಿದ್ದವರು. ಪುರಾಣ ಹಾಗೂ ಪ್ರಾಚೀನ ಗ್ರಂಥಗಳಲ್ಲಿ ಉಲ್ಲೇಖವಿದ್ದ ಕೃಷಿ ಪದ್ಧತಿಯನ್ನು ಪ್ರತಿಪಾದಿಸುತ್ತಾ ಬಂದವರು. ಆದರೆ ಅದನ್ನು ಅನುಷ್ಠಾನಕ್ಕೆ ತರುವುದು ಹೇಗೆ ಎನ್ನುವುದು ಯಾರಿಗೂ ಗೊತ್ತಿಲ್ಲ. ಈಗಲೂ ಜೈವಿಕ ಕೃಷಿ ಬಗ್ಗೆ ಅವರು ಮಾತನಾಡುತ್ತಾರೆ. ಗಿಡಗಳಿಗೂ ಯೋಗ ಒಳ್ಳೆಯದು ಎನ್ನುವುದು ಅವರ ಪರಿಕಲ್ಪನೆ. ಇದೀಗ ಸಚಿವರು ಪತ್ರಕರ್ತರಿಗೆ ಬೋಧನೆ ನೀಡಲು ಮುಂದಾಗಿದ್ದಾರೆ. ಅಲೋಪತಿ ಔಷಧಗಳ ಮೇಲಿನ ಅವಲಂಬನೆಯನ್ನು ನಿಲ್ಲಿಸಿ, ಪ್ರಾಚೀನ ಗಿಡಮೂಲಿಕೆಗಳನ್ನು ಬೆಳೆದು ಸೇವಿಸುವ ಮಹತ್ವ ಮನವರಿಕೆ ಮಾಡಿಕೊಡುವ ಪ್ರಯತ್ನದಲ್ಲಿದ್ದಾರೆ. ಯಾವುದೇ ರೋಗ ಬಂದರೆ ಅದನ್ನು ಗುಣಪಡಿಸಲು ತುಳಸಿ ಅಥವಾ ಇತರ ಸಸ್ಯಗಳ ಸಾರವನ್ನು ಸೇವಿಸಬೇಕು ಎಂದು ಸಚಿವರು ಸಲಹೆ ನೀಡುತ್ತಾರೆ ಎನ್ನುವುದು ಪತ್ರಕರ್ತರ ಅಂಬೋಣ. ಆದರೆ ವಾಸ್ತವವಾಗಿ ಕೃಷಿಗೆ ಸಂಬಂಧಿಸಿದ ಪ್ರಾಚೀನ ತಂತ್ರ, ಅದರ ಪರಿಣಾಮದ ಬಗ್ಗೆ ಇನ್ನೂ ಸಂಶೋಧನೆ ಮಾತ್ರ ನಡೆದಿಲ್ಲ.


ಬಿಜೆಪಿ ರೀಟಾ ಜಪ...
ಎಚ್.ಎನ್.ಬಹುಗುಣ ಬಿಜೆಪಿಯನ್ನು ಖಂಡತುಂಡವಾಗಿ ವಿರೋಧಿಸುತ್ತಾ ಬಂದವರು. ಎಂಥ ಸಂದಿಗ್ಧ ಪರಿಸ್ಥಿತಿಯಲ್ಲೂ ಅವರು ಬಿಜೆಪಿ ಕಡೆ ಮುಖ ಹಾಕಿ ಮಲಗಿದವರೂ ಅಲ್ಲ. 1984ರಲ್ಲಿ ಅಲಹಾಬಾದ್ ಚುನಾವಣೆಯಲ್ಲಿ ತಮ್ಮ ವಿರುದ್ಧ ಅಮಿತಾಭ್‌ಬಚ್ಚನ್ ಅವರನ್ನು ಕಣಕ್ಕೆ ಇಳಿಸಲು ರಾಜೀವ್‌ಗಾಂಧಿ ನಿರ್ಧರಿಸಿದಾಗಲೂ ಬಿಜೆಪಿಗೆ ಸೇರುವ ಮನಸ್ಸು ಮಾಡಿರಲಿಲ್ಲ. ಆದರೆ ಈ ಪರಂಪರೆ ಉಲ್ಲಂಘಿಸಿ ಅವರ ಪುತ್ರಿ ರೀಟಾ ಬಹುಗುಣ ಬಿಜೆಪಿ ಸಖ್ಯ ಬೆಳೆಸಿದ್ದಾರೆ. ಸಹಜವಾಗಿಯೇ ಬಿಜೆಪಿ ಅವರ ಮೊದಲ ಆಯ್ಕೆಯಲ್ಲ. ಪಕ್ಷದಲ್ಲಿ ಯಾದವೀ ಕಲಹ ತಾರಕಕ್ಕೇರುವ ವರೆಗೂ ಅವರ ದೃಷ್ಟಿ ಇದ್ದುದು ಸಮಾಜವಾದಿ ಪಕ್ಷದ ಮೇಲೆ. ಆದರೆ ಕೇಸರಿ ಪಕ್ಷಕ್ಕೆ ಒಲವು ತೋರಲು ರೀಟಾಗೆ ಅದೊಂದೇ ಕಾರಣವಲ್ಲ. ಲಕ್ನೊ ದಂಡು ಸ್ಥಾನದ ಮೇಲೆ ರೀಟಾ ಕಣ್ಣಿಟ್ಟಿದ್ದಾರೆ. ಆದರೆ ಅದನ್ನು ಬಿಟ್ಟುಕೊಡಲು ಸಮಾಜವಾದಿ ಪಕ್ಷ ಸಿದ್ಧವಿಲ್ಲ. ಏಕೆಂದರೆ ಈಗಾಗಲೇ ಆ ಸ್ಥಾನ ಚೋಟಿ ಬಹೂ (ಮುಲಾಯಂ ಅವರ ಕಿರಿಯ ಮಗ ಪ್ರತೀಕ್ ಯಾದವ್ ಪತ್ನಿ) ಅಪರ್ಣಾಗೆ ಮೀಸಲಿಡಲಾಗಿದೆ. ಬದಲಾಗಿ ಬಿಜೆಪಿ, ಈ ಬ್ರಾಹ್ಮಣ ಅಭ್ಯರ್ಥಿಯನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಬಿಂಬಿಸುವ ಸಾಧ್ಯತೆ ಇದೆ.


