ಐಸಿಸ್ ನೆಲೆಗಳ ಮೇಲೆ ಟರ್ಕಿ ದಾಳಿ

ಅಂಕಾರ,ನ.5: ಭೀಕರ ಅಂತರ್ಯುದ್ಧದಿಂದ ತತ್ತರಿಸಿರುವ ಸಿರಿಯದಲ್ಲಿ ಕಳೆದ 24 ತಾಸುಗಳಲ್ಲಿ ಟರ್ಕಿಯ ಮಿಲಿಟರಿ ಪಡೆಗಳು 71 ಐಸಿಸ್ ಬಂಡುಕೋರರ ನೆಲೆಗಳ ಮೇಲೆ ದಾಳಿ ನಡೆಸಿವೆ. ಈ ದಾಳಿಯಲ್ಲಿ ಐವರು ಐಸಿಸ್ ಉಗ್ರರು ಹತರಾಗಿದ್ದಾರೆ. ಜೊತೆಗೆ ಐವರು ಟರ್ಕಿ ಬೆಂಬಲಿತ ಬಂಡುಕೋರರು ಹಾಗೂ ಟರ್ಕಿಯ ಓರ್ವ ಸೈನಿಕ ಸಂಘರ್ಷದಲ್ಲಿ ಮೃತಪಟ್ಟಿದ್ದಾರೆಂದು ಸೇನೆಯು ಹೇಳಿಕೆಯೊಂದರಲ್ಲಿ ತಿಳಿಸಿದೆ.
Next Story





