Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಗಲ್ಫ್
  4. 2.5 ಮಿ.ಡಾ.ಮೌಲ್ಯದ ತಿಮಿಂಗಿಲದ ‘ವಾಂತಿ’...

2.5 ಮಿ.ಡಾ.ಮೌಲ್ಯದ ತಿಮಿಂಗಿಲದ ‘ವಾಂತಿ’ ಪತ್ತೆ

ಓಮಾನಿನ ಮೀನುಗಾರರಿಗೆ ಒಲಿದ ಜಾಕ್‌ಪಾಟ್

ವಾರ್ತಾಭಾರತಿವಾರ್ತಾಭಾರತಿ6 Nov 2016 11:03 AM IST
share
2.5 ಮಿ.ಡಾ.ಮೌಲ್ಯದ ತಿಮಿಂಗಿಲದ ‘ವಾಂತಿ’ ಪತ್ತೆ

ದುಬೈ,ನ.6: ಸಮುದ್ರದಲ್ಲಿ ತೇಲುತ್ತಿದ್ದ ಅಪರೂಪದ, ಸುಮಾರು 80 ಕೆಜಿಗಳಷ್ಟು ತೂಕದ ‘‘ತಿಮಿಂಗಿಲದ ವಾಂತಿ’ ಯನ್ನು ಪತ್ತೆ ಹಚ್ಚಿರುವ ಓಮಾನಿನ ಮೂವರು ಮೀನುಗಾರರಿಗೆ ಭಾರೀ ಜಾಕ್‌ಪಾಟ್ ಹೊಡೆದಿದೆ. ಮಾರುಕಟ್ಟೆಯಲ್ಲಿ ಈ ‘ವಾಂತಿ’ 2.5 ಮಿಲಿಯ ಡಾಲರ್ ಬೆಲೆ ಬಾಳುತ್ತದೆ. ಕಳೆದ ವಾರ ಕುರಾಯತ್ ಪ್ರಾಂತ್ಯದ ಸಮುದ್ರ ತೀರದಲ್ಲಿ ಖಾಲಿದ್ ಅಲ್ ಸಿನಾನಿ ಈ ‘ತೇಲುವ ನಿಧಿ’ ಯನ್ನು ಪತ್ತೆ ಹಚ್ಚಿದ್ದಾನೆ.

ತಿಮಿಂಗಲದ ವಾಂತಿ ಅಥವಾ ಆ್ಯಂಬರ್‌ಗ್ರಿಸ್ ತಿಮಿಂಗಲದ ಕರುಳುಗಳಲ್ಲಿ ಉತ್ಪಾದನೆಯಾಗುವ ಅತ್ಯಂತ ದುಬಾರಿ ಮೇಣವಾಗಿದೆ. ಉಷ್ಣವಲಯದ ಸಮುದ್ರಗಳಲ್ಲಿ ಇದು ತೇಲುತ್ತಿರುತ್ತದೆ ಮತ್ತು ಇದನ್ನು ಸುಗಂಧ ದ್ರವ್ಯ ತಯಾರಿಕೆಯಲ್ಲಿ ಬಳಸಲಾಗುತ್ತದೆ.

ಸುಮಾರು 20 ವರ್ಷಗಳಿಂದ ಮೀನುಗಾರ ವೃತ್ತಿಯಲ್ಲಿರುವ ಖಾಲಿದ್ ಕುಟುಂಬದ ತುತ್ತಿನ ಚೀಲಗಳನ್ನು ತುಂಬಿಸಲೂ ಹೆಣಗಾಡುತ್ತಿದ್ದ. ಒಂದಲ್ಲ ಒಂದು ದಿನ ಸಮುದ್ರ ಲಾಟರಿಯಂತೆ ತಿಮಿಂಗಲದ ವಾಂತಿ ಲಭಿಸಬಹುದೆಂಬ ಆತನ ಬಾಲ್ಯದ ಕನಸು ಈಗ ನನಸಾಗಿದೆ.

ಅ.30ರಂದು ತನ್ನಿಬ್ಬರು ಸ್ನೇಹಿತರೊಂದಿಗೆ ಸಮುದ್ರದ ತೀರದ ಬಳಿ ಮೀನುಗಾರಿಕೆ ಯಲ್ಲಿ ತೊಡಗಿದ್ದ ಖಾಲಿದ್‌ಗೆ ನೀರಿನ ಮೇಲೆ ತೇಲುತ್ತಿದ್ದ ಆ್ಯಂಬರ್‌ಗ್ರಿಸ್ ಕಣ್ಣಿಗೆ ಬಿದ್ದಿತ್ತು. ದುರ್ಗಂಧ ಬೀರುತ್ತಿದ್ದ ಅದನ್ನು ಹಗ್ಗದ ಮೂಲಕ ದೋಣಿಯೊಳಗೆ ಎಳೆದುಕೊಳ್ಳುವಲ್ಲಿ ಅವರು ಸಫಲರಾಗಿದ್ದರು.

ತಿಮಿಂಗಲದ ವಾಂತಿ ಆರಂಭದಲ್ಲಿ ದುರ್ಗಂಧ ಬೀರುತ್ತದೆ, ಆದರೆ ಒಂದೆರಡು ದಿನಗಳ ಬಳಿಕ ಸುಗಂಧ ಬೀರುತ್ತದೆ ಎಂದು ಖಾಲಿದ್ ಕೇಳಿ ತಿಳಿದಿದ್ದ. ಹೀಗಾಗಿ ಸಂತಸದಲ್ಲಿ ತೇಲಾಡುತ್ತಲೇ ಮೂವರು ತಮಗೆ ದೊರಕಿದ ಅಪರೂಪದ ನಿಧಿಯೊಡನೆ ತೀರಕ್ಕೆ ವಾಪಸಾಗಿದ್ದರು.

ತಜ್ಞರು ಅದು ತಿಮಿಂಗಲದ ವಾಂತಿ ಎನ್ನುವುದನ್ನು ದೃಢಪಡಿಸಿದ್ದು, ಖಾಲಿದ್ ಮತ್ತಾತನ ಸಹಚರರು ಮಾರಾಟಕ್ಕೆ ಅನುಕೂಲವಾಗುವಂತೆ ಅದನ್ನು ಒಣಗಿಸಿ ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿದ್ದಾರೆ.

ತಿಮಿಂಗಲದ ವಾಂತಿಗೆ ಯೋಗ್ಯ ಬೆಲೆ ಬರಬಹುದು ಎನ್ನುವುದು ಖಾಲಿದ್‌ನ ನಿರೀಕ್ಷೆ. ಅದು ಮಾರಾಟವಾಗಿ ಹಣ ಕೈಸೇರಿದ ಬಳಿಕ ಮೀನುಗಾರಿಕೆಯನ್ನು ತೊರೆದು ರಿಯಲ್ ಎಸ್ಟೇಟ್ ವೃತ್ತಿಗಿಳಿಯುವ ಲೆಕ್ಕಾಚಾರವನ್ನು ಹಾಕಿಕೊಂಡಿದ್ದಾನೆ. ತಮ್ಮ ಸಂಪತ್ತಿಗೆ ಉತ್ತಮ ಮಾರುಕಟ್ಟೆ ಬೆಲೆ ದೊರೆತರೆ ಖಾಲಿದ್ ಮತ್ತು ಆತನ ಸ್ನೇಹಿತರು ಸುಮಾರು 2,597,099 ಡಾಲರ್(ಭಾರತೀಯ ರೂ.ಅಂದಾಜು 17.35 ಕೋ.ರೂ.)ಗಳನ್ನು ಜೇಬಿಗಿಳಿಸಲಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X