ಇದೀಗ ಜೈಪಾಲ್ ರೆಡ್ಡಿ ಸರದಿ
ಆತ್ಮಚರಿತ್ರೆ ಮೂಲಕ ರಹಸ್ಯ ಸ್ಫೋಟಿಸುವ ಸರದಿ ಇದೀಗ ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ ಧುರೀಣ ಜೈಪಾಲ್ ರೆಡ್ಡಿ ಅವರದ್ದು. ಸಹಜವಾಗಿಯೇ ಎಲ್ಲರ ಕಣ್ಣು ಜೈಪಾಲ್ ಮೇಲೆ ನೆಟ್ಟಿದೆ. ಅದರಲ್ಲೂ ಮುಖ್ಯವಾಗಿ ಯುಪಿಎ ಸರಕಾರದ ಎರಡನೆ ಇನಿಂಗ್ಸ್ ನಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವರಾಗಿದ್ದ ಅವರನ್ನು 2012ರಲ್ಲಿ ಹಠಾತ್ತನೆ ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆಗೆ ಎತ್ತಂಗಡಿ ಮಾಡಿದ ಘಟನೆಯನ್ನು ಹೇಗೆ ವಿವರಿಸುತ್ತಾರೆ ಎನ್ನುವುದು ಕುತೂಹಲಕ್ಕೆ ಕಾರಣ. ಭಾರತದ ರಾಜಕೀಯ ಅಖಾಡದಲ್ಲಿ ಸಿದ್ಧಾಂತದ ಪಾತ್ರವನ್ನು ವಿವರಿಸುವ ಇನ್ನೊಂದು ಕೃತಿ ಬರೆಯುವಲ್ಲೂ ರೆಡ್ಡಿ ಮಗ್ನರಾಗಿದ್ದಾರೆ ಎನ್ನಲಾಗಿದೆ. ಆದರೆ ಜನರಿಗೆ ಕುತೂಹಲ ಇರುವುದು ಅವರ ಆತ್ಮಚರಿತ್ರೆಯಲ್ಲಿ. ಇದರಲ್ಲಿ ಯಾವ ಬಾಂಬ್ ಸಿಡಿಯುತ್ತದೆ? ಕಾದು ನೋಡಬೇಕು.


ಸಡಿಲಿಸಿದ ಮೋದಿ ಹಿಡಿತ?
ದೀಪಾವಳಿ ಮುನ್ನಾ ದಿನ ವಿಭಿನ್ನ ಗಾತ್ರದ ಹಾಗೂ ಆಕಾರದ ಪೆಟ್ಟಿಗೆಗಳು, ಹಿರಿಯ ಐಎಎಸ್ ಅಧಿಕಾರಿಗಳು ಹಾಗೂ ಇಲಾಖಾ ಮುಖ್ಯಸ್ಥರ ಕೊಠಡಿಗಳಿಗೆ ರವಾನೆಯಾದವು. ನಾರ್ತ್ ಬ್ಲಾಕ್ ಹಾಗೂ ಸೌತ್ ಬ್ಲಾಕ್‌ನಲ್ಲಿ ಕೂಡಾ ಉಡುಗೊರೆ ಸ್ವೀಕರಿಸಲು ಎರಡೂವರೆ ವರ್ಷದಿಂದ ಇದ್ದ ಹಿಂಜರಿಕೆ ಮಾಯವಾದಂತೆ ಕಂಡುಬರುತ್ತಿತ್ತು. ಖವೂಫ್ ಖತಂ ಹೋ ಗಯಾ ಹೈ (ಭೀತಿ ದೂರವಾಗಿದೆ) ಎಂದು ಅಧಿಕಾರಿಗಳು ಪರಸ್ಪರ ಮಾತನಾಡಿಕೊಳ್ಳುತ್ತಿದ್ದರು ಎನ್ನಲಾಗಿದೆ. ಮೋದಿ ಆಡಳಿತದಲ್ಲಿ ಅಧಿಕಾರಿಗಳು ಕಾರ್ಪೊರೇಟ್ ವಲಯದಿಂದ ಉಡುಗೊರೆಗಳನ್ನು ಪಡೆಯುವ ಬಗ್ಗೆ ನಿರ್ಬಂಧ ಇತ್ತು. ಈ ಸಂಪ್ರದಾಯ ಅಲ್ಪಾಯುಷಿಯೇ ಅಥವಾ ಅಧಿಕಾರಶಾಹಿ ಮೇಲಿನ ಮೋದಿ ಬಿಗಿಹಿಡಿತ ಸಡಿಲವಾಗಿದೆಯೇ ಎಂದು ಕಾದು ನೋಡಬೇಕು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X